ಹಾಸನ  : ಕಾಶ್ಮೀರದ ಸ್ಥಿತಿ ಅತ್ಯಂತ ಹದಗೆಟ್ಟಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು. ಕಾಂಗ್ರೆಸ್ ಹಾಗೂ ಬಿಜೆಪಿ ತಿಕ್ಕಾಟದಲ್ಲಿ ದೇಶದ ಐಕ್ಯತೆ ಕಾಪಾಡುವುದರಲ್ಲಿ ಮುಗ್ಗರಿಸಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡ ಪಾಕಿಸ್ತಾನದಿಂದ ಭಾರತದ ಮೇಲೆ ನಿರಂತರವಾಗಿ ದಾಳಿಯಾಗುತ್ತಿದೆ. ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ವಾಯುದಾಳಿ ಮಾಡಲಾಗಿದೆ. ಕೇಂದ್ರ ಸರ್ಕಾರ ಇಂತಹ ವಿಚಾರದಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು. 

ಅಮೆರಿಕಾಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಕರೆ

ಅಲ್ಲದೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಓರ್ವ ಹೆಣ್ಣುಮಗಳಾಗಿ ಅನಾರೋಗ್ಯದ ನಡುವೆಯೂ ಉತ್ತಮ ಆಡಳಿತ ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಭಾರತದ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದೂ ಹೇಳಿದರು. 

ಪುಲ್ವಾಮ ದಾಳಿ : ಪಾಕಿಸ್ತಾನಕ್ಕೆ ಸಾಕ್ಷ್ಯ ನೀಡಿದ ಭಾರತ

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ವಿಪಕ್ಷಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವ ಇರುವ ಪ್ರಧಾನಿ ತಾವೆ ಎಲ್ಲವನ್ನು ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಇಂದಿರಾ ಗಾಂಧಿ, ನೆಹರು ಪ್ರಧಾನಿಯಾಗಿದ್ದಾಗಲೂ ಸೈನಿಕರು ಹೋರಾಟ ಮಾಡಿದ್ದಾರೆ. ಈ ಹೋರಾಟಗಳ ಕೀರ್ತಿ ಸೈನಿಕರಿಗೆ ಸಲ್ಲಬೇಕೆ ಹೊರತು ರಾಜಕಾರಣಿಗಳಿಗಲ್ಲ ಎಂದಿದ್ದಾರೆ. 

ಪಾಕ್ ಕೃತ್ಯದ ಬಗ್ಗೆ ಮಾತನಾಡಿದ ದೇವೇಗೌಡರು ಪಾಕಿಸ್ತಾನದ ಪ್ರಧಾನಿಗೆ ಅವರ ದೇಶ ತಪ್ಪು ಮಾಡಿದೆ ಎಂಬ ಅರಿವಾಗಿದೆ, ಜೈಶ್ ಮೊಹಮ್ಮದ್ ಹೊರಗೆ ಹಾಕುವವರೆಗೂ ಪಾಕಿಸ್ತಾನಕ್ಕೆ ಕಳಂಕ ತಪ್ಪಿದ್ದಲ್ಲ ಎಂದರು.