ಚನ್ನಪಟ್ಟಣ: ಕೆಲಸದ ಒತ್ತಡ ತಾಳಲಾರದೇ ಶಿಕ್ಷಕ ಸುಖೇಂದ್ರ ಆತ್ಮಹತ್ಯೆ!
ಚನ್ನಪಟ್ಟಣ ತಾಲೂಕಿನ ಎಲೆ ತೋಟದಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರ ಹೇಮಂತ್ ಕುಮಾರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಚನ್ನಪಟ್ಟಣ(ಡಿ.17): ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಶಿಕ್ಷಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಗರದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಸುಖೇಂದ್ರ (58) ಮೃತ ಶಿಕ್ಷಕ.
ತಾಲೂಕಿನ ಎಲೆ ತೋಟದಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರ ಹೇಮಂತ್ ಕುಮಾರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಿ. 12ರಂದು ಶಾಲೆ ಮುಗಿಸಿ ಸಂಜೆ ಸುಮಾರು 6.30 ಗಂಟೆಗೆ ಮನೆಗೆ ಬಂದ ನಮ್ಮ ತಂದೆ ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ಈ ಸಂದರ್ಭದಲ್ಲಿ ನಾವು ಅವರನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ವಿಷ ಸೇವಿ ಸಿರುವುದರ ಬಗ್ಗೆ ವೈದ್ಯರು ತಿಳಿಸಿ, ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ವೈದ್ಯರ ಸಲಹೆಯಂತೆ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೆ ಡಿ. 14ರ ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ.
ಆತ್ಮಹತ್ಯೆ ಕೇಸ್: 1 ಫೋನ್ ಕರೆಯಿಂದಾಗಿ ಸಿಕ್ಕಿಬಿದ್ದ ಟೆಕಿ ಅತುಲ್ ಪತ್ನಿ!
ತಮ್ಮ ತಂದೆ ಸ.ಹಿ.ಪ್ರಾ. ಶಾಲೆ ಎಲೆ ತೋಟದಹಳ್ಳಿಯಲ್ಲಿ ಸುಮಾರು ಮೂರು ವರ್ಷಗಳಿಂದ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ತಂದೆ ವಿಷ ಕುಡಿದಿರುವ ವಿಚಾರವಾಗಿ ಅಲ್ಲಿನ ಶಿಕ್ಷಕರನ್ನು ವಿಚಾರಿಸಲಾಗಿ, ಪ್ರತಿ ನಿತ್ಯ ಬಿಸಿಯೂಟ ನಿರ್ವಹಣೆ, ಮೊಟ್ಟೆ ವಿತರಣೆ ಮತ್ತು ಇಲಾಖೆಯ ಅನ್‌ಲೈನ್‌ನಲ್ಲಿ ನಮೂದಿಸಬೇಕಿದ್ದ ಎಲ್ಲಾ ಕೆಲಸವನ್ನು ನಿಗದಿತ ಸಮಯದಲ್ಲಿ ನಿರ್ವಹಿಸುವಂತೆ ಇಲಾಖೆಯಿಂದ ಒತ್ತಡವಿತ್ತು. ಗ್ರಾಮದ ಕೆಲ ಪೋಷಕರು ಮೊಟ್ಟೆ ವಿತರಣೆ ವಿಚಾರವಾಗಿ ಕೆಲವು ಮಕ್ಕಳಿಗೆ ಸಣ್ಣ ಮೊಟ್ಟೆ ಹಾಕುತ್ತೀರಿ ಎಂದು ಶಾಲೆಯ ಬಳಿ ವಾರದಲ್ಲಿ ಎರಡು ಮೂರು ಬಾರಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ವಿಷಯವನ್ನು ನಮ್ಮ ತಂದೆಯವರು ನಮ್ಮ ಮನೆಯಲ್ಲಿ ಸಹ ಹೇಳಿಕೊಂಡಿದ್ದರು. ಡಿ. 12ರ ಗುರುವಾರ ಸಹ ಮೊಟ್ಟೆ ಹಾಗೂ ಅಕ್ಕಿಯಲ್ಲಿ ಹುಳುವಿರುವ ಕುರಿತು ಗಲಾಟೆಯಾಗಿದೆ. ನಿನ್ನ ಮೇಲೆ ದೂರು ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಹಾಗೂ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಕೆಲಸದ ಒತ್ತಡಗಳನ್ನು ತಡೆದುಕೊಳ್ಳಲಾಗದೇ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.