ಬೆಂಗಳೂರು[ಅ.21]:  ತಾಲೂಕು ಕೇಂದ್ರ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ನೋಂದಣಿಗೆ ಬರುವ ಮತದಾರರಿಗೆ ಸಮರ್ಪಕವಾದ ಅರ್ಜಿ ನಮೂನೆ ನೀಡುತ್ತಿಲ್ಲ. ಹೀಗಾಗಿ ಮತದಾರರ ನೋಂದಣಿಯನ್ನು ಮುಕ್ತವಾಗಿ ಮಾಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್‌ ಬಾಬು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮತದಾರರ ನೋಂದಾಣಿ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ, ಕೆಲವು ಸಹಾಯಕ ಚುನಾವಣಾಧಿಕಾರಿಗಳು ಮತದಾರರಿಗೆ ಪೂರ್ಣವಾದ ಮಾಹಿತಿ ನೀಡುತ್ತಿಲ್ಲ. ಕಳೆದ ಚುನಾವಣೆಯ ಮತದಾರರ ಸಂಖ್ಯೆಗಿಂತ ಈ ಬಾರಿ ನೋಂದಣಿ ಪ್ರಕ್ರಿಯೆ ಶೇ.50ಕ್ಕಿಂತ ಕಡಿಮೆಯಾದರೆ ಸಂಬಂಧಪಟ್ಟಸಹಾಯಕ ಚುನಾವಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾಲು ಸಾಲು ಸರ್ಕಾರಿ ರಜೆ ಇದ್ದ ಕಾರಣ ಅರ್ಜಿ ನಮೂನೆಗಳು ನಿಗದಿತ ಸಮಯದಲ್ಲಿ ಪೂರೈಕೆಯಾಗಿಲ್ಲ. ಮೊದಲನೇ ಹಂತದ ಮತದಾರರ ನೋಂದಣಿಗೆ ನ.6 ಕೊನೆಯ ದಿನಾಂಕವಾಗಿದೆ. ಇದನ್ನು 10 ದಿನಗಳ ಕಾಲ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.