06:34 PM (IST) Aug 27

ಮುರುಘಾ ಮಠ ಹಾಸ್ಟೆಲ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ

ಚಿತ್ರದುರ್ಗದ: ಮುರುಘಾ ಮಠದ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿರುವ ವಿಧ್ಯಾರ್ಥಿನಿಯರ ನಿಲಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಭಾರತಿ ಆರ್ ಬಣಕರ್ ನೇತೃತ್ವದ ತಂಡ ಭೇಟಿ ನೀಡಿದೆ. ನೂರು ಮಕ್ಕಳಿಂದ ಪ್ರತಿಯೊಬ್ಬರ ಬಳಿ ಅಧಿಕಾರಿಗಳು ಪ್ರತ್ಯೇಕವಾಗಿ ಹೇಳಿಕೆ ಪಡೆಯುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಯುತ್ತಿದೆ.

04:46 PM (IST) Aug 27

ಮುರುಘಾ ಶ್ರೀ ವಿರುದ್ಧ ಪ್ರಕರಣ ದಾಖಲಾಗಿರುವುದು ತಪ್ಪು: ಸಿ.ಎಂ.ಇಬ್ರಾಹಿಂ

ತುಮಕೂರು: ಮುರುಘಾ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ. ತುಮಕೂರಿನಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ. ಪ್ರಕರಣ ದಾಖಲಾಗಿರುವುದು ತಪ್ಪು.ಮೊದಲು ಡೀಟೈಲ್ ಆಗಿ ಎನ್ಕ್ವೈರಿ ಆಗಬೇಕು. ಬಾರಿ ದೊಡ್ಡ ಮಠ ಅದು, ಅದೇನಿದೆ ಎನ್ನುವ ಸತ್ಯಾಂಶ ಗೊತ್ತಾಗ ಬೇಕು. ಮುರುಘಾ ಸ್ವಾಮಿಗಳು ಯಾವತ್ತೂ ಪರಿವರ್ತನೆಗಾಗಿ ಹೋರಾಟ ಮಾಡಿಕೊಂಡು ಬಂದಿರುವಂತವರು. ಪರಿವರ್ತನೆ ಮಾಡ್ತಕ್ಕಂತವರ ಹಣೆ ಮೇಲೆ ಯಾವತ್ತೂ ಕತ್ತಿ ತೂಗ್ತಾ ಇರುತ್ತೆ. ಹಾಗಾಗಿ ಪೊಲೀಸರು ಆತುರ ಮಾಡಿದಾರೆ. ಫಸ್ಟ್ ಅದನ್ನ ಎನ್ಕ್ವೈರಿ ಮಾಡಲಿ. ಸತ್ಯಾಂಶ ಏನಿದೆ ಅನ್ನೊದು ಕಂಡು ಬಂದ್ರೆ ಆಮೇಲೆ ಬೇಕಾದ್ರೆ ಕ್ರಮಕೈಗೊಳ್ಳಲಿ‌. ಅದು ಅವರ ಭಕ್ತರಲ್ಲಿ ಆತಂಕವನ್ನು ಸೃಷ್ಠಿ ಮಾಡ ಬಹುದು. ಬಸವರಾಜ್ ಬೊಮ್ಮಾಯಿಗಳು ಮುಖ್ಯ ಮಂತ್ರಿಗಳಿದ್ದಾರೆ,ಅದರ ಬಗ್ಗೆ ಗಮನ ಹರಿಸುತ್ತಾರೆ ಎನ್ನುವ ನಂಬಿಕೆ ಇದೆ. ತುಮಕೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ‌.

