ಬಿಜೆಪಿಗೆ ಹತ್ತಿರವಾಗುತ್ತಿದ್ದ ಬೇರೆ ಪಕ್ಷದ ಶಾಸಕರೊಬ್ಬರು ಕ್ಷೇತ್ರಕ್ಕೆ ಅನುದಾನದ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ.

ಚಾಮರಾಜನಗರ, (ಮಾ.09): ಬಿಎಸ್‌ಪಿಯಿಂದ ಉಚ್ಛಾಟನೆಗೊಂಡ ಶಾಸಕ ಎನ್.ಮಹೇಶ್ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಮಾತುಗಳಿವೆ ಕೇಳಿಬರುತ್ತಿವೆ. 

ಇದಕ್ಕೆ ಪೂರಕವೆಂಬಂತೆ ಗಾಗಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಜೊತೆ ಮೊದಲ ಹಂತದ ಮಾತುಕತೆಗಳು ಮುಗಿದಿದ್ದು, ಬಿಜೆಪಿ ಸೇರ್ಪಡೆಗೆ ಮಹೇಶ್ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಆದ್ರೆ, ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೇಲೆ ಎನ್‌. ಮಹೇಶ್ ಗರಂ ಆಗಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹಿರಂಗ ಹೇಳಿಕೆ: ಮತ್ತೋರ್ವ ಶಾಸಕ ಬಿಜೆಪಿ ಸೇರುವುದು ಫಿಕ್ಸ್

ಈ ಸಾಲಿನ ಬಜೆಟ್ ಚಾಮರಾಜನಗರ ಜಿಲ್ಲೆಗೆ ಸಂಬಂಧಪಟ್ಟಂತೆ ಬಹಳ ನಿರಾಶಾದಾಯಕ. ಕಳೆದ ಮೂರು ವರ್ಷಗಳ ಬಜೆಟ್​ನಲ್ಲಿ ನಾವು ಕೇಳಿದ ಯಾವ ಅನುದಾನವನ್ನೂ ನೀಡಿಲ್ಲ ಎಂದು ಮಹೇಶ್ ಬೇಸರಗೊಂಡಿದ್ದಾರೆ.

ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂದು ಜನರು ಮಾತನಾಡುತ್ತಿರುವುದು ಇದಕ್ಕೇ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಘೋಷಣೆ ಮಾಡಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ ಎಂದರು.