‘ಕನ್ನಡ ನುಡಿ ಜಾತ್ರೆ’ಗೆ ಜರ್ಮನ್ ಟೆಕ್ನಾಲಜಿಯ ವೇದಿಕೆ!
‘ಕನ್ನಡ ನುಡಿ ಜಾತ್ರೆ’ಗೆ ’ಜರ್ಮನ್ ಟೆಕ್ನಾಲಜಿ’ ಮಂಟಪ ನಿರ್ಮಾಣ!| ಫೆ.5, 6 ಮತ್ತು 7ರಂದು 3 ದಿನಗಳ ಕಾಲ ಕಲಬುರಗಿಯಲ್ಲಿ ನಡೆಯಲಿರುವ ಅಕ್ಷರ ಹಬ್ಬ
ಕಲಬುರಗಿ[ಜ.18]: ಫೆ.5, 6 ಮತ್ತು 7ರಂದು 3 ದಿನಗಳ ಕಾಲ ಕಲಬುರಗಿಯಲ್ಲಿ ನಡೆಯಲಿರುವ ಅಕ್ಷರ ಹಬ್ಬಕ್ಕಾಗಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನ ಆಧಾರಿತ ‘ಪ್ರಧಾನ ವೇದಿಕೆ’ ಸಿದ್ಧಗೊಳ್ಳಲಿದೆ. ವೇದಿಕೆಯನ್ನು ಗಟ್ಟಿಮುಟ್ಟಾಗಿ ನಿರ್ಮಿಸುವ ಅಗತ್ಯತೆ ಇರುವ ಹಿನ್ನೆಲೆಯಲ್ಲಿ ಜರ್ಮನ್ ಟೆಕ್ನಾಲಜಿಯಲ್ಲಿ ಮಂಟಪ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸಮ್ಮೇಳನದ ವೇದಿಕೆಯ ಸುತ್ತಮುತ್ತ ಬೇವಿನ ಮರಗಳ ತೋಪು ಇದ್ದು, ಒಂದೇ ಒಂದೂ ಮರಕ್ಕೂ ಹಾನಿಯಾಗದಂತೆ ಬಹು ಎತ್ತರವಾಗಿ ಪೆಂಡಾಲ್ ಹಾಕಲಾಗುತ್ತಿದೆ. ಹಸಿರು ವನಸಿರಿಯೊಳಗೇ ವೇದಿಕೆ ನಿರ್ಮಾಣ ಆಗಲಿದೆ. ಇದರಿಂದಾಗಿ ಸಮ್ಮೇಳನದ ವೇದಿಕೆಗೆ ಸಹಜವಾಗಿಯೇ ಆಕರ್ಷಣೆ ಹೆಚ್ಚಲಿದೆ.
ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ
ಏನಿದು ಜರ್ಮನ್ ಟೆಕ್ನಾಲಜಿ?
ಪ್ರಕೃತಿ ವಿಕೋಪ, ಅವಘಡಗಳು ಯಾವುದೇ ಸ್ವರೂಪದಲ್ಲಿದ್ದರೂ ಅವುಗಳನ್ನೆಲ್ಲ ತಡೆದುಕೊಳ್ಳುವ ವೇದಿಕೆ ಇದಾಗಿರಲಿದೆ. ಇಲ್ಲೆಲ್ಲಾ ಜರ್ಮನ್ ಶೀಟ್ ಬಳಸಿಯೇ ವೇದಿಕೆ ನಿರ್ಮಿಸಲಾಗುತ್ತದೆ. ಬೆಂಕಿ, ಮಳೆ, ಉರಿ ಬಿಸಿಲನ್ನು ಸಲೀಸಾಗಿ ತಡೆದುಕೊಳ್ಳುವ ಶೀಟ್‌ಗಳು ಇವಾಗಿರಲಿವೆ. ಜೋರಾಗಿ ಗಾಳಿ ಬೀಸಿದರೂ ಮಂಟಪ ಕಿಂಚಿತ್ತೂ ಅಲುಗಾಡ ರೀತಿಯಲ್ಲಿ ಮಂಟಪದ ಕಂಬಗಳ ಜೋಡಣೆ ಆಗಲಿದೆ. ಹೊರಗಡೆ ತಾಪಮಾನ ಹೆಚ್ಚಿದ್ದರೂ ಆ ತಾಪಮಾನಕ್ಕೆ ಹೋಲಿಕೆ ಮಾಡಿದರೆ ಮಂಟಪದೊಳಗೆ ಕಮ್ಮಿ ತಾಪಮಾನ ಇರುವಂತಹ ವ್ಯವಸ್ಥೆಯಲ್ಲಿ ಈ ಟೆಂಟ್ ಇರಲಿದೆ.
ಸಾಹಿತ್ಯ ಸಮ್ಮೇಳನ ವೇದಿಕೆ ನಿರ್ಮಾಣಕ್ಕೆ ಅಡಿಗಲ್ಲು
ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಸಾಹಿತ್ಯ ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷ, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಗುಲಬರ್ಗಾ ವಿವಿಯ ಇಎಸ್‌ಐ ಕಟ್ಟಡ ಹಿಂಭಾಗದ ಸ್ಥಳದಲ್ಲಿ ಮುಖ್ಯ ವೇದಿಕೆ ನಿರ್ಮಾಣಕ್ಕೆ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಬೆಳಗ್ಗೆ 11.50ರಿಂದ ಮಧ್ಯಾಹ್ನ 12.10 ಗಂಟೆವರೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಪುರೋಹಿತರಾದ ಭದ್ರಯ್ಯಸ್ವಾಮಿ ಮತ್ತು ಸೂಗುರೇಶ್ವರಸ್ವಾಮಿ ಪೂಜಾ ವಿಧಿ-ವಿಧಾನ ನಡೆಸಿಕೊಟ್ಟರು.
85ನೇ ಸಾಹಿತ್ಯ ಸಮ್ಮೇಳನ: ಬಹುಲಕ್ಷ ಕೊಟೇಶನ್‌ಗೆ ದಂಗಾದ ಸಚಿವ ಕಾರಜೋಳ!