03:26 PM (IST) Aug 27

ಶಿರಾ ಅಪಘಾತ: ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲಿದೆ ಸರಕಾರ

ರಾಯಚೂರು: ರಾಯಚೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ. ಶಿರಾ ಬಳಿ ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಬದಲಿ ವ್ಯವಸ್ಥೆ ಮಾಡಿದ್ದೇವೆ. ನಿಮಾನ್ಸ್ ನಲ್ಲಿ ಮೊದಲ ಪ್ರಾಶಸ್ತ್ಯದಲ್ಲಿ ಚಿಕಿತ್ಸೆ ನೀಡಲು ನಿಮಾನ್ಸ್ ನಿರ್ದೇಶಕರಿಗೆ ತಿಳಿಸಿದ್ದೇನೆ. ಅವರ ಸಂಪೂರ್ಣ ವೆಚ್ಚ ನಾವೇ ಭರಿಸಲಿದ್ದೇವೆ. ಈ ಭಾಗದ ಜನ ಗುಳೆ ಹೋಗುವುದನ್ನ ತಪ್ಪಿಸಲು ನೀರಾವರಿ ಅಭಿವೃದ್ಧಿಯಾಗಬೇಕಿದೆ. ಇಲ್ಲಿನ ಇಂಡಸ್ಟ್ರಿ ಸೆಂಟರ್ ವಿಸ್ತರಣೆ ಮಾಡುತ್ತೇವೆ. ಇಲ್ಲಿನ ಜನರಿಗೆ ಹೆಚ್ಚು ಉದ್ಯೋಗ ಸಿಗುವ ದೃಷ್ಟಿಯಲ್ಲಿ ಗಾರ್ಮೆಂಟ್ ಉದ್ಯಮ ಬೆಳೆಯಬೇಕಿದೆ. ಬಳ್ಳಾರಿ, ರಾಯಚೂರು,ಕಲಬುರಗಿ ವಿಶೇಷ ಅಭಿವೃದ್ಧಿಗೆ ಕ್ರಮ ವಹಿಸಿದ್ದೇವೆ. ಕಲಬುರಗಿಗೆ ಟೆಕ್ಸ್ ಟೈಲ್ ಪಾರ್ಕ್ ಶಿಫಾರಸು ಮಾಡಿದ್ದೇವೆ. ರಾಜ್ಯದ ಕಾರ್ಯಕ್ರಮದ ಅಡಿ ರಾಯಚೂರಿಗೆ ಗಾರ್ಮೆಂಟ್ ಇಂಡಸ್ಟ್ರಿ ಅಭಿವೃದ್ಧಿ ಮಾಡುತ್ತೇವೆ, ಎಂದಿದ್ದಾರೆ.

02:48 PM (IST) Aug 27

ಮುರಘಶ್ರೀ ಗಳ ವಿರುದ್ದ ಎಫ್ಐಆರ್: ಆಶ್ಚರ್ಯ ತಂದ ವಿಚಾರವಲ್ಲವೆಂದ ಎಚ್ಡಿಕೆ

ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆ, ಮುರಘಶ್ರೀಗಳ ವಿರುದ್ದ ಎಫ್‌ಐಆರ್ ವಿಚಾರವಾಗಿ ಚನ್ನಪಟ್ಟಣದಲ್ಲಿ ಹೇಳಿಕೆ ನೀಡಿದ್ದು, ಈ ವಿಷಯ ನನಗೆ ಆಶ್ಚರ್ಯ ತಂದ ವಿಚಾರವಲ್ಲ. ಇದರ ಬಗ್ಗೆ ಕಳೆದ ಐದಾರು ತಿಂಗಳ ಹಿಂದೆ ಹಲವಾರು ಚರ್ಚೆಗಳು ನಡೆಸುತ್ತಿದ್ದರು. ಈ ವಿಚಾರವನ್ನ ಪ್ರಾರಂಭಿಕ ಹಂತದಲ್ಲೆ ಮುಂಜಾಗ್ರತೆ ವಹಿಸಬೇಕಿತ್ತು. ಸಾರ್ವಜನಿಕವಾಗಿ ಬರುವುದರಿಂದ ಧಾರ್ಮಿಕ ಕ್ಷೇತ್ರದ ಮೇಲೆ ಬೇರೆ ಪರಿಣಾಮ ಬೀರಬಾರದು. ಈಗಾಗಲೇ ಒಂದು ಬಾರಿ ಹೊಸನಗರದ ಸ್ವಾಮೀಜಿಗೆ ಮೇಲೆ ಘಟನೆ ನಡೆದಿತ್ತು. ಇವತ್ತು ಇವರ ಮೇಲೆ ಪ್ರಾರಂಭವಾಗಿದೆ. ನಮ್ಮ ನಮ್ಮ ಭಾವನೆಗಳಿಗೆ ಧಕ್ಕೆಯಾಗಬಾರದು. ಇಂತಹ ವಿಚಾರದಲ್ಲಿ ಕಾನೂನು ಬಾಹಿರವಾಗಿ ಮಾಡಿದ್ದರೆ, ಸರ್ಕಾರ ತೀರ್ಮಾನಕ್ಕೆ ಬರಬೇಕು.

