Asianet Suvarna News Asianet Suvarna News

ಹಾಸನ: ಇಂದು ಯಾರ ಕೈ ಹಿಡಿಯಲಿದ್ದಾಳೋ ಅದೃಷ್ಟ ಲಕ್ಷ್ಮೀ?

ಶನಿವಾರ ಹೊರ ಬೀಳಲಿರುವ ಚುನಾವಣಾ ಫಲಿತಾಂಶದತ್ತ ಎಲ್ಲರ ಗಮನವಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ತಮ್ಮದೇ ಗೆಲುವು ಎಂದು ಅಂಕಿ ಅಂಶ ಖರ್ಚಿನ ಲೆಕ್ಕಾಚಾರವನ್ನು ಮುಂದಿಟ್ಟು ಸಾಬೀತುಪಡಿಸಲು ಹೆಣಗಾಡುತ್ತಿದ್ದಾರೆ.

Karnataka assembly electionresult today adrushta Lakshmi, whichever party she chooses rav
Author
First Published May 13, 2023, 3:50 AM IST | Last Updated May 13, 2023, 3:50 AM IST

ಎ. ರಾಘವೇಂದ್ರ ಹೊಳ್ಳ

 ಬೇಲೂರು (ಮೇ.13) : ಶನಿವಾರ ಹೊರ ಬೀಳಲಿರುವ ಚುನಾವಣಾ ಫಲಿತಾಂಶದತ್ತ ಎಲ್ಲರ ಗಮನವಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ತಮ್ಮದೇ ಗೆಲುವು ಎಂದು ಅಂಕಿ ಅಂಶ ಖರ್ಚಿನ ಲೆಕ್ಕಾಚಾರವನ್ನು ಮುಂದಿಟ್ಟು ಸಾಬೀತುಪಡಿಸಲು ಹೆಣಗಾಡುತ್ತಿದ್ದಾರೆ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಗೂ ಈ ಬಾರಿಗೂ ಅಜಗಜಾಂತರ ವ್ಯತ್ಯಾಸವಿದೆ.

ವಿಧಾನಸಭಾ ಚುನಾವಣೆ(Karnataka assembly election 2023) ಯಾವುದೇ ಆಹಿತಕ ಘಟನೆ ನಡೆಯದಂತೆ ಶೇ 81.76 ರಷ್ಟುಮತದಾನ ಶಾಂತಿಯುತವಾಗಿ ನಡೆದಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ 79.92ರಷ್ಟುಮತದಾನ ನಡೆದಿತ್ತು. ಬೇಲೂರು ಕ್ಷೇತ್ರ 1ಲಕ್ಷದ 97 ಸಾವಿರ 691 ಮತದಾರರನ್ನು ಹೊಂದಿದ್ದು, 99504 ಪುರುಷ ಮತದಾರರು ಹಾಗೂ 98183 ಮಹಿಳಾ ಮತದಾರರನ್ನು ಹೊಂದಿದೆ. ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆದಿದೆ.

ಇಂದು ಚುನಾವಣೆ ಫಲಿತಾಂಶ;ಯಾರಿಗೆ ರಾಜ್ಯದ ಗದ್ದುಗೆ?

