ದಲಿತ ಮುಖಂಡ ಶಿವು ಅವರು ಶ್ರೀರಾಮುಲು ವಿರುದ್ಧ ಜನಾರ್ಧನ ರೆಡ್ಡಿ ಮಾಡಿರುವ ಆರೋಪಗಳನ್ನು ಖಂಡಿಸಿದ್ದಾರೆ. ಶ್ರೀರಾಮುಲು ಅವರನ್ನು ಬೆಳವಣಿಗೆಯನ್ನು ಸಹಿಸದೇ ರೆಡ್ಡಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರೆಡ್ಡಿಯನ್ನು ಬಿಜೆಪಿಯಿಂದ ಉಚ್ಛಾಟಿಸಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು (ಜ.26): ರಾಜ್ಯದಲ್ಲಿ ಯಾವುದೇ ಪಕ್ಷದಲ್ಲಿ ದಲಿತ ನಾಕರು ಬೆಳೆಯುತ್ತಾರೆಂದರೆ ಅವರನ್ನು ತುಳಿಯುವುದು ನಡೆಯುತ್ತದೆ. ಇದೀಗ ಶ್ರೀರಾಮುಲು ಬೆಳವಣಿಗೆ ಸಹಿಸದೇ ಜನಾರ್ಧನ ರೆಡ್ಡಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜನಾರ್ದನ ರೆಡ್ಡಿಯನ್ನು ಮೊದಲಿಗೆ ಬಿಜೆಪಿ ಸೇರಿಸಿಕೊಂಡಿದ್ದೆ ತಪ್ಪು. ರೆಡ್ಡಿ ಶಕುನಿ, ಅವರಿಗೆ ನೈತಿಕತೆ ಇಲ್ಲ ಎಂದು ದಲಿತ ಮುಖಂಡ ಶಿವು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ರಾಮುಲು ಕೊಡುಗೆ ಅಪಾರ ಇದೆ. ಅವರು ಅವತ್ತು ತ್ಯಾಗ ಮಾಡಿದ್ದಾರೆ. ಅವರಿಗೆ ಅವಮಾನ ಮಾಡಿದರೆ ನಾವು ಸಹಿಸಲ್ಲ. ರಾಮುಲು ಒಂದು ಬ್ರಾಂಡ್, ವಾಲ್ಮೀಕಿ ಸಮುದಾಯದ ನಾಯಕ. ರಮೇಶ್‌ ಜಾರಕಿಹೊಳಿ ಮತ್ತು ಶ್ರೀರಾಮುಲು ಎಸ್‌ಟಿ ಸಮುದಾಯದ ನಾಯಕ. ಯುಪಿ‌ ಪಂಜಾಬ್ ಎಲ್ಲಾ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯ ಇದೆ. ವಾಲ್ಮೀಕಿ ಸಮುದಾಯದ 15% ಇದೆ. ಋಣ ಸಂದಾಯ ಮಾಡಬೇಕು ಎಂದರೆ, ಅವರನ್ನು ರಾಜ್ಯ ಸಭಾ ಸದಸ್ಯರ ಮಾಡಿ. ರಾಮುಲು ರಾಷ್ಟ್ರ ಮಟ್ಟದ ನಾಯಕನಾಗಿದ್ದು, ಕೇಂದ್ರ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು. 

ಎಲ್ಲಾ ಪಕ್ಷದಲ್ಲಿ ಕೂಡ ನಮ್ಮ ಸಮುದಾಯದ ನಾಯಕ‌ ಬೆಳೆತಾರೆ ಎಂದಾದರೆ ತುಳಿತಾರೆ. ಜನಾರ್ದನ ರೆಡ್ಡಿಯನ್ನು ಮೊದಲಿಗೆ ಬಿಜೆಪಿ ಸೇರಿಸಿಕೊಂಡಿದ್ದೆ ತಪ್ಪು. ಅವರು ಬಿಜೆಪಿ ಸೇರಿದ ಮೇಲೆ ಬಳ್ಳಾರಿ ಲಿ ಮೂರು ಬಣ ಆಗಿದೆ. ರೆಡ್ಡಿ ಶಕುನಿ ಆಗಿದ್ದಾರೆ. ರೆಡ್ಡಿಗೆ ನೈತಿಕತೆ ಇಲ್ಲ. ರಾಮುಲು ಹಣದಿಂದ ಬೆಳೆದವರಲ್ಲ. ಗುಡಿಸಿಲಿಂದ ಬೆಳೆದವರು. ಸಂಘಟನೆ ಮಾಡಿ ಸುತ್ತಾಡಿ ಬೆಳೆದವರು. ಜನಾರ್ದನ ರೆಡ್ಡಿ ಗುಳ್ಳೆನರಿಗಳ ಮಾತು ಕೇಳಿ ಮಾತಾಡಿದ್ದಾರೆ. ನಮಗೆ ಹಾಗೂ ನಮ್ಮ ಸಮುದಾಯಕ್ಕೆ ನೋವಾಗಿದೆ ಎಂದರು.