02:41 PM (IST) Aug 27

ಚಿರತೆ ಆಪರೇಷನ್: ಟ್ರೋಲ್‌ಗೆ ಆಹಾರವಾದ ಚಾಲಾಕಿ ವನ್ಯಮೃಗ

ಬೆಳಗಾವಿ: ಟ್ರೋಲ್‌ಗಳಿಗೆ ಆಹಾರವಾಗುತ್ತಿರುವ ಬೆಳಗಾವಿಯ ಚಾಲಾಕಿ ಚಿರತೆ. ಬೆಳಗಾವಿಯಲ್ಲಿ 23 ದಿನಗಳಿಂದ ಪತ್ತೆಯಾಗದ ಚಿರತೆ. ಶೋಧಕಾರ್ಯ ವೇಳೆ ಅರಣ್ಯ ಸಿಬ್ಬಂದಿಗೆ ದರ್ಶನ ನೀಡಿ ಮಾಯವಾಗುತ್ತಿರುವ ಚಿರತೆ. ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್ ಆಯ್ತು ಈಗ ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಮಾದರಿ ಸಿದ್ಧಪಡಿಸಿ ವೈರಲ್. ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಾವಿ ಚಿರತೆಯದ್ದೇ ಹವಾ. ಇಂದು 300ಕ್ಕೂ ಹೆಚ್ಚು ಸಿಬ್ಬಂದಿಯಿಂದ ಚಿರತೆಗಾಗಿ ಶೋಧ. ಗಾಲ್ಫ್ ಮೈದಾನದೊಳಗೆ ಎರಡು ಕಿಲೋಮೀಟರ್ ಉದ್ದದ ಬಲೆ ಅಳವಡಿಕೆ. ಸಕ್ರೆಬೈಲು ಆನೆ ಬಿಡಾರದಿಂದ ಬಂದ ಆಲೆ, ಅರ್ಜುನನಿಂದಲೂ ಶೋಧಕಾರ್ಯ.

02:11 PM (IST) Aug 27

Shivamogga: ಶಿರಾಳಕೊಪ್ಪದಲ್ಲಿ ಉದ್ಯಮಿ ಭೀಕರ ಹತ್ಯೆ

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಶಿರಳಕೊಪ್ಪದಲ್ಲಿ ಉದ್ಯಮಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಎ.ಆರ್. ದಯಾನಂದ ಹತ್ಯೆಗೀಡಾದ ದುರ್ದೈವಿ. ಎಂದಿನಂತೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಚಾಕುವಿನಿಂದ ದಯಾನಂದ ಹಾಗೂ ಅವರ ಪುತ್ರ ರಾಘವೇಂದ್ರ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕು ಇರಿತಕ್ಕೆ ಒಳಗಾದ ದಯಾನಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಅವರ ಪುತ್ರ ರಾಘವೇಂದ್ರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಯಾರೆಂಬುದು ಇದುವರೆಗೂ ಪತ್ತೆಯಾಗಿಲ್ಲ. ದಯಾನಂದ್ ಮತ್ತವರ ಪುತ್ರ ರಾಘವೇಂದ್ರ ಅವರು ಶಿರಾಳಕೊಪ್ಪದಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಅಲ್ಲದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಸಾಧ್ಯತೆ ಇದೆ, ಎನ್ನಲಾಗುತ್ತಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

01:32 PM (IST) Aug 27

ಚಾಮರಾಜಪೇಟೆಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಇಡ್ತೀವಿ‌‌.!

