Asianet Suvarna News Asianet Suvarna News

ಮತ್ತೆ ಕಾಂಗ್ರೆಸ್‌ ಕದ ತಟ್ಟಿದರೆ ಮರ್ಯಾದೆಗೇಡು: ಸಿ.ಟಿ.ರವಿ

ಕಾಂಗ್ರೆಸ್‌ ಸೇರುವವರನ್ನು ಅವರು ಮರ್ಯಾದೆ ಕೊಟ್ಟು ಕರೆಸಿಕೊಳ್ಳುತ್ತಿಲ್ಲ. ಬಂದವರೆಲ್ಲ ಲಾಸ್ಟ್‌ ಬೆಂಚ್‌ ಅಂತ ಅವರೇ ಹೇಳಿದ್ದಾರೆ. ಹಾಗಾಗಿ ಮರ್ಯಾದೆ ಇರೋರಾರ‍ಯರೂ ಕಾಂಗ್ರೆಸ್‌ ಸೇರುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. 

Ex Mla CT Ravi Slams On Congress Govt At Mandya gvd
Author
First Published Aug 23, 2023, 8:49 AM IST | Last Updated Aug 23, 2023, 8:49 AM IST

ಮಂಡ್ಯ (ಆ.23): ಕಾಂಗ್ರೆಸ್‌ ಸೇರುವವರನ್ನು ಅವರು ಮರ್ಯಾದೆ ಕೊಟ್ಟು ಕರೆಸಿಕೊಳ್ಳುತ್ತಿಲ್ಲ. ಬಂದವರೆಲ್ಲ ಲಾಸ್ಟ್‌ ಬೆಂಚ್‌ ಅಂತ ಅವರೇ ಹೇಳಿದ್ದಾರೆ. ಹಾಗಾಗಿ ಮರ್ಯಾದೆ ಇರೋರಾರ‍ಯರೂ ಕಾಂಗ್ರೆಸ್‌ ಸೇರುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹೋಗುವವರಿಗೆ ನಾನೇನೂ ಹೇಳಲಾರೆ. ಅವರು ಯಾವ ಭಯಕ್ಕೆ ಹೋಗುತ್ತಿದ್ದಾರೋ ಗೊತ್ತಿಲ್ಲ. ಈಗ ಹೋದರೆ ಅವರಿಗೂ ಮರ್ಯಾದೆ ಸಿಗುವುದಿಲ್ಲ ಎಂದರು. ಇನ್ನು, ಪಕ್ಷ ಬಿಡುತ್ತಿರುವವರ ಬಗ್ಗೆ ವದಂತಿಗಳು ಹರಡುತ್ತಿವೆ. ನಾನು ಮುನಿರತ್ನ, ಡಿ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌ ಜೊತೆ ಮಾತನಾಡಿದ್ದೇನೆ. 

ಈ ಪೈಕಿ ಸೋಮಶೇಖರ್‌ ಅವರನ್ನು ಕಾಂಗ್ರೆಸ್‌ನವರು ಸಂಪರ್ಕಿಸಿರುವುದು ನಿಜ. ಈ ವದಂತಿ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಯಾರೂ ಕಾಂಗ್ರೆಸ್‌ ಸೇರುತ್ತಿಲ್ಲ ಎಂದು ಹೇಳಿದರು. ಹಿಂದೆ ನಮ್ಮಪ್ಪ ನನ್ನನ್ನು ದೇವೇಗೌಡರ ಪಾರ್ಟಿ ಸೇರಿಕೋ ಎಂದಿದ್ದರು. ಆದರೆ, ನಾವು ಯಡಿಯೂರಪ್ಪನ ಹೋರಾಟ ನೋಡಿ ಪಕ್ಷಕ್ಕೆ ಬಂದವರು. ಅವರ ಜೊತೆಗೇ ಪಕ್ಷ ಕಟ್ಟಿದ್ದೇವೆ. ಮುಂದೆಯೂ ಪಕ್ಷ ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು. ಇನ್ನು, ಬಿಜೆಪಿಗೆ ನಾಯಕತ್ವದ ಕೊರತೆಯಿದೆ ಎಂಬ ಕಾಂಗ್ರೆಸ್‌ ಹೇಳಿಕೆಗೆ, ಸನ್ನಿವೇಶವನ್ನು ಎದುರಿಸಿ ನಿಲ್ಲುವುದು ನಾಯಕತ್ವ . ಅದು ಅಧಿಕಾರ ಹಸ್ತಾಂತರಿಸಿದಂತಲ್ಲ ಎಂದು ವ್ಯಾಖ್ಯಾನಿಸಿದರು.

ಸಾಲು- ಸಾಲು ರಜೆಗಳು ಹಿನ್ನೆಲೆ: ಮಂತ್ರಾಲಯದ ರಾಯರ ಮಠಕ್ಕೆ ಮತ್ತೆ ಹರಿದುಬಂತು ಕೋಟಿ ಗಟ್ಟಲೆ ಕಾಣಿಕೆ

ಸ್ಟಾಲಿನ್‌ ಸ್ನೇಹಕ್ಕೆ ಕರ್ನಾಟಕ ಬಲಿ: ಇಂಡಿಯಾ ಒಕ್ಕೂಟಕ್ಕೋಸ್ಕರ ನೀವು ನೀರು ಬಿಟ್ಟಿದ್ದೀರಿ. ಸ್ಟಾಲಿನ್‌ ಸ್ನೇಹಕ್ಕಾಗಿ ಕರ್ನಾಟಕವನ್ನು ಬಲಿಕೊಟ್ಟಿದ್ದೀರಿ. ನೀವು ರಾಜಕೀಯ ಲಾಭ ಪಡೆಯಲು ಜನರಿಗೆ ಶಾಪವಾಗಿ ಪರಿಣಮಿಸಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದರು. ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿದ್ದಾರೆ. ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ಮಾಡಿರುವ ಪಾಪಕ್ಕೆ ಸೀಲ್‌ ಹಾಕಿಸಿಕೊಳ್ಳಲು ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ತಮಿಳುನಾಡಿಗೆ ನೀರೆಲ್ಲವನ್ನೂ ಬಿಟ್ಟಮೇಲೆ ಈಗ ಸಭೆ ಮಾಡಿದರೆ ಏನು ಪ್ರಯೋಜನ. ನೀರು ಬಿಡುವ ಮೊದಲೇ ಸಭೆ ಮಾಡಬೇಕಿತ್ತು. ಇದು ಕಾಂಗ್ರೆಸ್‌ ಕರ್ನಾಟಕಕ್ಕೆ ಮಾಡಿರುವ ದೊಡ್ಡ ಅನ್ಯಾಯ ಎಂದು ದೂಷಿಸಿದರು.

ಕಾಂಗ್ರೆಸ್‌ ಕಾಲ್ಗುಣ ಸರಿಯಾಗಿಲ್ಲ: ಕಾಂಗ್ರೆಸ್‌ ಕಾಲ್ಗುಣದ ಪರಿಣಾಮ ರಾಜ್ಯದಲ್ಲಿ ಮಳೆ ಆಗುತ್ತಿಲ್ಲ. ಅದು ಕಾಕತಾಳಿಯವೋ ಅಥವಾ ಪ್ರಕೃತಿ ನಿಯಮವೋ ಗೊತ್ತಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲಾ ಮಳೆ ಬರುವುದಿಲ್ಲ. ಮೊದಲೇ ಇವರಿಗೆ ದೇವರ ಮೇಲೆ ನಂಬಿಕೆ ಇಲ್ಲ. ಅಂದಮೇಲೆ ದೇವರು ಹೇಗೆ ಮಳೆ ಬೆಳೆ ಕೊಡುತ್ತಾನೆ. ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ. ದೇವರ ಮೇಲೆ ಭಯ-ಭಕ್ತಿ ಇಲ್ಲದ ಇವರ ಕಾಲ್ಗುಣ ಇದು ಎಂದು ಜರಿದರು.

ಎನ್‌ಇಪಿ ರದ್ದು: ಡಿಕೆಶಿಗೆ 8 ಪ್ರಶ್ನೆ ಕೇಳಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಾಗಿ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮೇ ಎಂದೆಲ್ಲಾ ಜಾರಿಗೊಳಿಸಿದ್ದಾರೆ. ವಾಸ್ತವದಲ್ಲಿ ರಾಜ್ಯಕ್ಕೆ ವಿದ್ಯುತ್‌ ಪೂರೈಕೆಯೇ ಆಗುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ರಾಜ್ಯ ಕತ್ತಲಲ್ಲಿ ಮುಳುಗಿದೆ. ರಾಜ್ಯಕ್ಕೆ 15-16 ಸಾವಿರ ಮೆಗಾವ್ಯಾಟ್‌ ಪವರ್‌ ಬೇಕು. ಆದರೆ, ಬೇಡಿಕೆಯಷ್ಟುವಿದ್ಯುತ್‌ ಇಲ್ಲಿ ಉತ್ಪಾದನೆಯೇ ಆಗುತ್ತಿಲ್ಲ. ಕೇವಲ 8 ರಿಂದ 9 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಹಾಗಾಗಿ ಉಚಿತ ಕರೆಂಟ್‌ ಎನ್ನುವುದೇ ಹಾಸ್ಯಾಸ್ಪದ. ಮೊದಲು ವಿದ್ಯುತ್‌ ಉತ್ಪಾದನೆ ಮಾಡಿ, ಬಳಿಕ ಉಚಿತ ವಿದ್ಯುತ್‌ ಕೊಡಿ ಎಂದರು.

Latest Videos
Follow Us:
Download App:
  • android
  • ios