Asianet Suvarna News Asianet Suvarna News

Karnataka assembly election: ಇಂದು ಚುನಾವಣೆ ಫಲಿತಾಂಶ;ಯಾರಿಗೆ ರಾಜ್ಯದ ಗದ್ದುಗೆ?

ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದ್ದು, ಮತಗಟ್ಟೆಸಮೀಕ್ಷೆ ಅನುಸಾರ ಅತಂತ್ರ ಫಲಿತಾಂಶ ಹೊರಬೀಳಲಿದೆಯೋ ಅಥವಾ ಒಂದು ಪಕ್ಷಕ್ಕೆ ಸರಳ ಬಹುಮತ ಸಿಗಲಿದೆಯೋ ಎಂಬ ಕುತೂಹಲ ಮೂಡಿದೆ.

Karnataka assembly election result today Which party will come to power rav
Author
First Published May 13, 2023, 3:29 AM IST

ಬೆಂಗಳೂರು ಮೇ(.13) : ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದ್ದು, ಮತಗಟ್ಟೆಸಮೀಕ್ಷೆ ಅನುಸಾರ ಅತಂತ್ರ ಫಲಿತಾಂಶ ಹೊರಬೀಳಲಿದೆಯೋ ಅಥವಾ ಒಂದು ಪಕ್ಷಕ್ಕೆ ಸರಳ ಬಹುಮತ ಸಿಗಲಿದೆಯೋ ಎಂಬ ಕುತೂಹಲ ಮೂಡಿದೆ.

ಚುನಾವಣಾ ಅಖಾಡ(Assembly election contest)ದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ. ಈ ಸಂಬಂಧ 34 ಚುನಾವಣಾ ಜಿಲ್ಲಾ ಕೇಂದ್ರದಲ್ಲಿ 36 ಮತ ಎಣಿಕೆ ಕೇಂದ್ರಗಳನ್ನು ತೆರೆದಿದ್ದು, ಚುನಾವಣಾ ಆಯೋಗವು ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಮತ ಎಣಿಕೆಯ ಕೇಂದ್ರದ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನ ಎಚ್ಡಿ ದೇವೇಗೌಡ ದೇಗುಲಕ್ಕೆ...

ಬುಧವಾರ ಮತದಾನ ನಡೆದಿದ್ದು, ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ವಿವಿಧ ಪಕ್ಷಗಳ ರಾಜಕೀಯ ನಾಯಕರು ಹಾಗೂ ಅಭ್ಯರ್ಥಿಗಳು ಚಡಪಡಿಕೆಯಲ್ಲಿಯೇ ಕಾಲ ಕಳೆದಿದ್ದಾರೆ. ಹಲವರು ದೇವರ ಮೊರೆ ಹೋಗಿದ್ದರೆ, ಇನ್ನು ಕೆಲವರು ವಿಶ್ರಾಂತಿ ಪಡೆದಿದ್ದಾರೆ. ಆದರೆ, ಎಲ್ಲಿದ್ದರೂ ಫಲಿತಾಂಶದ ಒತ್ತಡ, ಉದ್ವೇಗಕ್ಕೆ ಮಾತ್ರ ತಡೆ ಇರಲಿಲ್ಲ.

ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮೊದಲು ಸೇವಾ ಮತದಾನದ ಮತ ಎಣಿಕೆ ನಡೆಯಲಿದ್ದು, ನಂತರ ಮತಯಂತ್ರಗಳ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 16ನೇ ವಿಧಾನಸಭೆಗೆ ಜನಪ್ರತಿನಿಧಿಗಳ ಆಯ್ಕೆ ಸಂಬಂಧ ಮತದಾರರು ಗುರುವಾರ ಮುದ್ರೆ ಒತ್ತಿದ್ದಾರೆ. ಮತ ಚಲಾಯಿಸಿರುವ ಇವಿಎಂಗಳನ್ನು ಪೊಲೀಸ್‌ ಕಣ್ಗಾವಲಿನಲ್ಲಿ ಭದ್ರತೆಯ ಕೊಠಡಿಯಲ್ಲಿಡಲಾಗಿದೆ. ಶನಿವಾರ ಬೆಳಗ್ಗೆ ಭದ್ರತೆ ಕೊಠಡಿಯಿಂದ ಮತ ಎಣಿಕೆ ಕೇಂದ್ರಕ್ಕೆ ತರಲಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಚುನಾವಣಾ ಆಯೋಗವು ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಈ ಬಾರಿ ಚುನಾವಣಾ ಆಯೋಗವು 80 ವರ್ಷ ವಯಸ್ಸು ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅನುಕೂಲತೆ ಕಲ್ಪಿಸಿತ್ತು. ಇವರಿಗೆ ಮೇ 10ಕ್ಕಿಂತ ಮೊದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ರಾಜ್ಯಾದ್ಯಂತ ಒಟ್ಟು 94,931 ಮಂದಿ ಮನೆಯಿಂದಲೇ ಮತದಾನ ಮಾಡಿದ್ದರು. ಅವರ ಮತಗಳನ್ನೂ ಶನಿವಾರ ಎಣಿಕೆ ಮಾಡಬೇಕಾಗುವುದರಿಂದ ಕೆಲ ನಿಮಿಷಗಳ ಕಾಲ ಫಲಿತಾಂಶದಲ್ಲಿ ವಿಳಂಬವಾಗಬಹುದು ಎನ್ನಲಾಗುತ್ತಿದೆ.