ಜಮೀರ್ ಸೇರಿದಂತೆ ಎಲ್ಲರೂ ಹಬ್ಬಕ್ಕೆ ಬಂದೂ ಆರತಿ ತೆಗೆದುಕೊಂಡು ಹೋಗಬಹುದು. ಎಲ್ಲರಿಗೂ ಮುಕ್ತ ಅವಕಾಶ ಇದೆ. ನಮ್ಮ ಮಧ್ಯೆ ಯಾವುದೇ ಒಡಕು ಇಲ್ಲ.‌ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರಿಗೆ ಅನುಮತಿ ಕೊಟ್ರೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಚಾಮರಾಜಪೇಟೆಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಇಡ್ತೀವಿ‌‌. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು. ಫೋಟೋ ಇಡೋದ್ರಲ್ಲಿ ತಪ್ಪೇನಿದೆ? ಪಾದರಾಯನಪುರ ಸೇರಿ ಚಾಮರಾಜಪೇಟೆಯ ಗಲ್ಲಿಯಲ್ಲಿ ಗಣೇಶೋತ್ಸವ ಮೆರವಣಿಗೆ ಮಾಡ್ತೀವಿ. ಈ ಹಿಂದೆ ರಸ್ತೆಯಲ್ಲಿ ಇಟ್ಟಾಗಲೂ ನಾವು ಅಲ್ಲೇ ಮೆರವಣಿಗೆ ಮಾಡುತ್ತಿದ್ದೆವು. ಹೀಗಾಗಿ ಇಲ್ಲೂ ಮೆರವಣಿಗೆಯ ಬಗ್ಗೆ ಈ ವರ್ಷ ಪ್ಲ್ಯಾನ್ಸ್ ಇದೆ. ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ಹೋಗೋದಿದ್ರೇ ಹೋಗಲಿ. ನಮಗೆ ಯಾವ ಅಭ್ಯಂತರವಾಗಲಿ, ಭಯ ಇಲ್ಲ. ಅವ್ರು ಸುಪ್ರೀಂ ಕೋರ್ಟ್‌ಗೆ ಹೋದ್ರೇ ನಾವು ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ. ನಮ್ಮ ಒಕ್ಕೂಟ ಒಡೆಯಲು ಕೆಲವು ಕುತಂತ್ರಿಗಳು ಬಾರೀ ಪ್ರಯತ್ನ ಮಾಡಿದ್ರು. ಆದ್ರೇ ನಾವು ಒಗ್ಗಟ್ಟಿನಲ್ಲಿದ್ದೇನೆ, ಎಂದಿದ್ದಾರೆ ಲಹರಿ ವೇಲು.

01:08 PM (IST) Aug 27

ಚಾಮರಾಜಪೇಟೆ ಮೈದಾನದಲ್ಲಿ ಪ್ರತಿ ವರ್ಷವೂ ಗಣೇಶೋತ್ಸವ: ಲಹರಿ ವೇಲು

ಚಾಮರಾಜಪೇಟೆ ನಾಗರಿಕ ಒಕ್ಕೂಟ ರುಕ್ಮಾಂಗ ವತಿಯಿಂದ ಲಹರಿ ವೇಲು ಹೇಳಿಕೆ, ತುಂಬಾ ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಅವರಿಗೆ ಯಾರಿಗೆ ಅನುಮತಿ ಕೊಟ್ರೂ ಒಟ್ಟಿಗೆ ಹಬ್ಬ ಆಚರಣೆ ಮಾಡ್ತೀವಿ. ಈಗಾಗಲೇ ಸಮಿತಿಗಳ ರಚನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಿದ್ದೇವೆ. ಇಡೀ ಕರ್ನಾಟಕದ ಜನ ಚಾಮರಾಜಪೇಟೆಯತ್ತ ನೋಡುತ್ತಿದ್ದಾರೆ.‌ ತಿರಂಗ ಹಾರಿಸೋಕೆ ನಾವು ಸತತ ಪ್ರಯತ್ನ ಮಾಡಿದ್ವಿ. ಕೊನೆಗೂ ಶಾಂತಿಯುತವಾಗಿ ಧ್ವಜಾರೋಹಣ ಮಾಡ್ತೀವಿ. ಗಣೇಶೋತ್ಸವ ಸಂಬಂಧ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಈಗಾಗಲೇ ನ್ಯಾಯಂಗದಲ್ಲಿ ಗಣೇಶೋತ್ಸವ ಆಚರಣೆ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 75 ವರ್ಷದಲ್ಲಿ ತಿರಂಗ ಗಣೇಶೋತ್ಸವವನ್ನು ಮಾಡೋದಕ್ಕೆ ಆಗಿರಲಿಲ್ಲ. ಇನ್ನು ಮಾಡುತ್ತೇವೆ ಎಂದಿದ್ದಾರೆ.

