ಬೆಂಗಳೂರು (ಮಾ.26):  ಮಾಜಿ ಸಚಿವರ ಸಿ.ಡಿ. ಪ್ರಕರಣದ ವಿವಾದಿತ ಯುವತಿಗೆ ಗೋವಾದಲ್ಲಿ ಆರು ತಿಂಗಳು ವಾಸ್ತವ್ಯ ಕಲ್ಪಿಸಲು ಸಿ.ಡಿ. ಸ್ಫೋಟದ ಗುಂಪು ಯೋಜಿಸಿತ್ತು ಎಂದು ತಿಳಿದು ಬಂದಿದೆ.

ಯುವತಿಯ ಆತಿಥ್ಯದ ಹೊಣೆಗಾರಿಕೆಯನ್ನು ಹೊತ್ತಿದ್ದ ಕನಕಪುರ ತಾಲೂಕಿನ ಗ್ರಾನೈಟ್‌ ಉದ್ಯಮಿ ಶಿವಕುಮಾರ್‌, ತನ್ನ ಮೇಲೆ ಪೊಲೀಸರಿಗೆ ಅನುಮಾನ ಬಾರದಂತೆ ಮುಂಜಾಗ್ರತೆ ವಹಿಸಿದ್ದ. ಹೀಗಾಗಿಯೇ ಯುವತಿಯ ಸ್ನೇಹಿತೆ ಹೆಸರಿನಲ್ಲಿ ಗೋವಾದ ಹೋಟೆಲ್‌ವೊಂದರಲ್ಲಿ ಕೊಠಡಿಯನ್ನು ಉದ್ಯಮಿ ಕಾಯ್ದಿರಿಸಿದ್ದ.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ...

ಆದರೆ ಗೋವಾದಲ್ಲಿ ಯುವತಿ ತಂಗಿರುವ ವಿಚಾರ ತಿಳಿದು ಎಸ್‌ಐಟಿ ಕಾರ್ಯಾಚರಣೆ ಶುರು ಮಾಡಿದ ಮಾಹಿತಿ ಪಡೆದ ಸಿ.ಡಿ. ಸ್ಫೋಟದ ಗುಂಪು, ರಾತ್ರೋರಾತ್ರಿ ಆಕೆಯನ್ನು ಅಲ್ಲಿಂದ ಬೇರೆಡೆ ಕರೆದೊಯ್ದಿದೆ ಎನ್ನಲಾಗಿದೆ.

ಇನ್ನು ಯುವತಿಯ ಬಾಯ್‌ಫ್ರೆಂಡ್‌ ಎನ್ನಲಾದ ಆಕಾಶ್‌ ತಲವಾಡೆ ಸಹ ಗೋವಾದಲ್ಲಿ ತಂಗಿದ್ದ ವಿಚಾರವನ್ನು ಎಸ್‌ಐಟಿ ಮುಂದೆ ಒಪ್ಪಿಕೊಂಡಿದ್ದಾನೆ. ಈ ಮಾಹಿತಿ ಹಿನ್ನೆಲೆಯಲ್ಲಿ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಗ್ರಾನೈಟ್‌ ಉದ್ಯಮಿ ಪತ್ತೆಗೆ ಬಿರುಸಿನ ಕಾರ್ಯಾಚರಣೆಯನ್ನು ಎಸ್‌ಐಟಿ ನಡೆಸಿದೆ ಎಂದು ತಿಳಿದು ಬಂದಿದೆ.