ಬೆಂಗಳೂರು(ಆ.02): ಸಚಿವ ಬಿ.ಸಿ.ಪಾಟೀಲ್‌ಗೆ ಕೊರೋ​ನಾ ಸೋಂಕು ದೃಢಪಟ್ಟಬೆನ್ನಲ್ಲೇ ಇದೀಗ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರಿಗೂ ಕೋವಿಡ್‌-19 ತಗು​ಲಿ​ರು​ವುದು ಶನಿ​ವಾರ ಖಚಿ​ತ​ಪ​ಟ್ಟಿ​ದೆ.

ಇದು ಜಿಲ್ಲೆಯ ಇತರೆ ಜನ​ಪ್ರ​ತಿ​ನಿ​ಧಿ​ಗ​ಳಲ್ಲೂ ಆತಂಕ ಸೃಷ್ಟಿ​ಸಿ​ದೆ. ಏತ​ನ್ಮಧ್ಯೆ, ವಿಧಾನ ಪರಿ​ಷತ್‌ ಮಾಜಿ ಸದಸ್ಯ ಐವಾನ್‌ ಡಿಸೋಜಾ ಅವ​ರಿಗೂ ಕೊರೋನಾ ದೃಢ​ಪ​ಟ್ಟಿದ್ದು, ಇವ​ರ ಜತೆಗೆ 2 ದಿನ ಇದ್ದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ. ಶಿವ​ಕು​ಮಾರ್‌ ಅವರಿಗೆ ಕ್ವಾರಂಟೈ​ನ್‌​ಗೆ ಒಳ​ಗಾ​ಗ​ಬೇ​ಕಾದ ಆತಂಕ ಶುರು​ವಾ​ಗಿ​ದೆ.

ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ, ಮಂಗಳೂರಲ್ಲಿ ಡಿಕೆಶಿ: ಇಲ್ಲಿವೆ ಫೋಟೋಸ್

ಕೆಲ ದಿನ​ಗಳ ಹಿಂದೆ ಹಾವೇರಿ ಜಿಲ್ಲಾ ಉಸ್ತು​ವಾರಿ ಸಚಿವ ಬಿ.ಸಿ.​ಪಾ​ಟೀಲ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ ಜತೆಗೆ ಹಾಲಪ್ಪ ಆಚಾರ್‌ ಸೇರಿ ಜಿಲ್ಲೆಯ ಹಲವು ಜನ​ಪ್ರ​ತಿ​ನಿ​ಧಿ​ಗಳು ಇದ್ದ​ರು. ಶುಕ್ರ​ವಾ​ರ​ವಷ್ಟೇ ಬಿ.ಸಿ.​ಪಾ​ಟೀ​ಲ​ರಿಗೆ ಸೋಂಕು ದೃಢ​ಪ​ಟ್ಟಿದ್ದು, ಇದರ ಬೆನ್ನಲ್ಲೇ ಈಗ ಹಾಲಪ್ಪ ಆಚಾರ್‌ಗೂ ಸೋಂಕು ದೃಢ​ಪ​ಟ್ಟಿರುವುದು ಆತಂಕಕ್ಕೆ ಕಾರ​ಣ​ವಾ​ಗಿದೆ.

ಕಾಂಗ್ರೆಸ್‌ ನಾಯಕನಿಗೆ ಕೊರೋನಾ: ಡಿಕೆ ಶಿವಕುಮಾರ್‌ಗೆ ಶುರುವಾಯ್ತು ಟೆನ್ಷನ್

ಡಿಕೆ​ಶಿಗೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆ ಮಾಜಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹಾಗೂ ಅವರ ಪತ್ನಿ ಡಾ.ಕವಿತಾ ಅವರಿಗೂ ಕೊರೋನಾ ಪಾಸಿಟಿವ್‌ ವರದಿ ಬಂದಿದೆ. ಇದ​ರಿಂದ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ದಕ್ಷಿಣ ಕನ್ನ​ಡದ ಕಾಂಗ್ರೆಸ್‌ ಮುಖಂಡರು ಕ್ವಾರಂಟೈ​ನ್‌ಗೆ ಒಳ​ಗಾ​ಗ​ಬೇ​ಕಾದ ಆತಂಕ ಶುರು​ವಾ​ಗಿದೆ. ಡಿ.ಕೆ.​ಶಿ​ವ​ಕು​ಮಾರ್‌ ಶುಕ್ರ​ವಾ​ರದಿಂದ 2 ದಿನ ದಕ್ಷಿಣ ಕನ್ನಡ ಪ್ರವಾ​ಸದಲ್ಲಿದ್ದ​ರು. ಈ ವೇಳೆ ಐವಾನ್‌ ಡಿಸೋಜ ಅವರ ಜತೆಗೇ ಇದ್ದ​ರು.