ಬೀದರ್‌ ಯಶವಂತಪೂರ ವಯಾ ಹುಮನಾಬಾದ್‌, ಕಲಬುರಗಿ ಹೊಸ ರೈಲು ಮಂಜೂರಾದ ಹಿನ್ನೆಲೆ   29ರಂದು ಕೇಂದ್ರ ಸಚಿವ ಭಗವಂತ ಖೂಬಾ ರೈಲಿಗೆ ಹಸಿರು ನಿಶಾನೆ. ಬೀದರ್‌ನಿಂದ ಹಮನಾಬಾದ್‌ವರೆಗೆ ಪ್ರಯಾಣ.

ಬೀದರ್‌ (ಅ.28): ಬೀದರ್‌ ಯಶವಂತಪೂರ ವಯಾ ಹುಮನಾಬಾದ್‌, ಕಲಬುರಗಿ ಹೊಸ ರೈಲು ಮಂಜೂರಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ರೈಲ್ವೆ ಅಧಿಕಾರಿಗಳೊಂದಿಗೆ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡು, ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಿದರು.

ಸದರಿ ಮಾರ್ಗದ ಮೂಲಕ ಹೊಸ ರೈಲು ಚಾಲನೆಯು 29ರಂದು ನೆರವೇರಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಂಜೆ 4.30ಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇದೆ ರೈಲಿನಲ್ಲಿ ಸಚಿವ ಭಗವಂತ ಖೂಬಾ ಬೀದರ್‌ನಿಂದ ಹುಮನಾಬಾದ್‌ವರೆಗೆ ಪ್ರಯಾಣಿಸಲಿದ್ದಾರೆ.

ಉಡುಪಿ ರೈಲ್ವೆ ಮೇಲ್ವೇತುವೆಯಲ್ಲಿ ಆತ್ಮಹತ್ಯೆ ತನಿಖೆಗೆ ಪೊಲೀಸರು ಹೋದಾಗ ಸಡನ್‌ ಟ್ರೈನ್‌ ಎಂಟ್ರಿ!

ಹುಮನಾಬಾದ್‌ ರೈಲ್ವೆ ನಿಲ್ದಾಣದಲ್ಲಿಯೂ ಹುಮನಾಬಾದ್‌ನ ಜನತೆ, ಪಕ್ಷದ ಮುಖಂಡರು ಹೊಸ ರೈಲಿಗೆ ಸ್ವಾಗತಿಸಿ ಪೂಜೆ ನೆರವೇರಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳು ಮಾಡಿಕೊಳ್ಳಲು ಸಚಿವ ಖೂಬಾ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದರೊಂದಿಗೆ 25 ಕೋಟಿ ರು. ಅನುದಾನದಲ್ಲಿ ಅಮೃತ ಭಾರತ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ಬೀದರ್‌ ರೈಲ್ವೆ ನಿಲ್ದಾಣದ ಕಾಮಗಾರಿ ಪ್ರಗತಿಯ ವರದಿ ಪಡೆದುಕೊಂಡು, ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ವಾರಕ್ಕೊಮ್ಮೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಮೃತ ಕಲಶ ಯಾತ್ರೆ ರೈಲು ಇಂದು ಬೆಂಗಳೂರಿಂದ ದಿಲ್ಲಿಗೆ

ಬೀದರ್‌ ಮತ್ತು ಜಹೀರಾಬಾದ್‌ ಲೋಕಸಭಾ ಕ್ಷೇತ್ರಗಳ ನಡುವೆ ಇರುವ ಮೇಟಲಕುಂಟಾ ಆರ್‌ಯುಬಿಯ ಯೋಜನೆಯ ವಿವರವಾದ ವರದಿ ಸಿದ್ಧಪಡಿಸಿ ಎಂದು ಪ್ರಧಾನ ವ್ಯವಸ್ಥಾಪಕರು, ದಕ್ಷಿಣ ಮಧ್ಯ ರೈಲ್ವೆಗೆ ಕಳುಹಿಸಿರುವ ಬಗ್ಗೆ ತಿಳಿಸಿದಾಗ, ಸಚಿವರು ಜಿಎಂ ಅವರೊಂದಿಗೆ ಮಾತನಾಡಿ, ಶೀಘ್ರದಲ್ಲಿ ಯೋಜನಾ ವರದಿಗೆ ಮಂಜೂರಾತಿ ನೀಡಬೇಕೆಂದು ದೂರವಾಣಿ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಮಧ್ಯ ರೈಲ್ವೆಯ ಎಡಿಆರ್‌ಎಂ ಪ್ರದೀಪ ರಾಠೋಡ, ಸೀನಿಯರ್‌ ಡಿಇಎನ್‌ ಶ್ರೀನಿವಾಸ, ಬೀದರ್‌ ಎಇಎನ್‌ ಭಿಕ್ಷಾಪತಿ ಇನ್ನಿತರರು ಉಪಸ್ಥಿತರಿದ್ದರು.