ಬೆಂಗಳೂರು(ಸೆ.21): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯಸಭಾ ಸದಸ್ಯರಾಗಿ ಮಾತೃ ಭಾಷೆ ಕನ್ನಡದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸುವ ಮೂಲಕ ನಮ್ಮ ಭಾಷೆಯ ಅಸ್ತಿತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ ಹೇಳಿದ್ದಾರೆ.

ನಾಡಿನ ಬಗ್ಗೆ ಕಾಳಜಿಯುಳ್ಳ ದೇವೇಗೌಡರು ರೈತರ ಕುರಿತು ಮಾತನಾಡಲು ಹೆಚ್ಚಿನ ಸಮಯ ನೀಡದಿರುವುದು ಅತ್ಯಂತ ಖಂಡನೀಯ. ನಮ್ಮ ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿ ಸಂಸತ್‌ ಪ್ರವೇಶಿಸಿದ್ದರೂ ಕೂಡ ರಾಜ್ಯದ ರೈತರ ಪರವಾಗಿ, ಕನ್ನಡಿಗರಿಗೆ, ನೆಲ, ಜಲ ಬಾಷೆ ಯಾರೂ ಕೂಡ ತುಟಿಬಿಚ್ಚಲಿಲ್ಲ ಎಂದು ಟೀಕಿಸಿದ್ದಾರೆ. 

Video: ಎಚ್‌.ಡಿ.ದೇವೇಗೌಡ್ರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಿ

ರೈತ ಕುಟುಂಬದಿಂದ ಬಂದ ದೇವೇಗೌಡರು ರೈತರ ಸಮಸ್ಯೆ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿರುವವರು. ಹಾಗಾಗಿ ಅವರಿಗೆ ಇನ್ನೂ ಹೆಚ್ಚು ಕಾಲ ಮಾತನಾಡಲು ಅವಕಾಶ ನೀಡಬೇಕಿತ್ತು. ಇದು ಕೇವಲ ದೇವೇಗೌಡರಿಗೆ ಮಾಡಿರುವ ಅವಮಾನವಲ್ಲ. ನಮ್ಮ ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಅವರು ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.