ವಿಜಯಪುರ, ಬೆಂ.ಗ್ರಾಮೀಣದಲ್ಲಿ 100%: ಸುಧಾಕರ್ 18 ವರ್ಷ ಮೇಲ್ಪಟ್ಟವರ ಮೊದಲ ಡೋಸ್ ವಿತರಣೆಯು ಶೇ.100 ಸತತ 2 ದಿನ ಲಕ್ಷಕ್ಕಿಂತ ಕಮ್ಮಿ ಕೇಸ್
ಬೆಂಗಳೂರು(ಫೆ.09): ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಶೇ.90ರಷ್ಟುಮಂದಿ ಎರಡೂ ಡೋಸ್(2nd Dose) ಕೊರೋನಾ ಲಸಿಕೆ(Covid Vaccine) ಪಡೆದಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗಾಗಲೇ ಶೇ.100ರಷ್ಟುಮಂದಿಯ ಎರಡೂ ಡೋಸ್(Fully Vaccinated) ಪೂರ್ಣಗೊಂಡಿವೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudhakar), ರಾಜ್ಯದಲ್ಲಿ ಶೇ.90 ರಷ್ಟುಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಬೆಂಗಳೂರು(Bengaluru Rural) ಗ್ರಾಮಾಂತರ ಜಿಲ್ಲೆ ಮತ್ತು ವಿಜಯಪುರ ಎರಡನೇ ಡೋಸ್ ವಿತರಣೆಯಲ್ಲಿ ಶೇ.100 ಗುರಿ ಸಾಧನೆ ಮಾಡಿವೆ. ಈ ಸಾಧನೆ ಮಾಡಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
Covid-19 Vaccine: 3ನೇ ಡೋಸ್‌ಗೆ ಮುಂಚೂಣಿ ಕಾರ್ಯಕರ್ತರೇ ಹಿಂದೇಟು..!
ಜನವರಿ ಮೂರನೇ ವಾರವೇ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರ ಮೊದಲ ಡೋಸ್ ವಿತರಣೆಯು ಶೇ.100 ರಷ್ಟುಪೂರ್ಣಗೊಂಡಿತ್ತು. ಉಳಿದಂತೆ ಅರ್ಹರ ಪೈಕಿ 9.2 ಲಕ್ಷ ಮಂದಿ ಮುನ್ನೆಚ್ಚರಿಕಾ ಡೋಸ್, 15 ರಿಂದ 17 ವರ್ಷದವರಲ್ಲಿ 23 ಲಕ್ಷ ಮಂದಿ ಲಸಿಕೆ ಪಡೆದಿದ್ದು, ಈ ಪೈಕಿ ಏಳು ಲಕ್ಷ ಮಕ್ಕಳದ್ದು, ಎರಡೂ ಡೋಸ್ ಪೂರ್ಣಗೊಂಡಿವೆ. ಮೊದಲ, ಎರಡನೇ ಹಾಗೂ ಮೂರನೇ ಡೋಸ್ ಸೇರಿ ಒಟ್ಟಾರೆ 9.76 ಕೋಟಿ ಡೋಸ್ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ.
ಸತತ 2 ದಿನ ಲಕ್ಷಕ್ಕಿಂತ ಕಮ್ಮಿ ಕೇಸ್
ಮಂಗಳವಾರ ಬೆಳಗ್ಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 67,597 ಹೊಸ ಕೋವಿಡ್ ಕೇಸ್‌ಗಳು ದೃಢಪಟ್ಟಿವೆ. ಇದರೊಂದಿಗೆ ಸತತ 2 ದಿನ ಲಕ್ಷಕ್ಕಿಂತ ಕಡಿಮೆ ಕೇಸು ದಾಖಲಾದಂತೆ ಆಗಿದೆ. ಇನ್ನು ಇದೇ ವೇಳೆ 1188 ಮಂದಿ ಹೊಸ ಸಾವಿನೊಂದಿಗೆ ಈ ಮಹಾಮಾರಿಗೆ ಈವರೆಗೆ 5,04,062 ಮಂದಿ ಮೃತಪಟ್ಟಂತಾಗಿದೆ. ಇನ್ನು ಒಟ್ಟಾರೆ ಸೋಂಕಿತರ ಸಂಖ್ಯೆ 4.23 ಕೋಟಿಗೆ ಏರಿಕೆಯಾಗಿದೆ. ಆದಾಗ್ಯೂ, ಸಕ್ರಿಯ ಸೋಂಕಿತರ ಸಂಖ್ಯೆ 9,94,891 ಸೀಮಿತವಾಗಿದೆ. ತನ್ಮೂಲಕ 27 ದಿನಗಳ ಬಳಿಕ ಇದೇ ಮೊದಲ ಬಾರಿಗೆ 10 ಲಕ್ಷಕ್ಕಿಂತ ಸಕ್ರಿಯ ಕೇಸ್‌ಗಳು ಪತ್ತೆಯಾದಂತಾಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.5.02 ಮತ್ತು ವಾರದ ಪಾಸಿಟಿವಿಟಿ ದರ ಶೇ.8.30ಕ್ಕೆ ಸೀಮಿತವಾಗಿದೆ. ಇದೇ ವೇಳೆ ಕೋವಿಡ್‌ನಿಂದ ರಕ್ಷಣೆಗಾಗಿ ಕೇಂದ್ರ ಸರ್ಕಾರ ಈವರೆಗೆ ಕೋವಿಡ್ ಲಸಿಕೆಯ 170.21 ಕೋಟಿ ಡೋಸ್‌ಗಳನ್ನು ನೀಡಿದೆ.
Corbevax Vaccine: 5 ಕೋಟಿ ಡೋಸ್ ಕೋರ್ಬೆವ್ಯಾಕ್ಸ್ ಲಸಿಕೆ ಕೇಂದ್ರದಿಂದ ಖರೀದಿ
23ರಿಂದ ಶೇ.6.2ಕ್ಕಿಳಿದ ಪಾಸಿಟಿವಿಟಿ ದರ
ಅತೀ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿದ ರಾಜ್ಯದ ಜಿಲ್ಲೆಗಳ ಪೈಕಿ 4ನೇ ಸ್ಥಾನ ಪಡೆದಿದ್ದ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಜನವರಿ 3ನೇ ವಾರದ ವರೆಗೆ ನಾಲ್ಕು ಅಂಕಿಗಳಲ್ಲಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದೀಗ ಮೂರಕ್ಕೆ ಇಳಿದಿದ್ದು ಕೆಲವೇ ದಿನಗಳಲ್ಲಿ ಎರಡಂಕಿಗೂ ಬರುವ ಸಾಧ್ಯತೆಗಳಿವೆ. ಜನವರಿ ಕೊನೆಯ ವಾರದಲ್ಲಿ ಶೇ. 21.5ರಷ್ಟಿದ್ದ ಪಾಸಿಟಿವಿಟಿ ದರ ಫೆಬ್ರುವರಿ ಮೊದಲ ವಾರದ ಕೊನೆಗೆ ಶೇ. 6.2ಕ್ಕೆ ಇಳಿದಿದೆ.
ಜ. 5ರ ವರೆಗೆ ಶೇ. 0.10ದಿಂದ ಶೇ. 0.29 ಆಸುಪಾಸಿನಲ್ಲಿದ್ದ ಪಾಸಿಟಿವಿಟಿ ದರ ಜ. 16ರಂದು ಶೇ.17.9ಕ್ಕೆ ತಲುಪಿತ್ತು. ಇದು ಅಧಿಕಾರಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ತುಸು ಆತಂಕ ಹುಟ್ಟಿಸಿತ್ತು. ಜ. 16ರಿಂದ 22ರ ವರೆಗೆ ಹೆಚ್ಚು-ಕಡಿಮೆ ಇದ್ದ ಪಾಸಿಟಿವಿಟಿ ದರ ಬಳಿಕ ಮತ್ತೆ ಏರಿಕೆಯಾಯಿತು. ಜ. 25ರಂದು 1,511 ಪಾಸಿಟಿವ್ ಪ್ರಕರಣ ದಾಖಲಿಸಿದ್ದ ಜಿಲ್ಲೆಯು ಶೇ. 23 ಪಾಸಿಟಿವಿಟಿ ದರ ಹೊಂದಿತ್ತು. ತದನಂತರ ಜನವರಿ ಕೊನೆ ದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,049 ಮತ್ತು ಗುಣಮುಖರಾದವರ ಸಂಖ್ಯೆ 1051 ತಲುಪಿತ್ತು.
