Asianet Suvarna News Asianet Suvarna News

ರಷ್ಯಾದ ಆಂತರಿಕ ಧಂಗೆಯಲ್ಲಿ ಸಿಲುಕಿರುವ ಕಲಬುರಗಿ ಯುವಕರು; ರಕ್ಷಣೆಗೆ ಮುಂದಾದ ಸಚಿವ ಪ್ರಿಯಾಂಕ್ ಖರ್ಗೆ

ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕ ಮೂಲದ ಯುವಕರನ್ನು ಯುದ್ಧಕ್ಕೆ (Russia Ukrain War) ಬಳಸಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ಇದೆ ಎಂದರು.

Kalaburagi Residents Trapped In Russia, Forced To Fight rav
Author
First Published Feb 22, 2024, 1:12 PM IST

ಬೆಂಗಳೂರು (ಫೆ.22): ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕ ಮೂಲದ ಯುವಕರನ್ನು ಯುದ್ಧಕ್ಕೆ (Russia Ukrain War) ಬಳಸಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ಇದೆ ಎಂದರು.

ವಿಧಾನಸೌಧದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಷ್ಯಾ ಸೇನೆ ಅಮಾಯಕ ಯುವಕರನ್ನು ಯುದ್ಧಕ್ಕೆ ಬಳಸಿದ ಮಾಹಿತಿ ಇದೆ. ರಷ್ಯಾದಲ್ಲಿ ನಮ್ಮ ಯುವಕರನ್ನು ಸೇನೆಗೆ ಬಳಸಿಕೊಂಡ ಮಾಹಿತಿಯನ್ನು ನಮ್ಮ ಜಿಲ್ಲಾಧಿಕಾರಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ನೀಡಿದ್ದಾರೆ ಎಂದರು.

ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ: ಸಚಿವ ಖರ್ಗೆ

ಉದ್ಯೋಗಕ್ಕಾಗಿ ತೆರಳಿದ್ದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಮಾಹಿತಿ ಇದೆ. ರಷ್ಯಾದ ವ್ಯಾಗ್ನರ್​​ ಗ್ರೂಪ್​ಗೆ ಸೇರ್ಪಡೆ ಮಾಡಿಕೊಂಡ ಮಾಹಿತಿ ಇದೆ. ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ಉತ್ತರ ಭಾರತದ ಯುವಕರು ಸಿಲುಕಿರುವ ಮಾಹಿತಿ ಇದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದಿದ್ದು, ವಿದೇಶಾಂಗ ಸಚಿವರ ಜೊತೆ ಮಾತನಾಡುವಂತೆ ಮನವಿ ಮಾಡಿದ್ದೇನೆ ಎಂದರು.

Follow Us:
Download App:
  • android
  • ios