Ranya rao gold smuggling case: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹ್ಯಾಂಡ್ಲಿಂಗ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಮಂತ್ರಿಗಳ ಕೈವಾಡವಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಹುಬ್ಬಳ್ಳಿ (ಮಾ.13): ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹ್ಯಾಂಡ್ಲಿಂಗ್ ಗಮನಿಸಿದ್ರೆ ಯಾರನ್ನೋ ರಕ್ಷಣೆ ಮಾಡುವಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂಶಯ ವ್ಯಕ್ತಪಡಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ‌ರು, ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಿ ವರದಿಗಳು ಬರುತ್ತಿವೆ. ಈ ಪ್ರಕರಣದಲ್ಲಿ ಆರೋಪಿಗಳ ಸಮೀಪವರ್ತಿಗಳ ಕುರಿತು ಸ್ಪಷ್ಟವಾಗುತ್ತಿದೆ. ಇದರಲ್ಲಿ ಕೆಲವು ಮಂತ್ರಿಗಳಿರುವುದು ಸಹ ಗಮನದಲ್ಲಿದೆ. ಆದ್ರೆ ರಾಜ್ಯ ಸರ್ಕಾರದ ಒಬ್ಬೊಬ್ಬ ಮಂತ್ರಿಯೂ ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಈ ಪ್ರಕರಣದಲ್ಲಿ ಮಂತ್ರಿಗಳ ಕೈವಾಡವಿದೆ ಅನ್ನೋದು ತೋರಿಸುತ್ತೆ ಎಂದರು.

ಈ ಪ್ರೋಟೋಕಾಲ್ ಕೊಟ್ಟವರು ಯಾರು?

ಗೃಹ ಸಚಿವರು ಯಾವುದೇ ಒತ್ತಡಕ್ಕೆ ಒಳಗಾಗದೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೆಕು. ನಮಗೆ ಗೃಹಮಂತ್ರಿ ಅವರ ಮೇಲೆ ಗೌರವ ಇದೆ. ಯಾರದೋ ಒತ್ತಡದಿಂದ ಹೇಳಿಕೆ ನೀಡಬಾರದು. ಯಾವುದೇ ಮುಲಾಜಿಲ್ಲದೆ ತನಿಖೆಯನ್ನ ಸಿಬಿಐಗೆ ವಹಿಸಬೇಕು. ಪ್ರಕರಣದ ಗಂಭೀರತೆ ಅರಿತು ರಾಜ್ಯ ಸರ್ಕಾರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಮಾಡೋದು ಕಲಿತದ್ದು ಹೇಗೆ? Actor Ranya Rao

ದೇಶದ್ರೋಹ ಕೆಲಸ:

ರನ್ಯಾರಾವ್ ಮಾಡಿರುವುದು ದೇಶದ್ರೋಹದ ಕೆಲಸ. ಈ ರೀತಿ ಅಕ್ರಮವಾಗಿ ತಂದಿದ್ದು ಎಲ್ಲಿಗೆ ಹೋಗುತ್ತಿತ್ತು? ಈ ಗೋಲ್ದ್ ಸ್ಮಗ್ಲಿಂಗ್ ಮೂಲಕ ಯಾರಿಗೆ ತಲುಪುತ್ತಿತ್ತು, ದೇಶದ್ರೋಹಿಗಳಿಗಾ? ನಕ್ಸಲರಿಗಾ? ಇದರಲ್ಲಿ ರಾಜ್ಯ ಸರ್ಕಾರ ರಕ್ಷಣೆ ಮಾಡಲು ಹೊರಟಿರುವುದು ಸ್ಪಷ್ಟವಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇದೆ ಅನ್ನಿಸುತ್ತಿದೆ.ಈ ಪ್ರಕರಣದಲ್ಲಿ ಡಿಐಜಿ ಮಗಳು ಆರೋಪಿಯಾದ ಕಾರಣ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಒಬ್ಬ ಡಿಐಜಿಯನ್ನ ಒಬ್ಬ ಸಿಐಡಿ ಎಸ್ಪಿ ತನಿಖೆ ಮಾಡಲು ಆಗುತ್ತಾ? ಹೀಗಾಗಿ ಈ ಪ್ರಕರಣ ಸಿಬಿಐಗೆ ಒಪ್ಪಿಸಬೇಕು. ಎಂದು ಒತ್ತಾಯಿಸಿದರು.

