ಮಂಗಳೂರು, (ಆ.01): ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ಈ ಬಗ್ಗೆ ಐವನ್ ಡಿಸೋಜಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನನಗೆ ಹಾಗೂ ಪತ್ನಿ ಡಾ. ಕವಿತಾಗೆ ಕೊರೋನಾ ಸೋಂಕು ತಗುಲಿದೆ. ಯಾವುದೇ ಲಕ್ಷಣಗಳಿಲ್ಲವಾದರೂ ಸ್ವಯಂಪ್ರೇರಣೆಯಿಂದ ಕೋವಿಡ್19 ಪರೀಕ್ಷೆಗೆ ಒಳಗಾಗಿದ್ದೆವು. ಪರೀಕ್ಷೆಯಲ್ಲಿ ಪಾಸಿಟಿವ್ ಧೃಡವಾಗಿದೆ ಎಂದಿದ್ದಾರೆ.

ಬಿಜೆಪಿಯ ಮತ್ತೋರ್ವ ಶಾಸಕನಿಗೆ ಕೊರೋನಾ: ಒಂದೇ ಜಿಲ್ಲೆಯ ಮೂವರು ಶಾಸಕರಿಗೆ ಸೋಂಕು

ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ, ನನ್ನ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳು ನಮ್ಮನ್ನು ಭೇಟಿ ಮಾಡಬೇಡಿ, ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ ಎಂದು ಬರೆದುಕೊಂಡಿದ್ದಾರೆ.

ಡಿಕೆ ಶಿವಕುಮಾರ್‌ ಭೀತಿ
ಹೌದು....ಐವನ್ ಡಿಸೋಜಾ ಅವರಿಗೆ ಇಂದು (ಶನಿವಾರ) ಕೊರೋನಾ ಪಾಸಿಟಿವ್ ಅಂತ ವರದಿ ಬಂದಿದೆ. ಆದ್ರೆ, ನಿನ್ನೇ ಅಂದ್ರೆ ಶುಕ್ರವಾರ ಡಿಕೆ ಶಿವಕುಮಾರ್ ಅವರು ಮಂಗಳೂರು ಪ್ರವಾಸ ಕೈಗೊಂಡಿದ್ದ ವೇಳೆ ಐವನ್ ಡಿಸೋಜಾ ಇದ್ದರು. ಇದಿರಂದ ಇದೀಗ ಡಿಕೆಶಿಗೆ ಕೊರೋನಾ ಭೀತಿ ಶುರುವಾಗಿದ್ದು, ಅವರು ಸ್ವಯಂ ಕ್ವಾರಂಟೈನ್‌ ಒಳಗಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.