Asianet Suvarna News Asianet Suvarna News

ಹೆಚ್‌ಡಿಕೆ ಗೆಲ್ತಿದ್ದಂತೆ ಫುಲ್‌ಟೈಂ ರಾಜಕೀಯಕ್ಕೆ ಇಳಿದ ನಿಖಿಲ್; ಕೆರಗೋಡು ಗ್ರಾಮಕ್ಕೆ ತೆರಳಿ ಹನುಮಧ್ವಜಕ್ಕೆ ಪೂಜೆ

ಲೋಕಸಭಾ ಚುನಾವಣೆಗೆ ಮುನ್ನ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೆರಗೋಡು ಗ್ರಾಮಕ್ಕೆ ಇಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ  ಹನುಮಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರು ಸಾಥ್ ನೀಡಿದರು.

JDS NIkhil kumaraswamy visit keragod village at mandya rav
Author
First Published Jun 7, 2024, 4:08 PM IST | Last Updated Jun 8, 2024, 7:27 AM IST

ಮಂಡ್ಯ (ಜೂ.7): ಲೋಕಸಭಾ ಚುನಾವಣೆಗೆ ಮುನ್ನ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೆರಗೋಡು ಗ್ರಾಮಕ್ಕೆ ಇಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.

ಸ್ಥಳೀಯ ಜೆಡಿಎಸ್ ನಾಯಕರು, ಮುಖಮಡರು ಕಾರ್ಯಕರ್ತರೊಡನೆ ತೆರಳಿದ ನಿಖಿಲ್ ಕುಮಾರಸ್ವಾಮಿ ವಿವಾದಿತ ಧ್ವಜ ಸ್ತಂಭಕ್ಕೆ ಕರ್ಪೂರ ಬೆಳಗಿ, ಕಾಯಿ ಒಡೆದು ಪೂಜೆ ಬಳಿಕ ಪುಷ್ಪಾರ್ಚನೆ ಮಾಡಿದರು. ಈ ವೇಳೆ ನಿಖಿಲ್ ಕುಮಾರಸ್ವಾಮಿಗೆ ಕೆರಗೋಡು ಗ್ರಾಮಸ್ಥರು ಸಾಥ್ ನೀಡಿದರು.

ಅನುಮಾನ ಬೇಡ ಬಿಜೆಪಿ ಗೆಲ್ಲುತ್ತೆ, ಮೋದಿ ಮೂರನೇ ಬಾರಿ ಪ್ರಧಾನಿ ಆಗ್ತಾರೆ: ನಿಖಿಲ್ ಕುಮಾರಸ್ವಾಮಿ

ಕೆರಗೋಡು ಗ್ರಾಮದಲ್ಲಿ ಅಳವಡಿಸಿದ ಹನುಮಾನ್ ಧ್ವಜ ತೆರವುಗೊಳಿಸಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಇದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಮಂಡ್ಯ, ಮೈಸೂರು, ಹಾಸನ ಸೇರಿ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಸಿದ್ದ ಹಿಂದೂಪರ ಸಂಘಟನೆಗಳು. ಸ್ವತಃ ಎಚ್‌ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿ ಪ್ರತಿಭಟನೆ ಧುಮುಕಿದ್ದರು. ಅಲ್ಲದೇ ರಾಜ್ಯ ಸರ್ಕಾರ ಹೇಳಿದಂತೆ ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸುವ ಪೊಲೀಸರೇ ಎಚ್ಚರವಾಗಿರಿ ಎಷ್ಟು ದಿನ ನಿಮ್ಮ ಆಟ ನಡೆಯುತ್ತದೆ ನಾನು ನೋಡುತ್ತೇನೆ ಎಂದು ಆಕ್ರೋಶ ಗುಡುಗಿದ್ದರು.

ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ

 ಯಾವನೋ ಹೇಳ್ತಾನೆ ಅಂತಾ ಹೇಗೆ ಬೇಕೋ ಹಾಗೆ ಕೆಲಸ ಮಾಡುವುದನ್ನ ನಾವು ಸಹಿಸೊಲ್ಲ. ಹನುಮಂತನ‌ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು, ಈಗ ಹನುಮಧ್ವಜ ತೆಗೆದವರ ಅವನತಿಯೂ ಆಗುತ್ತೆ ಎಚ್ಚರಿಸಿದ್ದ ಎಚ್‌ಡಿ ಕುಮಾರಸ್ವಾಮಿ. ಇದೀಗ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಕೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಂಡ್ಯ ರಾಜಕಾರಣದ ದಿಕ್ಕು ಬದಲಾಗಿಹೋಗಿದೆ. ಎಚ್‌ಡಿಕೆ ಸಂಸದರಾಗುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿ ಇದೀಗ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. 

Latest Videos
Follow Us:
Download App:
  • android
  • ios