ಹೊಸತನಕ್ಕೆ ತೆರೆದುಕೊಳ್ಳದಿದ್ದರೆ ಉಳಿಗಾಲವಿಲ್ಲ: ರವಿ ಹೆಗಡೆ
ಸಾಹಿತ್ಯಕ್ಕಾಗಿ ಪತ್ರಿಕೆಯನ್ನು ಡಿಜಿಟಲ್ ಮಾಧ್ಯಮದಲ್ಲಿ ರೂಪಿಸಲಾಗಿದೆ. ಸಾಹಿತ್ಯದಲ್ಲೂ ಓದುವ ಶೈಲಿ ಬದಲಾಗುತ್ತಿದೆ. ಇದು ಸಾಹಿತ್ಯದಲ್ಲಿ ಹೊಸ ಭರವಸೆಯನ್ನು ಸೃಷ್ಟಿಸಿದೆ: 'ಕನ್ನಡಪ್ರಭ' ಮತ್ತು 'ಸುವರ್ಣ ನ್ಯೂಸ್' ಪ್ರಧಾನ ಸಂಪಾದಕ ರವಿ ಹೆಗಡೆ
ಮಂಗಳೂರು(ಜ.12): ಮಾಧ್ಯಮ ಮತ್ತು ಸಾಹಿತ್ಯ ಈಗ ವಾಸ್ತವ ಜಗತ್ತಿನಿಂದ ಡಿಜಿಟಲ್ ಯುಗಕ್ಕೆ ಪರಿವರ್ತನೆ ಗೊಂಡಿದೆ ಎಂದು 'ಕನ್ನಡಪ್ರಭ' ಮತ್ತು 'ಸುವರ್ಣ ನ್ಯೂಸ್' ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ 'ಲಿಟ್ ಫೆಸ್ಟ್-2025'ರಲ್ಲಿ 'ಪತ್ರಿಕೋದ್ಯಮ ಮತ್ತು ಸಾಹಿತ್ಯ: ಒಂದು ಹರಟೆ' ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುದ್ರಣದಿಂದ ಟೆಲಿವಿಷನ್ ಆಗಿ ಈಗ ಡಿಜಿಟಲ್‌ಗೆ ಮಾಧ್ಯಮ ರೂಪಾಂತ ರಗೊಂಡಿರುವುದನ್ನು ಪ್ರಸ್ತಾಪಿಸಿದ ರವಿ ಹೆಗಡೆ, ಪತ್ರಿಕೆಗಳಲ್ಲಿ ದೈನಿಕ ಧಾರಾವಾಹಿ, ಕಾದಂಬರಿಗಳ ಪ್ರಕಟಣೆ ಈಗ ಅಪ್ರಸ್ತುತ ಎನಿಸಿದೆ. ಕತೆ, ಕವನಗಳನ್ನು ಪ್ರಕಟಿಸಿದರೂ ಅದನ್ನು ಡಿಜಿಟಲ್ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ. ಇವುಗಳನ್ನೆಲ್ಲ ಟೆಲಿವಿಷನ್‌ಗಳಲ್ಲಿ ಈಗ ಡಿಜಿಟಲ್ ಮಾಧ್ಯಮಗಳಲ್ಲಿ ನೋಡಲು ಸಾಧ್ಯವಿದೆ. ಪತ್ರಿಕೆಯ ಓದುಗರ ಮಾನಸಿಕತೆಯೂ ಬದಲಾಗಿದೆ. ಪತ್ರಿಕೆಯಲ್ಲಿ ಈಗ ಸ್ಟಾಕ್ ಮಾರ್ಕೆಟ್ ಸುದ್ದಿಯ ಅಗತ್ಯವಿಲ್ಲ, ಟಿವಿಯ ಸ್ಟೋಲಿಂಗ್‌ನಲ್ಲಿ ಬಂದು ಬಿಡುತ್ತದೆ. ಕಾರ್ಟೂನು ಕೂಡ ಸ್ಥಗಿತಗೊಂಡಿದೆ. ಇವುಗ ಳನ್ನೆಲ್ಲ ಮೊಬೈಲ್ ಆಕ್ರಮಿಸಿಕೊಂಡಿದೆ. ಎಲ್ಲವೂ ಹೊಸ ಟ್ರೆಂಡ್‌ಗೆ ಬದಲಾಗುತ್ತಿದೆ. ಮೀಡಿಯಾ ಈಗ ಕಾಮಿಡಿ ಆಗಿಹೋಗಿದೆ ಎಂದು ಅಭಿಪ್ರಾಯಪಟ್ಟರು.
