Asianet Suvarna News Asianet Suvarna News

ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ, 6ನೇ ಸ್ಥಾನದಲ್ಲಿ ಕರ್ನಾಟಕ

* ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ
* ದೇಶದಲ್ಲಿಯೇ ಲಸಿಕೆ ವಿತರಣೆಯಲ್ಲಿ ಕರ್ನಾಟಕ ನಂ.6
* ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ

Karnataka 6th In vaccination Says Minister Sudhakr rbj
Author
Bengaluru, First Published Jun 13, 2021, 6:38 PM IST
  • Facebook
  • Twitter
  • Whatsapp

ಬೆಂಗಳೂರು, (ಜೂನ್.13): ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತಿದೆ. ದೇಶದಲ್ಲಿಯೇ ಲಸಿಕೆ ವಿತರಣೆಯಲ್ಲಿ ನಾವು 6ನೇ ಸ್ಥಾನದಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಇಂದು (ಭಾನುವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೂ 1.68 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯಕ್ಕೆ 3 ಲಕ್ಷ ಡೊಸ್ ಲಸಿಕೆ ನಿನ್ನೆ (ಶನಿವಾರ) ಬಂದಿದೆ ಎಂದು ಮಾಹಿತಿ ನೀಡಿದರು.

19 ಜಿಲ್ಲೆಗಳಲ್ಲಿ ನಾಳೆಯಿಂದ ಮಿನಿ ಅನ್‌ಲಾಕ್‌

 ಕೇಂದ್ರ ಸರ್ಕಾರವೇ ಉಚಿತ ಲಸಿಕೆ ನೀಡುತ್ತಿರುವುದರಿಂದ 3 ಕೋಟಿ ಲಸಿಕೆಗೆ ನೀಡಿದ್ದ ಆರ್ಡರ್ ರದ್ದು ಮಾಡುತ್ತೇವೆ. ಲಸಿಕೆ ಕಂಪನಿಗೆ ನೀಡಿದ್ದ ಹಣವನ್ನೂ ವಾಪಸ್ ಪಡೆಯುತ್ತೇವೆ ಎಂದರು.

ಇದೇ ವೇಳೆ ಬೆಂಗಳೂರಿನಲ್ಲಿ ನಾಳೆಯಿಂದ ಅನ್ ಲಾಕ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳಿಂದ ಜನರು ವಾಪಸ್ ಆಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಜನರು ಎಚ್ಚರಿಕೆಯಿಂದ ಇರಬೇಕು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

Follow Us:
Download App:
  • android
  • ios