12:41 PM (IST) Aug 27

ಶಾಸಕ ವೀರಣ್ಣ ಚರಂತಿಮಠ ಸಹೋದರ ಬಿಜೆಪಿಯಿಂದ ಉಚ್ಚಾಟನೆ

ಬಾಗಲಕೋಟೆ: ಶಾಸಕ ವೀರಣ್ಣ ಚರಂತಿಮಠ ಸಹೋದರ ಬಿಜೆಪಿಯಿಂದ ಉಚ್ಚಾಟನೆ. ಬಾಗಲಕೋಟೆ ಶಾಸಕ ಚರಂತಿಮಠ ಸಹೋದರ ಮಲ್ಲಿಕಾರ್ಜುನ ಚರಂತಿಮಠ. ಉಚ್ಚಾಟನೆ ಮಾಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್. ಟಿ. ಪಾಟೀಲ್ ಆದೇಶ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡು ಪಕ್ಷಕ್ಕೆ ಮುಜುಗರ. ಬಾಗಲಕೋಟೆ ಶಾಸಕರಿಗೆ ಅವಮಾನ ಮಾಡುವ ರೀತಿ ವರ್ತನೆ ಆರೋಪ. ನಗರ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಉಚ್ಚಾಟನೆ. ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿರುವ ಅಧ್ಯಕ್ಷ ಎಸ್ ಟಿ ಪಾಟೀಲ್. 

12:38 PM (IST) Aug 27

Shivamogga: ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ

ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ! ಕಣ್ಣುಗಳು ಮತ್ತು ಗೊರಸು ಇಲ್ಲದ ಎಮ್ಮೆಯ ಕರು! ಸೊರಬ ಪಟ್ಟಣದ ಹಳೇಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ನಡೆದ ಘಟನೆ. ಮಹೇಂದ್ರಸ್ವಾಮಿ ಎಂಬುವವರಿಗೆ ಸೇರಿದ ಎಮ್ಮೆ. ಇಂದು ಬೆಳಗಿನ ಜಾವ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದೆ. ಕಣ್ಣು, ಗೊರಸು ಇಲ್ಲದೇ ಬಾಯಿಯ ಮೂಲಕವೇ ಉಸಿರಾಡುತ್ತಿದೆ. ದೇಹ ಸಾಮಾನ್ಯ ಸ್ಥಿತಿಯಲ್ಲಿದ್ದರೂ ಏಳಲು ಸಾಧ್ಯವಾಗದೇ ಒದ್ದಾಡುತ್ತಿದೆ. ಈ ಎಮ್ಮೆಗೆ ಜನಿಸಿದ ಆರನೇ ಕರುವಾಗಿದ್ದು, ಐದು ಕರುಗಳು ಸಾಮಾನ್ಯವಾಗಿ ಜನಿಸಿದ್ದವು. ಆದರೆ ಈ ಆರನೇ ಬಾರಿ ಜನಿಸಿದ ಕರುವು ವಿಚಿತ್ರವಾಗಿ ಜನಿಸಿದೆ. ವೈದ್ಯರು ಈ ಕರು ಹೆಚ್ಚು ಕಾಲ ಬದುಕುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಎಮ್ಮೆಯ ಮಾಲೀಕ ಮಹೇಂದ್ರ ಸ್ವಾಮಿ ಮಾಹಿತಿ ನೀಡಿದ್ದಾರೆ.

12:11 PM (IST) Aug 27

ಕಲಬುರಗಿ: ತೋಳದ ದಾಳಿಗೆ ಬಲಿಯಾದ 9 ತಿಂಗಳ ಹಸುಗೂಸು

ತೋಳದ ದಾಳಿಗೆ ಬಲಿಯಾದ 9 ತಿಂಗಳ ಹಸುಗೂಸು. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಘಟನೆ. ತಾಯಿ ಹೊಲದಲ್ಲಿ ಕಳೆ ತೆಗೆಯುವ ಸಂದರ್ಭದಲ್ಲಿ ನಡೆದ ಘಟನೆ. ಮರಕ್ಕೆ ಸೀರೆಯಿಂದ ಜೋಳಿಗೆ ಕಟ್ಟಿ ಅದರಲ್ಲಿ ಮಗವನ್ನು ಮಲಗಿಸಿ ಕಳೆ ತೆಗೆಯುತ್ತಿದ್ದ ತಾಯಿ. ಸ್ವಲ್ಪ ಹೊತ್ತಿನ ನಂತರ ನೋಡಿದಾಗ ಜೋಳಿಗೆಯಲ್ಲಿ ಮಗು ಕಾಣದೇ ಕಂಗಾಲಾದ ತಾಯಿ. ಎಲ್ಲಾ ಕಡೆ ಹುಡುಕಿದರೂ ಸಿಗದ ಮಗುವಿನ ಸುಳಿವು. ಎರಡು ದಿನಗಳ ಬಳಿ ನಾಪತ್ತೆಯಾಗಿದ್ದ ಸ್ಥಳದಿಂದ ತುಸು ದೂರದಲ್ಲಿ ಮಗುವಿನ ಕಳೆಬರ ಪತ್ತೆ. ಅರ್ದಂಬರ್ದ ದೇಹದೊಂದಿಗೆ ಮಗುವಿನ ಶವ ಪತ್ತೆ. 9 ತಿಂಗಳ ಗಂಡು ಕೂಸು ಭೀರಪ್ಪ ಮೃತ ದುರ್ದೈವಿ. ತೋಳ ದಾಳಿ ಮಾಡಿ ಮಗುವನ್ನು ಹೊತ್ತೊಯ್ದು ತಿಂದಿರುವ ಶಂಕೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

