ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಡೇಟ್‌ ಫಿಕ್ಸ್‌: ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ

ಚುನಾವಣಾ ಆಯೋಗ ಇಂದು ಬೆಳಗ್ಗೆ 11. 30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟ ಮಾಡಲಿದೆ.

karnataka assembly election date to announce today election commission press meet at 11 30 am ash

ಬೆಂಗಳೂರು (ಮಾರ್ಚ್‌ 29, 2023): ಕರ್ನಾಟಕ ವಿಧಾನಸಭೆ ಚುನಾವಣೆಗೆ ಏಪ್ರಿಲ್‌ ಮೊದಲ ವಾರದಲ್ಲಿ ದಿನಾಂಕ ಪ್ರಕಟ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಇಂದೇ (ಮಾರ್ಚ್‌ 29, 2023) ರಂದೇ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ ಆಗಲಿದೆ. ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಲಿದ್ದು, ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲಿದೆ.

ಹೌದು, ಚುನಾವಣಾ ಆಯೋಗ ಇಂದು ಬೆಳಗ್ಗೆ 11. 30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟ ಮಾಡಲಿದೆ. ಇಂದು ವಿಧಾನಸಭೆ ಚುನಾವಣೆಯ ಡೇಟ್‌ ಫಿಕ್ಸ್‌ ಆಗುತ್ತೆ ಅಂದ್ರೆ ನೀತಿ ಸಂಹಿತೆ ಸಹ ಇಂದಿನಿಂದಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಆಯೋಗ ಇಂದೇ ದಿನಾಂಕ ಘೋಷಣೆ ಮಾಡಿದೆ.


 

ದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11.30 ಕ್ಕೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದೆ. ರಾಜ್ಯ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯುತ್ತದೋ ಅಥವಾ ಎರಡು ಹಂತದಲ್ಲಿ ನಡೆಯುತ್ತದೋ ಎಂಬುದು ಸಹ ಇಂದೇ ನಿರ್ಧಾರವಾಗಲಿದೆ. 

karnataka assembly election date to announce today election commission press meet at 11 30 am ash ಕೇಂದ್ರ ಚುನಾವಣಾ ಆಯೋಗ ರಾಷ್ಟ್ರ ರಾಜಧಾನಿ

ಇದನ್ನು ಓದಿ: ಮತದಾರರಿಗೆ ಆಮಿಷವೊಡ್ಡಿದರೆ ತಕ್ಷಣದಿಂದಲೇ ಕ್ರಮ: ರಾಜೀವ್‌ ಕುಮಾರ್‌

ರಾಜ್ಯದಲ್ಲಿನ ಚುನಾವಣಾ ಸಿದ್ಧತೆ ಕುರಿತು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಪೂರ್ವಭಾವಿ ಪರಿಶೀಲನೆ ನಡೆಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮತ್ತವರ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದು, ಚುನಾವಣಾ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದೆ. ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು, ಮಂಗಳವಾರ (ಮಾರ್ಚ್‌ 28) ಚುನಾವಣಾ ದಿನಾಂಕ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಘೋಷಣೆಯಾಗಿಲ್ಲ. ಹೀಗಾಗಿ, ಏಪ್ರಿಲ್‌ ಮೊದಲ ವಾರ ಅಂದರೆ, ಏಪ್ರಿಲ್‌ 3 ಅಥವಾ 4ರಂದು ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದವು. ಈ ಮಧ್ಯೆ, ಏಪ್ರಿಲ್‌ 4ರಂದು ಮಹಾವೀರ ಜಯಂತಿ ಇದ್ದು, ಅಂದು ಸಾರ್ವತ್ರಿಕ ರಜಾ ದಿನವಾಗಿದೆ ಎಂದು ಹೇಳಲಾಗಿತ್ತು. ಆದರೆ, ಇಂದೇ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ ಆಗಲಿದೆ. 

ಇದನ್ನೂ ಓದಿ: Karnataka election 2023: ರಾಜ್ಯದಲ್ಲಿದ್ದಾರೆ ಕ್ರಿಮಿನಲ್‌ ಹಿನ್ನೆಲೆಯ 76 ಶಾಸಕರು!

Latest Videos
Follow Us:
Download App:
  • android
  • ios