Asianet Suvarna News Asianet Suvarna News

ಕನ್ನಡ ನಾಮಫಲಕ ಕಡ್ಡಾಯ ಅಳವಡಿಸಬೇಕು; ಅಂಗಡಿ ಮುಂಗಟ್ಟು ಶಾಪಿಂಗ್ ಮಾಲ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಬಿಬಿಎಂಪಿ ಆಯುಕ್ತ! 

ಬೆಂಗಳೂರಿನಲ್ಲಿ ಅಂಗಡಿ-ಮುಂಗಟ್ಟುಗಳು, ಶಾಪಿಂಗ್ ಮಾಲ್, ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕನ್ನಡ ನಾಪಫಲಕ ಆಳವಡಿಕೆ ಫೆಬ್ರವರಿ 28 ರಂದು ಡೆಡ್ಲೈನ್ ಕೊಟ್ಟಿರುವ ಆಯುಕ್ತರು. ಕನ್ನಡ ನಾಮಫಲಕ ಅಳವಡಿಸದೇ ನಿಯಮ ಉಲ್ಲಂಘಿಸಿದವರ ವಾಣಿಜ್ಯ ಪರವಾನಗಿ ರದ್ದುಪಡಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

Kannada nameplate is mandatory for shops and malls instruction by BBMP Commissioner at bengaluru rav
Author
First Published Dec 24, 2023, 6:14 PM IST

ಬೆಂಗಳೂರು (ಡಿ.24): ಬೆಂಗಳೂರಿನಲ್ಲಿ ಅಂಗಡಿ-ಮುಂಗಟ್ಟುಗಳು, ಶಾಪಿಂಗ್ ಮಾಲ್, ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ನಾಪಫಲಕ ಆಳವಡಿಕೆ ಫೆಬ್ರವರಿ 28 ರಂದು ಡೆಡ್ಲೈನ್ ಕೊಟ್ಟಿರುವ ಆಯುಕ್ತರು. ಕನ್ನಡ ನಾಮಫಲಕ ಅಳವಡಿಸದೇ ನಿಯಮ ಉಲ್ಲಂಘಿಸಿದವರ ವಾಣಿಜ್ಯ ಪರವಾನಗಿ ರದ್ದುಪಡಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕ್ರಿಸ್ಮಸ್, ಹೊಸವರ್ಷಕ್ಕೆ ಊರಿಗೆ ಹೊರಟವರಿಗೆ ಶಾಕ್; ಖಾಸಗಿ ಬಸ್ ಬುಕಿಂಗ್ ಆಪ್‌ಗಳಿಂದ ಪ್ರಯಾಣಿಕರ ಸುಲಿಗೆ!

ಇನ್ನು ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕುರಿತಂತೆ ಮಾತನಾಡಿದ ಅವರು, ಸರ್ಕಾರ ಕೊಟ್ಟಿರುವ ಟಾರ್ಗೆಟ್ ನಂತೆ ಟೆಸ್ಟಿಂಗ್ ಮಾಡಿದ್ದೇವೆ. ಮೊದಲ ದಿನ ಟಾರ್ಗೆಟ್ ಗಿಂತ ಹೆಚ್ಚು ಟೆಸ್ಟಿಂಗ್ ಮಾಡಿದ್ದೇವೆ. ಆರೋಗ್ಯ ಇಲಾಖೆ ಸೂಚನೆಯಂತೆ ಲ್ಯಾಬ್ ಗೆ ರವಾನೆಯಾಗ್ತಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಆದರೆ ಅದನ್ನು ಸರಿಪಡಿಸಿ ಟೆಸ್ಟಿಂಗ್ ನಡೆಸಲಾಗ್ತಿದೆ ಎಂದರು.

ಹೊಸ ವರ್ಷಾಚರಣೆಗೆ ನೂತನವಾಗಿ ಗೈಡ್‌ಲೈನ್ ವಿಚಾರ ಸಂಬಂಧ ಮಾತನಾಡಿದ ಆಯುಕ್ತರು, ಈಗಾಗಲೇ ಪೊಲೀಸರಿಂದ ಸಭೆ ನಡೆಸಲಾಗಿದೆ. 27ನೇ ತಾರೀಕು ತಾಂತ್ರಿಕ ಸಲಹಾ ಸಮಿತಿಯಿಂದ ಸಭೆ ಇದೆ. ಈ ಸಭೆ ಬಳಿಕ ಏನು ನಿರ್ಧಾರ ಆಗುತ್ತೆ ನೋಡಬೇಕಿದೆ. ಪೊಲೀಸ್ ಇಲಾಖೆ, ತಾಂತ್ರಿಕ ಸಲಹಾ ಸಮಿತಿ, ಪಾಲಿಕೆ ಸೇರಿ ಗೈಡ್ ಲೈನ್ ರೆಡಿ ಮಾಡ್ತೀವೆ. ಸಭೆಯಲ್ಲಿ ನಿರ್ಧರಿಸಿದ ಬಳಿಕ ಗೈಡ್‌ಲೈನ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ತಾಕತ್ತು ಇದ್ರೆ ಹಿಂದೂ ರಾಷ್ಟ್ರವಾಗೋದನ್ನು ತಡೆಯಲಿ: ಸಿಎಂ ಸಿದ್ದರಾಮಯ್ಯಗೆ ಸಂಸದ ಅನಂತಕುಮಾರ ಹೆಗಡೆ ಸವಾಲು!

Follow Us:
Download App:
  • android
  • ios