11:58 AM (IST) Aug 27

ಮಂತ್ರಾಲಯಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ರಾಯಚೂರು: ಮಂತ್ರಾಲಯಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ. ರಾಯರ ಮೂಲ ಬೃಂದಾವನ ದರ್ಶನ ಪಡೆದ ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ನಂತರ ಮಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಗೆ ಫಲಪುಷ್ಪ ನೀಡಿ ಆಶೀರ್ವಾದ. ರಾಯಚೂರಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ ಸಿರಿಧಾನ್ಯಗಳ ಅಭಿಯಾನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿರುವ ಸಚಿವರು. 

11:12 AM (IST) Aug 27

ವರುಣನ ಆರ್ಭಟಕ್ಕೆ ನಲುಗಿದ ಯಾದಗಿರಿ ಜನತೆ

ಯಾದಗಿರಿ: ವರುಣನ ಆರ್ಭಟಕ್ಕೆ ನಲುಗಿದ ಯಾದಗಿರಿ ಜನತೆ. ವಡಗೇರಾ ತಾಲೂಕಿನ ಹಲವು ಸೇತುವೆಗಳು ಜಲಾವೃತ. ಹಯ್ಯಾಳದಿಂದ ವಡಗೇರಾ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ. ಸೇತುವೆ ಮೇಲೆ ರಭಸದಿಂದ ಹರಿಯುತ್ತಿರುವ ನೀರು. ಬಸಂಪುರ ಸೇತುವೆ ಜಲಾವೃತ. ಉಕ್ಕಿ ಹರಿಯುತ್ತಿರುವ ನೀರಿನ ನಡುವೆ ಸೇತುವೆ ದಾಟಲು ಜನರ ಹುಚ್ಚಾಟ. ಸ್ಥಳಕ್ಕೆ ವಡಗೇರಾ ತಹಶಿಲ್ದಾರ್ ಸುರೇಶ ಅಂಕಲಗಿ ಭೇಟಿ. ಸೇತುವೆ ಮೇಲೆ ಬರ ಬೇಡಿ ಅಂತಾ ಸ್ಥಳದಲ್ಲಿ ನಿಂತು ಹೇಳಿದರು ಕ್ಯಾರೆ ಅನ್ನದ ಜನ. ಸೆತುವೆ ದಾಟಲು ಪ್ರಯಾಣಿಕರ ಹರಸಾಹಸ.

10:50 AM (IST) Aug 27

ರಾಯಚೂರಿಗೆ ತೆರಳಿದ ಸಿಎಂ ಬೊಮ್ಮಾಯಿ‌

ರಾಯಚೂರಿಗೆ ತೆರಳಿದ ಸಿಎಂ ಬೊಮ್ಮಾಯಿ‌. ಹೆಚ್ಎಎಲ್‌ನಿಂದ ವಿಶೇಷ ವಿಮಾನ ಮೂಲಕ ಬಳ್ಳಾರಿಯ ಜಿಂದಾಲ್ ಏರ್ ಸ್ಟ್ರಿಪ್ಟ್ ಗೆ ಪ್ರಯಾಣ. ಜಿಂದಾಲ್ ಏರ್ ಸ್ಟ್ರಿಪ್ ನಿಂದ ಹೆಲಿಕಾಪ್ಟರ್ ಮೂಲಕ ರಾಯಚೂರಿಗೆ ಪ್ರಯಾಣ. ರಾಯಚೂರಿನಲ್ಲಿ 100 ಹಾಸಿಗೆಗಳ ಆರಾಧನಾ ಆಸ್ಪತ್ರೆ ಉದ್ಘಾಟಿಸಲಿರುವ ಸಿಎಂ. ಅಲ್ದೇ ರಾಯಚೂರಿನಲ್ಲಿ ಮಿಲ್ಲೆಟ್ ಮೇಳ ಉದ್ಘಾಟಿಸಲಿರುವ ಸಿಎಂ. ರಾಯಚೂರು ಜಿಲ್ಲಾ ಕಾರ್ಯಕ್ರಮ ಮುಗಿಸಿ ಇಂದು ಸಂಜೆ ಬೆಂಗಳೂರಿಗೆ ವಾಪಸ್ ಆಗಲಿರುವ ಸಿಎಂ.