ಲೂಟಿ ಹೊಡೆದು ಸರ್ಕಾರ ನಡೆಸೋದು ಬಿಡಿ:

'ಐದು ವರ್ಷ ನಾನೇ ಸಿಎಂ' ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪದೇಪದೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಆ ರೀತಿ ಯಾಕೆ ಹೇಳಿಕೆ ಕೊಡುತ್ತಿದ್ದಾರೆ? ಅವರಲ್ಲೇ ಸಾಕಷ್ಟು ಗೊಂದಲಗಳಿರುವ ಹಿನ್ನೆಲೆ ಅಂತಹ ಹೇಳಿಕೆ ನೀಡುತ್ತಿದ್ದಾರೆ. ಜನರು ಐದು ವರ್ಷ ಆಡಳಿತ ನಡೆಸಲಿ ಎಂದು ಅಧಿಕಾರ ಕೊಟ್ಟರೆ ಇವರು ಪ್ರಾಮಾಣಿಕವಾಗಿ ಅಧಿಕಾರ ನಡೆಸುವುದು ಬಿಟ್ಟು ಲೂಟಿ ಹೊಡೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದ್ದಾರೆ. ಮೊದಲು ಜನರ ಕೊಟ್ಟಿರೋ ಆಡಳಿಯ ಚೆನ್ನಾಗಿ ನಡೆಸಿ. ಜನರ ದುಡ್ಡು ಲೂಟಿ ಹೊಡೆದು ಆಡಳಿತ ನಡೆಸಬೇಡಿ ಎಂದು ಸಲಹೆ ನೀಡಿದರು.

ಮುಸ್ಲಿಮರಿಗೆ 4 ಅಲ್ಲ, 10% ಮೀಸಲಾತಿ ಎಂದ ಜಮೀರ್ ವಿರುದ್ಧ ಕಿಡಿ:

ಮುಸ್ಲಿಮರ ಮೀಸಲಾತಿ 4% ನಿಂದ‌ 10% ಹೆಚ್ಚಿಸುವ ಹುನ್ನಾರ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ದುಸ್ಸಾಹಸಕ್ಕೆ ಕೈಹಾಕಿದ್ರೆ ನಾವು ಸುಮ್ನಿರೋಲ್ಲ. ಹೋರಾಟ ತೀವ್ರಗೊಳಿಸುತ್ತೇವೆ.

ಇದನ್ನೂ ಓದಿ: ರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್‌ ಫೋಟೋಗಳನ್ನು ಡಿಲೀಟ್

ಜಮೀರ್ ಹೇಳಿದ ಕೂಡಲೇ ಮೀಸಲಾತಿ ಹೆಚ್ಚಿಸಲು ಬರೋದಿಲ್ಲ. ಜಮೀರ್ ಅಹ್ಮದ್ ಈ ಹಿಂದೆ ಮಾಡಿದ ಅವಾಂತರ ಎಲ್ಲರಿಗೂ ಗೊತ್ತಿದೆ. ಬಡ ರೈತರು ಜಮೀನು ಕಿತ್ತುಕೊಳ್ಳಲು ಹೋಗಿದ್ದಕ್ಕೆ ರೈತರು ಜೀವ ಕಳೆದುಕೊಂಡರು. ಈಗ ಜಮೀರ್ ಮಾತು ಕೇಳಿ ಮೀಸಲಾತಿ ನೀಡಲು ಹೋದರೆ ಜನರು ಸುಮ್ಮನಿರೋಲ್ಲ, ನಾವು ಕೂಡ ಸುಮ್ನಿರೋಲ್ಲ. ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.