34 ಚುನಾವಣಾ ಜಿಲ್ಲಾ ಕೇಂದ್ರದಲ್ಲಿ 36 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಗಾಗಿ 306 ವಿಶಾಲವಾದ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, 4,256 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ಜರುಗಲಿದೆ. ಮತ ಎಣಿಕೆ ಕಾರ್ಯಕ್ಕಾಗಿ 224 ರಿಟರ್ನಿಂಗ್‌ ಅಧಿಕಾರಿಗಳು, 317 ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 4256 ಮತ ಎಣಿಕೆ ಮೇಲುಸ್ತುವಾರಿ ಅಧಿಕಾರಿಗಳು, 4256 ಸಹಾಯಕರು ಮತ್ತು 4,256 ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಇವರ ಜತೆಗೆ 450 ಹೆಚ್ಚುವರಿ ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳು ಸಹ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವೆಬ್‌ಸೈಟಲ್ಲೂ ಫಲಿತಾಂಶ ಪ್ರಕಟ

ವಿಧಾನಸಭಾ ಚುನಾವಣೆಯ ಫಲಿತಾಂಶ(Karnataka assembly election results) ಶನಿವಾರ ಪ್ರಕಟವಾಗಲಿದ್ದು, ಮುಖ್ಯಚುನಾವಣಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲಿಯೂ ವೀಕ್ಷಿಸಬಹುದು. hಠಿಠಿps://್ಚಛಿಟka್ಟ್ಞaಠಿaka.ಜಟv.ಜ್ಞಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಇದಲ್ಲದೇ, hಠಿಠಿps://್ಟಛಿs್ಠ್ಝಠಿs.ಛ್ಚಿಜಿ.ಜಟv.ಜ್ಞಿ ನಲ್ಲಿಯೂ ಫಲಿತಾಂಶವನ್ನು ನೋಡಬಹುದಾಗಿದೆ. ಇದರ ಜತೆಗೆ ವೋಟ್‌ ಹೆಲ್ಪ್‌ಲೈನ್‌ ಮೊಬೈಲ್‌ ಆಪ್ಲಿಕೇಷನ್‌ನಲ್ಲಿಯೂ ಫಲಿತಾಂಶ ಲಭ್ಯವಾಗಲಿದೆ

ಮತ ಎಣಿಕೆ ನಡೆಯುವ ಸ್ಥಳಗಳು

ಬೆಳಗಾವಿ ಜಿಲ್ಲೆ-ಆರ್‌ಪಿಡಿ ಕಾಲೇಜು, ಬಾಗಲಕೋಟೆ-ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ವಿಜಯಪುರ-ಸೈನಿಕ ಶಾಲೆ ಆವರಣ, ಯಾದಗಿರಿ-ಸರ್ಕಾರಿ ಪಿಯು ಕಾಲೇಜು, ಕಲಬುರಗಿ-ಗುಲ್ಬರ್ಗಾ ವಿಶ್ವವಿದ್ಯಾಲಯ, ಬೀದರ್‌ ಬಿವಿಬಿ ಕಾಲೇಜು, ರಾಯಚೂರು-ಎಸ್‌ಆರ್‌ಬಿಪಿಎಸ್‌ ಪಿಯು ಕಾಲೇಜು, ಕೊಪ್ಪಳ- ಶ್ರೀ ಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಗದಗ-ಶ್ರೀ ಜಗದ್ಗುರು ತೋಟದಾರ್ಯ ಎಂಜಿನಿಯರಿಂಗ್‌ ಕಾಲೇಜು, ಧಾರವಾಡ-ಕೃಷಿ ವಿಜ್ಞಾನ ವಿಶ್ವವಿದ್ಯಾಲಯ.

