ನಟ ಜಗ್ಗೇಶ್ ಹಾಗೂ ರಮ್ಯಾ ನಡುವೆ ಮತ್ತೆ ಟ್ವೀಟ್ ವಾರ್ ನಡೆದಿದ್ದು, ಭಾರತೀಯ ಸೇನಾ ವಿಂಗ್ ಕಮಾಂಡರ್ ಪಾಕಿಸ್ತಾನ ಸೆರೆ ಹಿಡಿದ ವಿಚಾರವಾಗಿ ಮೋದಿ ಕಾಲೆಳೆದ ರಮ್ಯಾಗೆ ಜಗ್ಗೇಶ್ ಟಾಂಗ್ ನೀಡಿದ್ದಾರೆ.
ಬೆಂಗಳೂರು : ನಟ ಜಗ್ಗೇಶರ್ ಹಾಗೂ ರಮ್ಯಾ ನಡುವೆ ಮತ್ತೆ ಟ್ವೀಟ್ ವಾರ್ ನಡಿದಿದೆ.
ಭಾರತದ ವಿಂಗ್ ಕಮಾಂಡರ್ ಅವರನ್ನು ಪಾಕ್ ಪಡೆಗಳು ಸೆರೆ ಹಿಡಿದಿದ್ದು, ಈ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು, ಪ್ರಧಾನಿಯವರೇ ಅವರನ್ನು ವಾಪಸ್ ಕರೆತರುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಅಮೆರಿಕಾಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಕರೆ
ಟ್ವೀಟ್ ಗೆ ಪ್ರತಿಯಾಗಿ ನಟ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದು, ಕಮಾಂಡರ್ ಸೆರೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾತುಗಳನ್ನು ಆಡಲು ಶುರು ಮಾಡಿದ್ದಾಗಿ ರಮ್ಯಾ ಹೆಸರನ್ನು ಬಳಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪುಲ್ವಾಮ ದಾಳಿ : ಪಾಕಿಸ್ತಾನಕ್ಕೆ ಸಾಕ್ಷ್ಯ ನೀಡಿದ ಭಾರತ
ದೇಶ ಮೆಚ್ಚುವ ನರೇಂದ್ರ ಮೋದಿ ನಿರ್ಣಯಕ್ಕೆ ಕಂಗಾಲಾಗಿದ್ದ ಸಮಯ ಸಾಧಕರು. ದೇಶದ ಸೈನಿಕ ಪಾಕಿಸ್ತಾನಕ್ಕೆ ಸೆರೆ ಸಿಕ್ಕಾಗ ಮೋದಿ ವಿರುದ್ಧ ಮಾತಾಡಲು ವಿಚಾರ ಸಿಕ್ಕಿತು ಎಂದು ಮಾತಾಡುತ್ತಿದ್ದಾರೆ. ಅದರಲ್ಲಿ ಕನ್ನಡದ ಅನ್ನ ತಿಂದವರೋರ್ವರು ವ್ಯರ್ಥ ಮಾತು ಆರಂಭಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
"