10:25 AM (IST) Aug 27

ರಾಮನಗರದಲ್ಲಿ ಮಳೆ ಆರ್ಭಟ

- ಮನೆ ಮತ್ತು ಜಮೀನುಗಳಲ್ಲಿ ಹರಿದ ಮಳೆ ನೀರು
- ಮೈ-ಬೆಂ ಹೆದ್ದಾರಿ ಸೇರಿ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತ
ರಾತ್ರಿಯಿಡೀ ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ 
ಮಳೆಯಿಂದಾಗಿ ಹಲವು ಕಡೆ ನಾಗರಿಕರ ಪರದಾಟ 
ಚನ್ನಪಟ್ಟಣದ ಎಲೆಕೇರಿ ಬಡಾವಣೆ ಜನರ ಪರಿತಾಪ 
ಮಳೆನೀರಿನಿಂದ ಕೆರೆಯಂತಾಗಿರುವ ಎಲೆಕೇರಿ ಬಡಾವಣೆ
ಮಂಡಿಯುದ್ದ ನೀರು ನಿಂತು ರಾತ್ರಿಯಿಡೀ ನಿವಾಸಿಗಳ ಪರದಾಟ
ರಸ್ತೆಯಲ್ಲಿಯೇ ನೀರು ನಿಂತ ಹಿನ್ನೆಲೆ ಸಂಚಾರ ಅಸ್ತವ್ಯಸ್ತ
ದೇವರಹೊಸಹಳ್ಳಿ, ರಾಂಪುರ ಕೋಮನಹಳ್ಳಿ ಸೇರಿದಂತೆ ನಾಲ್ಕಾರು ಗ್ರಾಮಗಳ ಸಂಪರ್ಕ ಕಡಿತ

10:23 AM (IST) Aug 27

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ: ಅಶೋಕ್ ಹೆಗಲಿಗೆ ಹೊಣೆ

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ಕೊಡತ್ತಾ ಸರ್ಕಾರ. ಅಧಿಕಾರಿಗಳ ಸಭೆ ಮಾಡಿ ಎಂದು ಅಶೋಕ್ ಹೆಗಲಿಗೆ ಜವಬ್ದಾರಿ ವಹಿಸಿದ ಸಿಎಂ ಬೊಮ್ಮಾಯಿ. ಸ್ವಾತಂತ್ರ್ಯ ದಿನಾಚರಣೆ ಯಶಸ್ವಿ ಆಗಿ ಮಾಡಿದ್ದೀರಿ. ಈಗ ಗಣೇಶೋತ್ಸವ ಮಾಡುವ ಬಗ್ಗೆ ಅಧಿಕಾರಿಗಳ ಸಭೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ. ಅಶೋಕ್ ಹೆಗಲಿಗೆ ಪೂರ್ತಿ ಜವಬ್ದಾರಿ ವಹಿಸಿದ ಸಿಎಂ. ಈ ಹಿನ್ನಲೆಯಲ್ಲಿ ಇಂದು ಹೈ ವೋಲ್ಟೇಜ್ ಸಭೆ. ಅಶೋಕ್ ನೇತೃತ್ವದಲ್ಲಿ ರೇಸ್ ಕೋರ್ಸ್ ಸಿಎಂ ನಿವಾಸದಲ್ಲಿ ಸಭೆ. ಸಿಎಂ ಅನುಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಕಂದಾಯ ಅಧಿಕಾರಿಗಳು, ಬಿಬಿಎಂಪಿ ಕಮೀಷನರ್, ಪೊಲೀಸ್ ಕಮಿಷನರ್, ಇಂಟಲಿಜೆನ್ಸ್ ಹೆಡ್ ಒಳಗೊಂಡ ಸಭೆ. ಬೆಳಗ್ಗೆ 10-30 ಕ್ಕೆ ಸಭೆ ನಿಗದಿ‌‌‌. ಗಣೇಶೋತ್ಸವ ಮಾಡಬೇಕಾ ಬೇಡವಾ?
ಪರಿಸ್ಥಿತಿ ಹೇಗಿದೆ. ಆಚರಣೆಗೆ ಅವಕಾಶ ನೀಡಿದ್ರೆ ಹೇಗೆ ನೀಡದೆ ಇದ್ರೆ ಆಗುವ ಪರಿಣಾಮ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ. ಅಶೋಕ್ ನೇತೃತ್ವದಲ್ಲಿ ಸಭೆ ನಿಗದಿ.