ಇದನ್ನೂ ಓದಿ: ನಾನು ಎಲ್ಲೂ ಹೋಗಲ್ಲ, ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದಕ್ಕೆ ಮಾತನಾಡಿದ್ದೇನೆ: ಶ್ರೀರಾಮುಲು

ಸಂಡೂರು ಉಪಚುನಾವಣೆಗೆ ರಾಮುಲು ಕಾರಣ ಎಂದು ಅಗರವಾಲ್ ಹೇಳುತ್ತಾರೆ. ಆದರೆ, ಅವರನ್ನು ಉಸ್ತುವಾರಿ ಮಾತಾಡಿದ್ದು ತಪ್ಪು. ಅವರು ಈಗಾಗಲೇ ವಿಧಾನಸಭೆ ಲೋಕಸಭಾ ಸೋತಿದ್ದಾರೆ. ಅವರ ಮತ್ತಷ್ಟು ಕುಗ್ಗಿಸುವ ಕೆಲಸ ಮಾಡಬಾರದು. ಬಿಜೆಪಿ ಕಳೆದ ಬಾರಿ 15 ದಲಿತ ಕ್ಷೇತ್ರ ಸೋತಿದೆ. ಅದಕ್ಕೆ ಕಾರಣ ರಾಮುಲುಗೆ ಡಿಸಿಎಂ ಮಾಡ್ತೇವೆ ಎಂದು ಮೋಸ ಮಾಡಿದೆ. ರೆಡ್ಡಿನ ಉಚ್ಛಾಟನೆ ಮಾಡಿ, ಹೊರಹಾಕಿ. ಹೈಕಮಾಂಡ್ ಕೂಡಲೇ ಅವರ ಉಚ್ಛಾಟನೆ ಮಾಡಿ. ರೆಡ್ಡಿ ನೀವು ಬೆಳೆಯೋಕೆ ವಾಲ್ಮೀಕಿ ಸಮುದಾಯ ಕಾರಣ. ನೀವು ಈಗ ಗಂಗಾವತಿಯಲ್ಲಿ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಬನ್ನಿ. ನಮ್ಮ ಶಕ್ತಿ ತೋರಿಸುತ್ತೇವೆ ಎಂದು ದಲಿತ ಮುಖಂಡ ಶಿವು ಸವಾಲು ಹಾಕಿದ್ದಾರೆ.

ನೀವು ಶ್ರೀರಾಮುಲು ಅವರನ್ನು ಕ್ರಿಮಿನಲ್ ತರ ಬಿಂಬಿಸುತ್ತೀರಾ? ಶ್ರೀರಾಮಲು ಭೂಗರ್ಭ ಅಗೆದು ಜೈಲಿಗೆ ಹೋಗಿಲ್ಲ. ಜನರಿಗೆ ಮೋಸ ಮಾಡಿಲ್ಲ. ರೆಡ್ಡಿ ನೀವು ಕಲೆಕ್ಷನ್ ಕಿಂಗ್ ಆಗಿದ್ರಲ್ಲ, ಅದು ಮರೆತೋಯ್ತಾ? ನಿಮ್ಮ ಸಹೋದರ ಸೋಮಶೇಖರ್ ರೆಡ್ಡಿ ನಿಮ್ಮ ಗುಣಗಾನ ಮಾಡಿದ್ದಾರೆ. ಶ್ರೀರಾಮುಲು ಒಬ್ಬ ಮಾಸ್ ಲೀಡರ್. ಪಾಪ ಮಾಡಿ ತಿರುಪತಿ ತಿಮ್ಮಪ್ಪನಿಗೆ ಕಿರೀಟ ನೀಡಿದರೆ ಪಾಪ ಹೋಗೊದಿಲ್ಲ. ಒಂದು ವೇಳೆ ಸಂಡೂರು ಗೆದ್ದಿದ್ರೆ ವಿಜಯೇಂದ್ರ ಕ್ರೆಡಿಟ್‌ ತಗೊತಾ ಇದ್ದರು. ರೆಡ್ಡಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದರು. ರಾಮುಲು ವಚನಭ್ರಷ್ಟ ಅಲ್ಲ. ಅವರು ಸ್ವಾಭಿಮಾನಿ. ಅವರನ್ನು ಕ್ರಮಿನಲ್ ರೀತಿ ಬಿಂಬಿಸಿದರೆ ಸುಮ್ನೆ ಇರಲ್ಲ. ರೆಡ್ಡಿಯನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕು. ಇಲ್ಲವದಾರೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ನಾವು ಏನೆಂದು ತೋರಿಸುತ್ತೇವೆ ಎಂದು ದಲಿತ ಮುಖಂಡ ಶಿವು ಹೇಳಿದರು.

ಇದನ್ನೂ ಓದಿ: ನಾನು ಸಿಬಿಐ ತನಿಖೆ ನೋಡಿದ್ದೇನೆ, ಇನ್ನು ಶ್ರೀರಾಮುಲು, ಬೆಂಗಲಿಗರ ದೂರಿಗೆ ಹೆದರುತ್ತೇನಾ? ಜನಾರ್ದನ ರೆಡ್ಡಿ ತಿರುಗೇಟು!