ವಿಪ್ರೋತ್ಸವ 2024: ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಗೆ ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ
ಬದಲಾಗುತ್ತಿರುವ ಓದುವ ಶೈಲಿ:
ಸಾಹಿತ್ಯಕ್ಕಾಗಿ ಪತ್ರಿಕೆಯನ್ನು ಡಿಜಿಟಲ್ ಮಾಧ್ಯಮದಲ್ಲಿ ರೂಪಿಸಲಾಗಿದೆ. ಸಾಹಿತ್ಯದಲ್ಲೂ ಓದುವ ಶೈಲಿ ಬದಲಾಗುತ್ತಿದೆ. ಇದು ಸಾಹಿತ್ಯದಲ್ಲಿ ಹೊಸ ಭರವಸೆಯನ್ನು ಸೃಷ್ಟಿಸಿದೆ. ಓದುಗರ ಮಾನ ಸಿಕತೆ ಬದಲಾದಂತೆ ಬರಹಗಾರರು ಪೆನ್ನಿನ ಬದಲು ಕಂಪ್ಯೂಟರ್ ಕೀ ಬೋರ್ಡ್ ಬಳಸುತ್ತಿದ್ದಾರೆ. ಓದುವಿಕೆಗೆ ಮುದ್ರಣ ವಿಧಾನ ಬೇಕು, ಹಾಗೆಂದು ಬರಹಕ್ಕೆ ಡಿಜಿಟಲ್ ಮಾಧ್ಯಮವೇ ಆಗಬೇಕು. ಪುಸ್ತಕದ ಓದುವಿಕೆಯ ಭಾವನೆ ಡಿಜಿಟಲ್ ಓದುವಿಕೆಯಲ್ಲಿ ಸಿಗಲು ಸಾಧ್ಯವಿಲ್ಲ. ಈಗ ಎಫ್‌ಎಂ ಯುಗಾಂತ್ಯವಾಗುತ್ತಿದ್ದು, ಮೊಬೈಲ್‌ನಲ್ಲೇ ಮ್ಯೂಸಿಕ್, ಸಾಹಿತ್ಯಗಳು ಹೇರಳವಾಗಿ ಸಿಗುತ್ತಿವೆ. ಹೊಸ ತಲೆಮಾರಿನ ಪ್ರಕಾಶಕರು ಬಂದ ಮೇಲೆ ಪುಸ್ತಕಗಳಿಗೆ ಹೊಸ ಅವಕಾಶ ಒದಗಿ ಬಂದಿದೆ. ಸಣ್ಣಗಾತ್ರದ ಪುಸ್ತಕಗಳ ಪ್ರಕಟಣೆಯಿಂದಾಗಿ ಓದುವ ಸಂಸ್ಕೃತಿ ಶುರುವಾಗಿದೆ ಎಂದರು.
ಸುಸ್ಥಿರ ಮಾದರಿಗಳ ಮೂಲಕ ಸಮಾಜದ ಪ್ರಗತಿ ಸಾಧ್ಯ: ರವಿ ಹೆಗಡೆ
ಎಐ ಪ್ರವೇಶ:
ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಪ್ರವೇಶ ಮಾಡಿದೆ. ಚಾಟ್ ಜಿಪಿಟಿ ಕೂಡ ಶೇಕ್ಸ್‌ಪಿಯರ್ ಮಾದರಿಯ ಸಾಹಿತ್ಯವನ್ನು ಕ್ಷಣಮಾತ್ರದಲ್ಲಿ ಬರೆದುಕೊಡಬಲ್ಲದು. ಸದ್ಯ ಕನ್ನಡದಲ್ಲಿ ಚಾಟ್ ಜಿಪಿಟಿ ಪಳಗಿಲ್ಲ. ಜಾಹೀರಾತು ಸಹಿತ ಎಲ್ಲ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನ ಹೇರಳವಾಗಿ ಬಳಕೆಯಾಗುತ್ತಿದೆ. ಯಾವುದೋ ಗ್ರಾಮೀಣ ಚಿತ್ರಣವನ್ನು ಎಐ ಕೊಡಬಲ್ಲದು, ಆದರೆ, ಅದು ನೈಜ ಗ್ರಾಮೀಣತೆಯನ್ನು ಕೊಡಲು ಸಾಧ್ಯವಿಲ್ಲ. ಭವಿಷ್ಯದ ದಿನಗಳಲ್ಲಿ ಮನುಷ್ಯನ ಬುದ್ದಿಮತ್ತೆಯನ್ನು ಮೀರಿಸುವಂತೆ ಎಐ ಪ್ರಬುದ್ಧವಾಗಬಲ್ಲದು. ಹೊಸತನಕ್ಕೆ ತೆರೆದುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ರವಿ ಹೆಗಡೆ ಹೇಳಿದರು.
