* ಭಾರತ ಸ್ವಾತಂತ್ರೋತ್ಸವ ಅಮೃತೋತ್ಸವದ ಸವಿನೆನಪು* ಕರ್ನಾಟಕ ವಿದ್ಯಾವರ್ಧಕ ಸಂಘ, ದಾರವಾಡ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಕ್ರಮ* ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಸಂಭ್ರಮ
ಪಣಜಿ(ಮೇ.29): ಭಾರತ ಸ್ವಾತಂತ್ರೋತ್ಸವ ಅಮೃತೋತ್ಸವದ ಸವಿನೆನಪಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ದಾರವಾಡ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹಾಗೂ ಅಖಿಲ ಗೋವಾ ಕನ್ನಡ ಮಹಾಸಂಘದ ಸಹಕಾರದೊಂದಿಗೆ ದಿನಾಂಕ:29-5-2022 ರಂದು ಗೋವಾ(ವಾಸ್ಕೋ)ದಲ್ಲಿ ನಡೆದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಕೃಷ್ಣ(ದಾಜಿ) ಸಾಳಕರ, ಶಾಸಕರು, ವಾಸ್ಕೋದ ಗಾಮಾ ಚೇರ್‌ಮೇನ್ ಇವರು ಉದ್ಘಾಟಿಸಿದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಡಾ.ಸಿ.ಸೋಮಶೇಖರ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾರ್ಯಕ್ರಮದಲ್ಲಿ ಶ್ರೀ ಸಿದ್ದಣ್ಣ ಎಸ್. ಮೇಟಿ, ಗೌರವಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಗೋವಾ ಘಟಕ, ಶ್ರೀ ದಾಮೋದರ ಮಾವಜೋ, ಗೋವಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ದಂಪತಿಗಳನ್ನು ಸನ್ಮಾನಿಸಲಾಯಿತು, ಶ್ರೀ ಚಂದ್ರಕಾಂತ ಬೆಲ್ಲದ, ಅಧ್ಯಕ್ಷರು, ಕರ್ನಾಟಕ ವಿಧ್ಯಾವರ್ಧಕ ಸಂಘ, ಧಾರವಾಡ, ಶ್ರೀ ಪ್ರಕಾಶ ಮತ್ತೀಹಳ್ಳಿ, ಕಾರ್ಯದರ್ಶಿಗಳು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ , ಶ್ರೀ ಹನುಮಂತ ಶಿರೂರ, ಅಧ್ಯಕ್ಷರು,ಗೋವಾ ಕನ್ನಡ ಮಹಾಸಂಘ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಗಡಿನಾಡ ಕನ್ನಡಿಗರ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಶ್ರೀ ಬಸವಪ್ರಭು ಹೊಸಕೇರಿ, ಉಪಾಧ್ಯಕ್ಷರು, ಕ.ವಿ.ವ. ಸಂಘ, ಧಾರವಾಡ ಇವರು ಚಾಲನೆ ನೀಡಿ, ಡಾ. ಅರವಿಂದ ಯಾಳಗಿ, ನಿರ್ದೇಶಕರು, ಇಂಡೋ-ಪೋರ್ಚ್‌ಗೀಸ್ ಸಾಹಿತ್ಯ ಪ್ರತಿಷ್ಠಾನ ಇವರ ಅಧ್ಯಕ್ಷತೆಯಲ್ಲಿ ಶ್ರೀ ಸಿ.ಚನ್ನಬಸಪ್ಪ, ಲೋಹಿಯಾ, ಪ್ರಕಾಶನ ಬಳ್ಳಾರಿ ಇವರು ವಿಷಯ ಮಂಡನೆ ಮಾಡಿದರು.
ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶ್ರೀ ಪ್ರಕಾಶ ಮತ್ತೀಹಳ್ಳಿ, ಕಾರ್ಯದರ್ಶಿಗಳು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರು ಉದ್ಛಾಟಿಸಿ, ಶ್ರೀ ಮಾರುತಿ ಬಡಿಗೇರ, ಪತ್ರಕರ್ತ, ಪ್ರಧಾನ ಕಾರ್ಯದರ್ಶಿ, ಜನ್ಮಭೂಮಿ ಪೌಂಡೇಶನ್, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ವಿವಿಧ ಕಲಾವಿದರು, ವಚನ ಗಾಯನ ನೃತ್ಯ, ಭರತನಾಟ್ಯಂ, ದಾಂಡಿಯಾ, ಕನ್ನಡ ನಾಡು-ನುಡಿ ನೃತ್ಯ ರೂಪಕ, ಹಾಸ್ಯ ಲಾಸ್ಯ, ಮಾತನಾಡುವ ಗೊಂಬೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ಕಾರ್ಯಕ್ರಮ ನೀಡಿದರು.
ಕವಿಗೋಷ್ಠಿ ಕಾರ್ಯಕ್ರಮಕ್ಕೆ ಪ್ರೊ. ಪ್ರಜ್ಞಾ ಮತ್ತೀಹಳ್ಳಿ, ಸಾಹಿತಿಗಳು, ಧಾರವಾಡ ಇವರು ಚಾಲನೆ ನೀಡಿ, ಅಧ್ಯಕ್ಷತೆಯಲ್ಲಿ, ಶ್ರೀ ನಾರಾಯಣ ಕುಲಕರ್ಣಿ, ಡಿ. ಲಿಂಗರಾಜ ರಾಮಾಪುರ ಮುಂತಾದ ಹಿರಿಯ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು.
ಸಮರೋಪ ಸಮಾರಂಭವನ್ನು ಪ್ರೊ. ಮಾಲತಿ ಪಟ್ಟಣಶೆಟ್ಟಿ, ಉಪಾಧ್ಯಕ್ಷರು, ಕರ್ನಾಟಕ ವಿಧ್ಯಾವರ್ಧಕ ಸಂಘ, ಧಾರವಾಡ, ಮಾಜಿ ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಅಧ‍್ಯಕ್ಷತೆಯಲ್ಲಿ ಡಾ.ಸಿ. ಸೋಮಶೇಖರ, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀ. ಸಿ.ಯು. ಬೆಳ್ಳಕ್ಕಿ, ವಿಶ್ರಾಂತ ನಿಲಯ ನಿರ್ದೇಶಕರು, ಆಕಾಶವಾಣಿ, ಧಾರವಾಡ, ಶ್ರೀ ದಿಲೀಪ್ ಎಸ್ ಭಜಂತ್ರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಗೋವಾ ಘಟಕ ಮತ್ತಿತರರು ಉಪಸ್ಥಿತರಿದ್ದರು.