ಕನ್ನಡಪ್ರಭ, ಸುವರ್ಣ ನ್ಯೂಸ್‌ನ ಐವರಿಗೆ ಮಾಧ್ಯಮ ಪ್ರಶಸ್ತಿ

'ಕನ್ನಡಪ್ರಭ'ದ ಹುಬ್ಬಳ್ಳಿ ವಿಶೇಷ ವರದಿಗಾರ ಶಿವಾನಂದ ಗೊಂಬಿ 2023ನೇ ಸಾಲಿನ ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 'ಕೆರೆ ನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರು' ವರದಿಗೆ ಲಭಿಸಿದೆ. 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸುವರ್ಣ ನ್ಯೂಸ್' ರಾಜಕೀಯ ವಿಭಾಗದ ಮುಖ್ಯಸ್ಥ ಆನಂದ್ ಬೈದನಮನೆ, ಚೀಫ್ ಆ್ಯಂಕರ್ ಭಾವನಾ ನಾಗಯ್ಯ, 2024ನೇ ಸಾಲಿನ ಪ್ರಶ ಸಿಗ್ಗೆ ಸುವರ್ಣ ನ್ಯೂಸ್ ಡಿಜಿಟಲ್ ವಿಭಾಗದ ಮುಖ್ಯಸ್ಥೆ ಕೆ.ಎಸ್.ನಿರುಪಮಾಗೆ ದೊರೆತಿದೆ. 

Kannada Prabha and Asianet Suvarna News' five Journalists  Got Media Award grg

ಬೆಂಗಳೂರು(ಜ.03): ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ 2023,2024ರ ಸಾಲಿನ ವಾರ್ಷಿಕ ಪ್ರಶಸ್ತಿ ಮತ್ತು ವಿವಿಧ ದತ್ತಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದ್ದು, 'ಕನ್ನಡಪ್ರಭ', 'ಏಷ್ಯಾನೆಟ್ ಸುವರ್ಣ ನ್ಯೂಸ್'ನ ಐವರು ಪ್ರತಿನಿಧಿಗಳಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ. 

'ಕನ್ನಡಪ್ರಭ'ದ ಹುಬ್ಬಳ್ಳಿ ವಿಶೇಷ ವರದಿಗಾರ ಶಿವಾನಂದ ಗೊಂಬಿ 2023ನೇ ಸಾಲಿನ ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 'ಕೆರೆ ನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರು' ವರದಿಗೆ ಲಭಿಸಿದೆ. 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸುವರ್ಣ ನ್ಯೂಸ್' ರಾಜಕೀಯ ವಿಭಾಗದ ಮುಖ್ಯಸ್ಥ ಆನಂದ್ ಬೈದನಮನೆ, ಚೀಫ್ ಆ್ಯಂಕರ್ ಭಾವನಾ ನಾಗಯ್ಯ, 2024ನೇ ಸಾಲಿನ ಪ್ರಶ ಸಿಗ್ಗೆ ಸುವರ್ಣ ನ್ಯೂಸ್ ಡಿಜಿಟಲ್ ವಿಭಾಗದ ಮುಖ್ಯಸ್ಥೆ ಕೆ.ಎಸ್.ನಿರುಪಮಾಗೆ ದೊರೆತಿದೆ. 

ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿ: ಸುವರ್ಣ ನ್ಯೂಸ್‌ನ ನಾಲ್ವರಿಗೆ ಟಿಎನ್‌ಐಟಿ ಅವಾರ್ಡ್‌

ಬೆಂಗಳೂರು ವರದಿಗಾರ ನಂದೀಶ್ ಮಲ್ಲೇನಹಳ್ಳಿ 2024ನೇ ಸಾಲಿನ ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷ ಚೇತನ ವ್ಯಕ್ತಿ ಗಳಿಗೆ ನಿವೇಶನ ಹಂಚಿಕೆ ಬಗೆಗಿನ ಸರಣಿ ಸುದ್ದಿಗೆ ದೊರಕಿದೆ. ಹಿರಿಯ ಪತ್ರಕರ್ತರನ್ನು ಜೀವಮಾನ ಸಾಧನೆ ಪ್ರಶಸ್ತಿ ಗೆ, 30 ಮಂದಿಗೆ ವಾರ್ಷಿಕ ಪ್ರಶಸ್ತಿ, 10 ಮಂದಿ ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. 

2023ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆ: 

ಜೀವಮಾನ ಸಾಧನೆ ಪತ್ರಕರ್ತ ಅ.ಚ.ಶಿವಣ್ಣ, ವಾರ್ಷಿಕ ಪ್ರಶಸ್ತಿಗೆ ಗಂಗಾಧರ ಮೊದಲಿ ಯಾರ್, ಪ್ರೊ.ಉಷಾ ರಾಣಿ ಎನ್.ಸುಶೀ ಲೇಂದ್ರ ನಾಯಕ್, ವಾಸುದೇವ ಹೊಳ್ಳ, ಆಬ್ರೆಡ್ ಟೆನ್ನಿಸ್, ಮಾಲತಿ ಭಟ್, ಮನು ಅಯ್ಯಪ್ಪ, ಹರಿಯಬ್ಬೆ ಹೆಂಜಾರಪ್ಪ, ವಿಲಾಸ್ ನಾಂದೋಡ್ಕರ್, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬೆಳ್ಳಿ, ಮನೋಜ್‌ಗೌಡ ಪಾಟೀಲ, ಆನಂದ ಬೈದನ ಮನೆ, ಮಧು ಜವಳಿ, ಎಂ.ಆರ್. ದಿನೇಶ್, ತಾರಾನಾಥ್, ಕೆ.ಮಲ್ಲಿ ಕಾರ್ಜುನ ಸಾಣಾ ಪೂರ, ಜಯಪ್ರಕಾಶ್, ಪುಂಡಲೀಕ ಭೀ. ಬಾಳೋಜಿ, ಇಬ್ರಾಹಿಂ ಅಡ್ಡಸ್ಥಳ, ಅನ್ನು ಮಂಗಳೂರು (ಪುಂಡಲೀಕ ಪೈ), ನಿಹಾಲ್ ಕಿದ್ವಾಯಿ, ರೋಹಿಣಿ ಸ್ವಾಮಿ, ಭಾವನಾ ನಾಗಯ್ಯ, ಮುನೀರ್ ಅಹ್ಮದ್ ಆಜಾದ್, ಹನು ಮಾನ್ ಸಿಂಗ್ ಜವ ದಾರ್, ಜೈಮು ನಿ,ಶಿವ ಮೂರ್ತಿ ಗುರು ಮಠ, ಸಿರಾಜ್ ಬಿಸ್ರಳ್ಳಿ, ದತ್ತಿ ಪ್ರಶಸ್ತಿಗಳಿಗೆರವಿಕು ಮಾರಚನ್ನ ಬಸಪ್ಪಕ ಗಣ್ಣವರ, ವಿಜಯ್ ಕೋಟ್ಯಾ ನ್, ಶಿವಾ ನಂದ ಗೊಂಬಿ, ಸಂಧ್ಯಾ ಹೆಗಡೆ, ಶಿಲ್ಪ,ಪಿ, ಕೆ.ನೀಲಾ, ಕ.ಮ.ರವಿಶಂಕರ್, ವಿ.ವೆಂಕಟೇಶ್, ಎಚ್.ಪಿ.ಪುಣ್ಯ ವತಿ, ತುಂಗ ರೇಣುಕಾಗೆ ದೊರೆತಿದೆ. ಅಂ ದೋಲನ ಪ್ರಶಸ್ತಿ ಸಂಜೆ ದರ್ಶನ ಪತ್ರಿಕೆಗೆ ಲಭಿಸಿದೆ. 

2024ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆ

ಜೀವಮಾನ ಸಾಧನೆ ಪತ್ರಕರ್ತ ಅಬ್ದುಲ್‌ ಸಲಾಂ ಪುತ್ತಿಗೆ, ವಾರ್ಷಿಕ ಪ್ರಶಸ್ತಿಗೆ ಪ್ರೊ.ಎ.ಎಸ್. ಬಾಲಸುಬ್ರಹ್ಮಣ್ಯ, ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ.ಗುರು ರಾಜ್, ಕುಮಾರನಾಥ್ ಯು.ಕೆ.. ಸಿದ್ದು ಕಾಳೋಜಿ, ಆರ್.ಕೆ.ಜೋಷಿ, ಪ್ರಕಾಶ್ ಶೇರ್ ಆರುಂಡಿ ಶ್ರೀನಿ ವಾಸ ಮೂರ್ತಿ, ರವೀಶ್ ಎಚ್.ಎಸ್., ಭಾನುಪ್ರಕಾಶ್, ಮಹೇಶ್ ಶೆಟಗಾರ, ರಮೇಶ್ ಜಹಗೀರದಾರ, ನಿರು ಪಮಾ, ದಿನೇಶ್ ಗೌಡಗೆರೆ, ಡಿ.ಸಿ. ಮಹೇಶ್, ಎಚ್.ಎಸ್.ಹರೀಶ್, ಶರಣಯ್ಯ ಒಡೆ ಯರ್, ಅಶ್ವಿನಿ ಎಂ.ಶ್ರೀಪಾದ, ರಿಜ್ವಾನ್ ಅಸದ್, ಬನ್ನಿ ಕಾಳಪ್ಪ, ಮನುಜಾ ವೀರಪ್ಪ, ಜಯಂತ್ ಜೆ., ವಿಖಾರ್ ಅಹ್ಮದ್ ಸಯೀದ್, ಡ.ಎನ್.ಶಾಂ ಭವಿ ನಾಗರಾಜ್, ರಮೇಶ್ (ಹಾಬಿ ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, ಅನೀಸ್ ನಿಸಾರ್ ಹಮೀದ್, ಸಂದೀಪ್ ಸಾಗರ್, ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೆ. ಓಂಕಾರಮೂರ್ತಿ ಮತ್ತು ಡಿ. ಎಂ.ಕುರ್ಕೆ ಪ್ರಶಾಂತ್, ಬಿ.ಕೆ.ದೇವಯ್ಯ (ಅನು ಕಾರ್ಯಪ್ಪ), ನಂದೀಶ್ ಮಲ್ಲೇನಹಳ್ಳಿ, ಪ್ರಭು ಬ.ಅಡ ವಿಹಾಳ, ಮೊಹಮ್ಮದ್ ಅಖೀಲ್ ಉಡೇವು, ರಹಮತ್ ತರೀಕೆರೆ, ಮ್ಯುರಿಯಲ್ ನಿರ್ಮಲ ಡಿಸಿಲ್ವ, ಎಚ್.ಎಸ್.ಸುಧೀಂದ್ರ ಕುಮಾರ್‌ಗೆ ಲಭಿಸಿದೆ. ಆಂದೋಲನ ಪ್ರಶಸ್ತಿ ಹೊಸಪೇಟೆ ಟೈಮ್ಸ್ ಪತ್ರಿಕೆಗೆ ದೊರಕಿದೆ.

Latest Videos
Follow Us:
Download App:
  • android
  • ios