ತೆನೆ ಹೊರಲು ಸಜ್ಜಾದ ಶಾಸಕ ಕೆ ಎಸ್‌ ಲಿಂಗೇಶ್‌

ಶಾಸಕ ಕೆ ಎಸ್‌ ಲಿಂಗೇಶ್‌(KS Lingesh MLA) ತಾಲೂಕಿಗೆ 1800 ಕೋಟಿ ರೂ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದಾಗಿ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಅಲ್ಲದೆ ರಣಘಟ್ಟಯೋಜನೆ ಹಾಗೂ ಹಳೇಬೀಡು ಮಾದಿಹಳ್ಳಿ ಜಾವಗಲ್‌ ಕೆರೆಗಳಿಗೆ ನೀರು ತುಂಬಿಸುವಲ್ಲಿ ತಮ್ಮ ಜವಾಬ್ದಾರಿ ಇದೆ. ದೇವೇಗೌಡರ ಕುಟುಂಬದ ಮಾತನ್ನು ತಾವು ಎಂದಿಗೂ ಮೀರಿಲ್ಲ ಎನ್ನುವುದರ ಮೂಲಕ ಪಕ್ಷ ನಿಷ್ಠೆಗೆ ಮತ ನೀಡಿ ಎಂದು ಮತ ಯಾಚಿಸಿದ್ದಾರೆ. ವೀರಶೈವ ಸಮುದಾಯ ತಮ್ಮ ಸಹಾಯಕ್ಕೆ ಬರಲಿದೆ ಎಂಬ ನಂಬಿಕೆ ಇವರಿಗೆ ಹೆಚ್ಚಾಗಿದೆ. ಸೌಮ್ಯ ಸ್ವಭಾವದ ರಾಜಕಾರಣಿ ಎಂದೆ ಹೆಸರಾಗಿದ್ದಾರೆ. ಆದರೆ ಕಾರ್ಯಕರ್ತರೊಂದಿಗೆ ಬೆರೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಚುನಾವಣೆಯಲ್ಲಿ ಇವರಿಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳದಿರುವುದೇ ಹಿನ್ನಡೆಯಾಗುವ ಸಂಭವ ಇದೆ ಎನ್ನಲಾಗುತ್ತಿದೆ. ಅಲ್ಲದೆ ಬಗರ್‌ ಹುಕುಂ ವಿಚಾರದಲ್ಲಿ ರಾಜ್ಯಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕೂಡ ಬೇಲೂರಿಗೆ ಬಂದು ಲಿಂಗೇಶ್ವರ ಬ್ಯಾಟಿಂಗ್‌ ಮಾಡಿದ್ದು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂದು ಫಲಿತಾಂಶ ನಿರ್ಧರಿಸುತ್ತದೆ.

ಹುಲ್ಲಹಳ್ಳಿ ಸುರೇಶ್‌ ಕಮಲ ಅರಳಿಸುವರೇ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಿದ್ದರೂ ಪರಾಜಿತಗೊಂಡಿದ್ದ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್‌(Hubballi suresh BJP candidate) ಮತ್ತೆ ಈ ಬಾರಿ ತಮ್ಮ ಅದೃಷ್ಟಪರೀಕ್ಷೆಗೆ ಕಣಕ್ಕಿಳಿದಿದ್ದಾರೆ. ಚುನಾವಣೆಯಲ್ಲಿ ಸೋತರೂ ಎದೆಗುಂದದೆ ಕಳೆದ ಐದು ವರ್ಷಗಳಿಂದ ತಾಲೂಕಿನ ಪ್ರತಿ ಗ್ರಾಮದ ಕಾರ್ಯಕರ್ತರೊಂದಿಗೆ ಒಡನಾಟ ಇಟ್ಟುಕೊಂಡು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪ್ರತಿ ಮನೆಮನೆಗೂ ತೆರಳಿ ಕಷ್ಟಸುಖಗಳಿಗೆ ನೆರವಾಗಿದ್ದಾರೆ ಎಂಬುದು ಇವರ ಪ್ಲಸ್‌ ಪಾಯಿಂಟ್‌. ಆದರೆ ಇವರ ಗೆಲುವಿಗೆ ಲಿಂಗಾಯಿತ ವೀರಶೈವ ಸಮುದಾಯದ ಮತ ಪ್ರಮುಖವಾಗಿದೆ. ಹಳೇಬೀಡು ಜಾವಗಲ್‌ ವ್ಯಾಪ್ತಿಯಲ್ಲಿ ವೀರಶೈವರ ಸಂಖ್ಯೆ ಹೆಚ್ಚಾಗಿದೆ. ವೀರಶೈವರ ನಡೆ ಎತ್ತ ಕಡೆ ಎಂಬುವುದು ಕುತೂಹಲಕಾರಿಯಾಗಿದೆ. ಈ ಬಾರಿ ಪ್ರಧಾನ ಮಂತ್ರಿ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಭಾಷಣ ಮಾಡಿರುವುದು ಇವರಿಗೆ ವರವಾಗಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ. ಆದರೆ ಚುನಾವಣಾ ಸಂದರ್ಭದಲ್ಲಿ ತಮ್ಮೊಡನೆ ನಂಬಿಕೆ ಇಟ್ಟು ಕೆಲಸ ಮಾಡಿದ ಕೆಲವರನ್ನು ದೂರ ಇಡುತ್ತಾರೆ ಎಂಬುದರ ಬಗ್ಗೆ ಅಸಮಾಧಾನವಿದೆ. ಇದೆಲ್ಲರ ನಡುವೆ ಈ ಬಾರಿಯ ಚುನಾವಣೆಯಲ್ಲಿ ಚಾಣಕ್ಯ ತಂತ್ರಗಾರಿಕೆ ನಡೆಸಿ ಮತದಾರರ ಮನ ಗೆಲುವಲ್ಲಿ ಸಫಲರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಬಿ ಶಿವರಾಂಗೆ ಅದೃಷ್ಟಕೈ ಹಿಡಿಯುವುದೇ?