10:19 AM (IST) Aug 27

ಗಣೇಶೋತ್ಸವ ಆಚರಣೆಗೆ ನೂರೆಂಟು ರೂಲ್ಸ್

ಪೊಲೀಸ್ ಇಲಾಖೆಯಿಂದ ಸಿದ್ದವಾಗಿದೆ ಹತ್ತಾರು ನಿಬಂಧನೆಗಳು. ಆಯೋಜಕರು ಪೊಲೀಸರ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಹಾಗಾದ್ರೆ ಆ ನಿಬಂಧನೆಗಳು ಯಾವುದು ನೀವೇ ನೋಡಿ.

•ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿಯಲ್ಲಿ ಅನುಮತಿ ಪಡೆಯಬೇಕು.
•ಸದೃಢವಾಗಿ ಶಾಮಿಯಾನ ನಿರ್ಮಿಸಬೇಕು, ಶಾಮಿಯಾನಗೆ ಪ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸಬಹುದು‌. ಅದ್ರೆ ಶಾಮಿಯಾನ ಹೊರತುಪಡಿಸಿ ಬೇರೆಡೆ ಪ್ಲೆಕ್ಸ್ ಬ್ಯಾನರ್ ಬಂಟಿಂಗ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು.
•ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವಂತಿಲ್ಲ. ಹಾಗೂ ಸ್ಥಳ ಮಾಲೀಕರು ಮತ್ತು ಬಿಬಿಎಂಪಿ ಏಕಗವಾಕ್ಷಿ ಅನುಮತಿ ಪಡೆಯಬೇಕು.
•ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 24 ಗಂಟೆ ಆಯೋಜಕ ಕಾರ್ಯಕರ್ತರು ಇರಬೇಕು. ಅವರ ವಿವರ ಪೊಲೀಸರಿಗೆ ಕೊಡಬೇಕು ಸೇರಿ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ.

10:16 AM (IST) Aug 27

ಗಣೇಶ ಹಬ್ಬಕ್ಕೆ ಚೆಂದ ವಸೂಲಿ: ಪೊಲೀಸ್ ಕಮಿಷನರ್‌ಗೆ ದೂರು

ಗಣೇಶ ಹಬ್ಬಕ್ಕೆ ಚಂದ ವಸೂಲಿ ಮಾಡಲು ಶಾಲಾ ಮಕ್ಕಳ ಬಳಕೆ ಆರೋಪ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮೀಷನರ್ ಗೆ ದೂರು. ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮಿತಿಯಿಂದ ದೂರು. ಕೆಲವು ಸಂಘ ಸಂಸ್ಥೆಗಳು, ಗಣೇಶ ಮಿತ್ರ ಮಂಡಳಿಗಳು ಶಾಲಾ ಮಕ್ಕಳನ್ನ ಚಂದ ವಸೂಲಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಶಾಲಾ ಮಕ್ಕಳಿಗೆ ಚಂದ ಪುಸ್ತಕ ಹಾಗೂ ಡಬ್ಬಗಳನ್ನು ನೀಡಿ ಮನೆ ಮನೆಗೆ ತೆರಳಿ ಚಂದ ವಸೂಲಿ ಮಾಡಿಸುತ್ತಿದ್ದು, ಈ ಬಗ್ಗೆ ಪೋಷಕರು ಕರೆ ಮಾಡಿ ಅಳಲು ವ್ಯಕ್ತಪಡಿಸಿದ್ದಾರೆ. ಗಣೇಶ ಪ್ರತಿಷ್ಟಾಪನೆ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸುವಾಗ ಮಕ್ಕಳನ್ನ ಚಂದ ವಸೂಲಿಗೆ ಬಳಸಕೊಳ್ಳದಂತೆ ಸೂಚಿಸಬೇಕು. ಹಾಗೂ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು. ಪೊಲೀಸ್ ಕಮೀಷನರ್‌ಗೆ ದೂರು ನೀಡಿದ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮಿತಿ.