13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ; ತಡರಾತ್ರಿವರೆಗೆ ಮಂಕಾಗಿ ಕುಳಿತ ದರ್ಶನ್!
13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರದ ಜೈಲಿಗೆ ಬಂದ ನಟ ದರ್ಶನ್. ಘಟನೆ ಬಳಿಕ ಪೊಲೀಸರ ತನಿಖೆಯಿಂದ ನಲುಗಿಹೋಗಿದ್ದಂತೆ ಕಾಣಿಸಿತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ದಿನ ರಾತ್ರಿ ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ಸೇವಿಸಿ ತಡರಾತ್ರಿ ನಿದ್ದೆಗೆ ಜಾರಿದರು.
ಬೆಂಗಳೂರು (ಜೂ.23): ಪ್ರೇಯಸಿ ಪವಿತ್ರಾ ಗೌಡಗೆ ಇನ್ಸ್‌ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದಾನೆಂಬ ವಿಚಾರಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ(Renuka swamy) ಎಂಬಾತನನ್ನ ಅಪಹರಿಸಿ ಬರ್ಬರ ಹತ್ಯೆ ಮಾಡಿ ಮೋರಿಗೆ ಎಸೆದ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್(Darshan thugudeepa) ಮತ್ತು ಮೂವರು ಸಹಚರರನ್ನು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಗಿತ್ತು. ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್ ಹಾಗೂ ಆಪ್ತರಾದ ವಿನಯ್, ಪ್ರದೂಷ್ ಹಾಗೂ ಧನರಾಜ್‌ರನ್ನು ಶನಿವಾರ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಜುಲೈ 4ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತು.
13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರದ ಜೈಲಿಗೆ ಬಂದ ನಟ ದರ್ಶನ್. ಘಟನೆ ಬಳಿಕ ಪೊಲೀಸರ ತನಿಖೆಯಿಂದ ನಲುಗಿಹೋಗಿದ್ದಂತೆ ಕಾಣಿಸಿತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ದಿನ ರಾತ್ರಿ ಮುದ್ದೆ, ಚಪಾತಿ, ಸಾಂಬಾರ್ ಮತ್ತು ಮಜ್ಜಿಗೆ ಸೇವಿಸಿ ತಡರಾತ್ರಿ ನಿದ್ದೆಗೆ ಜಾರಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆ ಮಾಡದೇ ರಾತ್ರಿಯಿಡೀ ಚಡಪಡಿಸಿದ ಪವಿತ್ರಾ ಗೌಡ!
ಪೊಲೀಸ್ಟ್ ಕಸ್ಟಡಿಯಲ್ಲಿದ್ದ ದರ್ಶನ್ ತನಿಖೆಯಿಂದ ಮಾನಸಿಕವಾಗಿಯೂ ಹೈರಾಣಾಗಿದ್ದಂತೆ ಕಂಡರು. ಕೋರ್ಟ್, ಮಹಜರು ಅಂತಾ ಸುತ್ತಾಡಿಸಿದ್ದ ಪೊಲೀಸರು. ಈ ಪ್ರಕ್ರಿಯೆಗಳ ನಡುವೆ ಸರಿಯಾಗಿ ಆಹಾರ ಸೇವಿಸದೆ, ದೈಹಿಕವಾಗಿ ಬಳಲಿದಂತೆ ಕಂಡುಬಂತು. ಜೈಲಿನಲ್ಲಿ ತಡರಾತ್ರಿವರೆಗೂ ಕುಳಿತಲ್ಲೇ ಮಂಕಾಗಿದ್ದ ದರ್ಶನ್. ರಾತ್ರಿ ಸುಮಾರು 11.30ಕ್ಕೆ ನಿದ್ರಿಸಿದ್ದು, ಮುಂಜಾನೆ 6.30ಕ್ಕೆ ಎದ್ದು ನಿತ್ಯ ಕರ್ಮ ಮುಗಿಸಿ ಕೊಠಡಿಯಲ್ಲಿ ಸುಮ್ಮನೆ ಕುಳಿತಿದ್ದರು. ಬೆಳಗ್ಗ ಎದ್ದು ಕಾಫಿ ಸೇವಿಸದೆ, ಸುದ್ದಿ ಪತ್ರಿಕೆಗಳು ಸಹ ದಿಟ್ಟಿಸದೆ ಕುಳಿತಿದ್ದ ದರ್ಶನ್. ದರ್ಶನ್ ಕೊಠಡಿಯಲ್ಲೇ ಇರುವ ಸಹ ಖೈದಿ ವಿನಯ್. ಇಂದು ಬೆಳಗ್ಗೆ ಜೈಲಿನ ಮೇನು ಪ್ರಕಾರ ಪಲಾವ್ ಸೇವಿಸಲಿರುವ ನಟ ದರ್ಶನ್.