Asianet Suvarna News Asianet Suvarna News

ಉಪ್ಪು, ಹುಳಿ, ಖಾರವಿಲ್ಲದ ಬಜೆಟ್‌: ಶರವಣ

ಬಜೆಟ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಟ್ಟಿಲ್ಲ| ಕುಮಾರಸ್ವಾಮಿ ಅಧಿಕಾರವಿದ್ದಾಗ ಘೋಷಣೆ ಮಾಡಲಾದ ಯೋಜನೆಗಳನ್ನು ಈಗ ಬಿಎಸ್‌ ಮುಂದುವರಿಸಿದ್ದಾರೆ| ಕೋವಿಡ್‌ ನಂತರ ಮಂಡಿಸಿದ ಈ ಬಜೆಟ್‌ ನಮ್ಮೆಲ್ಲರಿಗೂ ನಿರಾಸೆ ತಂದಿದೆ: ಟಿ.ಎ.ಶರವಣ| 

JDS Leader TA Sharavana Talks Over BSY Budget grg
Author
Bengaluru, First Published Mar 10, 2021, 8:14 AM IST

ಬೆಂಗಳೂರು(ಮಾ.10): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿರುವ 2021-22ನೇ ಸಾಲಿನ ರಾಜ್ಯದ ಬಜೆಟ್‌ ಉಪ್ಪು, ಹುಳಿ ಮತ್ತು ಖಾರವಿಲ್ಲದ ಸಪ್ಪೆ ಬಜೆಟ್‌ ಆಗಿದೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ ಪ್ರತಿಕ್ರಿಯಿಸಿದ್ದಾರೆ.

ಈ ಬಜೆಟ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಟ್ಟಿಲ್ಲ. ಹಿಂದಿನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಧಿಕಾರವಿದ್ದಾಗ ಘೋಷಣೆ ಮಾಡಲಾದ ಯೋಜನೆಗಳನ್ನು ಈಗ ಇವರು ಮುಂದುವರಿಸಿದ್ದಾರೆ. ಕೋವಿಡ್‌ ನಂತರ ಮಂಡಿಸಿದ ಈ ಬಜೆಟ್‌ ನಮ್ಮೆಲ್ಲರಿಗೂ ನಿರಾಸೆ ತಂದಿದೆ. ಜನ ಸಂಕಷ್ಟದಲ್ಲಿರುವಾಗ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ದಿನ ನಿತ್ಯ ಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರಕ್ಕೆ ಅನ್ಯಾಯ: ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಶಾಸಕ

ಎಲ್ಲ ನಿಗಮಗಳಿಗೆ ಹೆಚ್ಚಿನ ಅನುದಾನ ಕೊಟ್ಟು ನಮ್ಮ ಸಮಾಜದ ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ ಕೇವಲ 5 ಕೋಟಿ ಕೊಡುವ ಮೂಲಕ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ನಮ್ಮ ಸಮಾಜದಲ್ಲಿಯೂ ಬಹಳಷ್ಟುಬಡವರಿದ್ದಾರೆ. ಸರ್ಕಾರಕ್ಕೆ ವ್ಯಾಪಾರ ವಹಿವಾಟು ಮೂಲಕ ಹೆಚ್ಚಿನ ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿ ಮಾಡುವ ಸಮಾಜ ನಮ್ಮದು. ಆದ್ದರಿಂದ ಈ ಕೂಡಲೆ ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ .25 ಕೋಟಿ ಒದಗಿಸಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios