ಮಲ್ಲಿಕಾರ್ಜುನ ಹೊಸಮನಿ

ಜಮಖಂಡಿ(ನ.3): ನಾಗನೂರ ಗ್ರಾಮದ ಮಾದರಿ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿದ್ದ ಆನಂದ ನ್ಯಾಮಗೌಡ ಆರತಿ ತಟ್ಟೆಗೆ ಹಣ ಹಾಕಿದ್ದಾರೆ. 

ಮಾದರಿ ಮತಗಟ್ಟೆಯಲ್ಲಿ ಚುನಾವಣಾ ಆಯೋಗದಿಂದ ನೇಮಕಗೊಂಡ ಆಶಾ ಕಾರ್ಯಕರ್ತೆಯರು ಆರತಿ ಬೆಳಗಿದ ವೇಳೆ ಆರತಿ ತಟ್ಟೆ ದುಡ್ಡು ಹಾಕಿದ್ದಾರೆ.

ಆರತಿ ತಟ್ಟೆಗೆ ಎಷ್ಟು ಹಣ ಹಾಕಿದ್ದಾರೆ ಅನ್ನೋ ಮಾಹಿತಿ ಇಲ್ಲ. ಆದರೆ ಆನಂದ ಪರ್ಸ್‌ನಿಂದ ಹಣ ತೆಗಯೋ ಫೋಟೋ ವೈರಲ್ ಆಗಿದೆ.