ಉತ್ತರ ಕನ್ನಡ ಜಿಲ್ಲೆ- ಡಾ.ಎ.ವಿ.ಬಾಳಿಗ ಕಲೆ ಮತ್ತು ವಿಜ್ಞಾನ ಕಾಲೇಜು ಕುಮಟಾ, ಹಾವೇರಿ-ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ವಿಜಯನಗರ-ಪ್ರೌಢÜದೇವರಾಯ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಹೊಸಪೇಟೆ, ಬಳ್ಳಾರಿ-ರಾವ್‌ಬಹದ್ದೂರ್‌ ವೈ. ಮಹಬಲೇಶ್ವರಪ್ಪ ಎಂಜಿನಿಯರ್‌ ಕಾಲೇಜು, ಚಿತ್ರದುರ್ಗ-ಸರ್ಕಾರಿ ವಿಜ್ಞಾನ ಕಾಲೇಜು, ದಾವಣಗೆರೆ- ಶಿವಗಂಗೋತ್ರಿ, ದಾವಣಗೆರೆ ವಿಶ್ವವಿದ್ಯಾಲಯ.

ಶಿವಮೊಗ್ಗ ಜಿಲ್ಲೆ -ಸಹ್ಯಾದ್ರಿ ಕಲಾ ಕಾಲೇಜು. ಉಡುಪಿ-ಸೆಂಟ್‌ ಸೆಸಿಲೀಯಾಸ್‌ ಸಮೂಹ ಸಂಸ್ಥೆ, ಬ್ರಹ್ಮಗಿರಿ, ಚಿಕ್ಕಮಗಳೂರು-ಐಡಿಎಸ್‌ಜಿ ಸರ್ಕಾರಿ ಕಾಲೇಜು, ತುಮಕೂರು-ಸರ್ಕಾರಿ ಪಾಲಿಟೆಕ್ನಿಕ್‌, ತುಮಕೂರು ವಿಜ್ಞಾನ ವಿಶ್ವವಿದ್ಯಾಲಯ ಮತ್ತು ತುಮಕೂರು ಕಲಾ ವಿಶ್ವವಿದ್ಯಾಲಯ, ಚಿಕ್ಕಬಳ್ಳಾಪುರ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರ-ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು.

ಬಿಬಿಎಂಪಿ ಕೇಂದ್ರ- ಬಿಎಂಎಸ್‌ ಮಹಿಳಾ ಕಾಲೇಜು, ಬಸವನಗುಡಿ, ಬಿಬಿಎಂಪಿ ಉತ್ತರ-ಮೌಂಟ್‌ ಕಾರ್ಮೆಲ್‌ ಕಾಲೇಜು, ಬಿಬಿಎಂಪಿ ದಕ್ಷಿಣ- ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು ಜಯನಗರ, ಬೆಂಗಳೂರು ನಗರ- ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆ-ದೇವನಹಳ್ಳಿಯ ಅಕಾಶ್‌ ಇಂಟರ್‌ನ್ಯಾಷನಲ್‌ ಶಾಲೆ, ರಾಮನಗರ- ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು.

arnataka assembly election: ಪಕ್ಷೇತರರ ಸೆಳೆಯಲು ಡಿಕೆಶಿ, ಸಿದ್ದರಾಮಯ್ಯ, ಸಿಎಂ ಯತ್ನ

ಮಂಡ್ಯ ಜಿಲ್ಲೆ-ಮಂಡ್ಯ ವಿಶ್ವವಿದ್ಯಾಲಯ, ದಕ್ಷಿಣ ಕನ್ನಡ-ನ್ಯಾಷನಲ್‌ ಇನ್ಸ್‌ಟ್ಯೂಟ್‌ ಆಫ್‌ ಟೆಕ್ನಾಲಜಿ, ಸುರತ್ಕಲ್‌, ಕೊಡಗು-ಸೆಂಟ್‌ ಜೋಸೆಫ್‌ ಕಾನ್ವೆಂಟ್‌, ಮೈಸೂರು-ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು, ಚಾಮರಾಜನಗರ- ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು

Follow Us:
Download App:
  • android
  • ios