ಮಾಧ್ಯಮದಲ್ಲಿ ಸುದ್ದಿ ವಸ್ತುನಿಷ್ಠವಾಗಿರುತ್ತದೆ. ಅದರಲ್ಲಿ ಭಾವನೆ ಇರುವುದಿಲ್ಲ. ಎಐ ಪ್ರವೇಶಿಸಿದ ಬಳಿಕ ಈಗ ಶೇ.40ರಷ್ಟು ಸಿಬ್ಬಂದಿಯ ಅಗತ್ಯತೆ ಇಲ್ಲವಾಗಿದೆ. ಸುದ್ದಿ ಮನೆಯ ಕೆಲಸವನ್ನು ಚಾಟ್ ಜಿಪಿಟಿ ಮಾಡಿಕೊಡಬಲ್ಲದು. ಆಂಗ್ಲ ಪತ್ರಿಕೆಗಳಿಗೆ ಎಐ ಪ್ರವೇಶ ಹೊಡೆತ ನೀಡಿದೆ ಎಂದರು.
ದರ ಏರಿಕೆಯ ಸವಾಲು, ಸಂದಿಗ್ಧತೆ
2020ರಲ್ಲಿ ಪತ್ರಿಕೆಗಳ ಒಟ್ಟು ಪ್ರಸರಣ 35 ಲಕ್ಷದಷ್ಟಿತ್ತು. ಕೊರೋನಾ ಬಳಿಕ ಇದು 18 ಲಕ್ಷವ ರೆಗೆ ಗಣನೀಯ ಇಳಿಕೆಯಾಗಿದೆ. ಹಿಂದೇ 2 ಇದ್ದ ಪತ್ರಿಕೆದರಈಗೇ5 ರವರೆಗೆ ಏರಿಕೆಯಾಗಿದೆ. ಇದೇ ವೇಳೆ ಟೀ, ಕಾಫಿ ದರ ಕ30ಕ್ಕೆ ತಲುಪಿದೆ. 50 ಪೈಸೆ ಜಾಸ್ತಿ ಮಾಡಿದರೆ ಪತ್ರಿಕೆ ಪ್ರಸರಣವೇ ಕಡಿಮೆಯಾಗುತ್ತದೆ. ಅಂಥದ್ದರಲ್ಲಿ ದರ ಏರಿಕೆ ಮಾಡುವುದೇ ಒಂದು ಸವಾಲು ಆಗಿದೆ. ಅದೇ ರೀತಿ ಚಾನೆಲ್‌ಗಳನ್ನು ಚಂದಾದಾರಿಕೆಗೆ ಒಳಪಡಿಸಿ ಒಳ್ಳೆಯ ಗುಣಮಟ್ಟದ ಹೂರಣ ನೀಡಲೂ ಟಿಆರ್‌ಪಿ ಧಾವಂತದಲ್ಲಿ ಸಾಧ್ಯವಾಗುತ್ತಿಲ್ಲ. ಕನಿಷ್ಠಪೈಸೆ ಚಂದಾ ಇರಿಸಿದರೂ ಉಚಿತ ಚಾನೆಲ್ ಲಭ್ಯ ಇರುವಾಗ ಪೇ ಚಾನೆಲನ್ನು ಕೇಳುವವರೇ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಧ್ಯಮ ಕ್ಷೇತ್ರ ಇದೆ ಎಂದು ರವಿ ಹೆಗಡೆ ಹೇಳಿದರು.