ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡ ಕನಕಪುರ ಭಕ್ತ!
ಕನಕಪುರ ಮೂಲದ ಅಯ್ಯಪ್ಪ ಮಾಲಾಧಾರಿಯೊಬ್ಬರು ಶಬರಿಮಲೆಯಲ್ಲಿ ದೇವಾಲಯದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮಾರ್ (40) ಎಂಬುವವರು ದೇವಾಲಯದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಯ ವಿಡಿಯೋ ಸೆರೆಯಾಗಿದೆ.
ರಾಮನಗರ (ಡಿ.17): ಶಬರಿಮಲೆ ಸ್ವಾಮಿ ಅಯ್ಯಪ್ಪನ ಮಾಲೆಯನ್ನು ಧರಿಸಿ ಶಬರಿಗಿರಿಗೆ ಹೋಗಿ ಪಾಪ ಕಳೆದುಕೊಂಡು ಬರುವ ಭಕ್ತರಿದ್ದಾರೆ. ಆದರೆ, ಇಲ್ಲೊಬ್ಬ ಕನಕಪುರದ ಅಯ್ಯಪ್ಪ ಮಾಲಾಧಾರಿ ಕಠಿಣ ವ್ರತವನ್ನಾಚರಿಸಿ ಶಬರಿಗಿರಿಯ ಮೇಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವಾಲಯದಲ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಮನಗರ ಜಿಲ್ಲೆ ಕನಕಪುರ ಮೂಲದ ಅಯ್ಯಪ್ಪ ಭಕ್ತ ಶಬರಿಮಲೆಯಲ್ಲಿ ಆತ್ಮಹತ್ಯೆ ಶರಣಾದ ವ್ಯಕ್ತಿ ಆಗಿದ್ದಾರೆ. ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಬರಿಮಲೆ ದೇವಾಲಯದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವಾಲಯದ ಮೇಲಿಂದ ಜಿಗಿಯುವ ವೀಡಿಯೋ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದನು.
ಕಳೆದ ಎರಡು ದಿನಗಳ ಹಿಂದೆ ಕುಮಾರ್ ಸೇರಿದಂತೆ ಒಟ್ಟು 6 ಜನರು ಕನಕಪುರದಿಂದ ಶಬರಿಮಲೆಗೆ ತೆರಳಿದ್ದರು. ಈ ವೇಳೆ ಅಯ್ಯಪ್ಪನ ದರ್ಶನ ಪಡೆದ ಬಳಿಕ ಕುಮಾರ್ ದೇವಾಲಯದ ಶೆಲ್ಟರ್ ಮೇಲಿಂದ ಜಿಗಿದಿದ್ದಾನೆ. ಕೂಡಲೇ ಶಬರಿಮಲೆ ಸನ್ನಿದಾನದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ರವಾನೆ ಮಾಡುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಚನ್ನಪಟ್ಟಣ: ಕೆಲಸದ ಒತ್ತಡ ತಾಳಲಾರದೇ ಶಿಕಕ ಸುಖೇಂದ್ರ ಆತ್ಮಹತ್ಯೆ!
ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸದ್ಯ ಶಬರಿಮಲೆಗೆ ಮೃತ ಕುಮಾರ್ ಕುಟುಂಬಸ್ಥರು ತೆರಳಿದ್ದಾರೆ. ಅಲ್ಲಿ ಮರಣೋತ್ತರ ಪರೀಕ್ಷೆ ಹಾಗೂ ಇತರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹವನ್ನು ಕನಕಪುರಕ್ಕೆ ತೆಗೆದುಕೊಂಡು ಬರಲಿದ್ದಾರೆ. ಕುಮಾರ್ ಜೊತೆಗೆ ಶಬರಿಮಲೆಗೆ ಹೋದ ಇತರೆ ಭಕ್ತರೂ ಕೂಡ ಅಲ್ಲಿಯೇ ಲಾಕ್ ಆಗಿದ್ದಾರೆ.
ಕನಕಪುರ ಕುಮಾರನದ್ದು 20ನೇ ಸಾವು: ಕಳೆದ ಎರಡು ದಿನಗಳ ಹಿಂದೆ ಶಬರಿಮಲೆಯಲ್ಲಿ ಯಾತ್ರಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇವರನ್ನು ತಮಿಳುನಾಡಿನ ತಿರುವಳ್ಳೂರಿನ ಜಗನ್ ಸಂಪತ್ (30) ಎಂದು ಗುರುತಿಸಲಾಗಿತ್ತು. ಅವರು ಕುಸಿದು ಬಿದ್ದ ತಕ್ಷಣವೇ ಅವರನ್ನು ಅಪಾಚಿಮೆಟ್‌ನಲ್ಲಿರುವ ತುರ್ತು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ಈ ವರ್ಷ ಶಬರಿಮಲೆ ದರ್ಶನ ಆರಂಭವಾದ ನಂತರ ಇದು ವರದಿಯಾದ 19ನೇ ಸಾವು ಇದಾಗಿತ್ತು. ಇದೀಗ ಕನಕಪುರದ ಕುಮಾರ್ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲಿಯೇ ಈತನದ್ದು 20ನೇ ಸಾವಾಗಿದೆ.
ಇದನ್ನೂ ಓದಿ: ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ- ಹೀಗಿದೆ ನೋಡಿ ವ್ಯವಸ್ಥೆ