ಕಾಂಗ್ರೆಸ್‌ ಅಭ್ಯರ್ಥಿ ಬಿ ಶಿವರಾಂ(B Shivaram Congress candidate) ಕಳೆದ ಹತ್ತಾರು ವರ್ಷಗಳಿಂದ ಬೇಲೂರು ತಾಲೂಕಿನಲ್ಲಿ ಬೇರು ಬಿಟ್ಟು ತಮ್ಮದೇ ಆದ ಕಾರ್ಯಕರ್ತರ ಒಲವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅ​ಕಾರ ಇಲ್ಲದಿದ್ದರೂ ಸರ್ಕಾರ ಮಟ್ಟದಲ್ಲಿ ಕಾರ್ಯಕರ್ತರ ಕೆಲಸಗಳನ್ನು ಮಾಡಿಕೊಟ್ಟಹೆಗ್ಗಳಿಕೆ ಇವರಿಗಿದೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಎಸ್‌ಸಿ ಎಸ್‌ಟಿ ಹಾಗೂ ಮುಸ್ಲಿಂ ಸಮುದಾಯದ ಮತಗಳೇ ಆಧಾರ ಸ್ತಂಭವಾಗಿವೆ. ಈಗಲೂ ಕೂಡ ಅದೇ ನಂಬಿಕೆಯಲ್ಲಿ ಇವರ ಬೆಂಬಲಿಗರು ಎಸ್‌ಸಿ, ಎಸ್‌ಟಿ ಹಾಗೂ ಮುಸ್ಲಿಂ ಸಮುದಾಯ ಇರುವ ಕಡೆ ಹೆಚ್ಚಾಗಿ ಗಮನ ಹರಿಸಿದ್ದಾರೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಕಡೆ ಹೆಚ್ಚಿನ ಹೊಲವನ್ನು ತೋರಿಸಿದ್ದು, ಇತರೆ ಜನಾಂಗವನ್ನು ಅಷ್ಟಾಗಿ ಪರಿಗಣಿಸಿಲ್ಲ ಎನ್ನುವುದು ಇವರ ಮೈನಸ್‌ ಪಾಯಿಂಟ್‌. ಅಲ್ಲದೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರದಲ್ಲಿ ಏಕೆ ತೊಡಗಿಸಿಕೊಂಡಿಲ್ಲ ಎಂದು ಕೆಲವು ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನ ಎಚ್ಡಿ ದೇವೇಗೌಡ ದೇಗುಲಕ್ಕೆ

ಈ ಹಿಂದಿನ ಚುನಾವಣೆಗಳಲ್ಲಿ ಪ್ರಮುಖ ಪಕ್ಷದ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಬೆಟ್ಟಿಂಗ್‌ ಕಟ್ಟುತ್ತಿದ್ದರು. ಆದರೆ ಈ ಬಾರಿ ತಮ್ಮದೇ ಗೆಲುವು ಎಂದು ಎದೆ ತಟ್ಟಿಹೇಳುವ ಧೈರ್ಯವನ್ನು ಯಾವ ಪಕ್ಷದ ಮುಖಂಡರೂ ತೋರುತ್ತಿಲ್ಲ. ತಾಲೂಕಿನ ಮತದಾರರು ಕೂಡ ತಾವು ಇಂತಹ ಪಕ್ಷಕ್ಕೆ ಮತ ಹಾಕಿದ್ದೇವೆ ಎಂದು ಎಲ್ಲೂ ಹೇಳುತ್ತಿಲ್ಲ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸುತ್ತಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ವಿಜಯಮಾಲೆ ಯಾರ ಕೊರಳಿಗೆ ಎಂಬ ಕುತೂಹಲಕ್ಕೆ ಅಭ್ಯರ್ಥಿಯ ವಿಜಯದ ಘೋಷಣೆಯೊಂದಿಗೆ ತೆರೆ ಬೀಳಲಿದೆ.

Latest Videos
Follow Us:
Download App:
  • android
  • ios