ಭಾರತೀಯತೆ ಅಪ್ಪಿಕೊಂಡಿದ್ದ ಸಿಸರ್ ಬಾಬಾ ಇನ್ನಿಲ್ಲ!

ಭಾರತದಲ್ಲೇ ಹುಟ್ಟುವ ಅದೆಷ್ಟೋ ಜನ ದೇಶಿ ಸಂಸ್ಕೃತಿ, ಆಚಾರ- ವಿಚಾರ ವಿರೋಧಿಸುತ್ತಾರೆ. ಆದರೆ, ಇಟಲಿಯಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದ  ಸಿಸರ್ ಬಾಬಾ ನಿನ್ನೆ ಮೃತಪಟ್ಟಿದ್ದಾರೆ. 

Italy Sisar Baba Died in Gangavati

ಕೊಪ್ಪಳ(ಡಿ.29): ಅನಾರೋಗ್ಯದ ಹಿನ್ನಲೆಯಲ್ಲಿ ಇಟಲಿ‌ ಮೂಲದ ಸಿಸರ್ ಬಾಬಾ ನಿನ್ನೆ ರಾತ್ರಿ ಕೊಪ್ಪಳದ ಗಂಗಾವತಿಯಲ್ಲಿ ಮೃತಪಟ್ಟಿದ್ದಾರೆ.

ಭಾರತದಲ್ಲೇ ಹುಟ್ಟುವ ಅದೆಷ್ಟೋ ಜನ ದೇಶಿ ಸಂಸ್ಕೃತಿ, ಆಚಾರ- ವಿಚಾರ ವಿರೋಧಿಸುತ್ತಾರೆ. ಆದರೆ, ಇಟಲಿಯಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದ  ಸಿಸರ್ ಬಾಬಾ ನಿನ್ನೆ ಮೃತಪಟ್ಟಿದ್ದಾರೆ. 

ಮೂಲತಃ ಇಟಲಿಯ‌ ರೋಮ್ ನಗರದ ಈ ಬಾಬಾ, ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದರಂತೆ.‌  ಅಲ್ಲದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಋಷಿಮುಖ ಪರ್ವತದಲ್ಲಿ ವಾಸವಾಗಿದ್ದ ಸಿಸರ್ ಹೆಸರಿನ ಬಾಬಾ ನಾಗಸಾಧುಗಳನ್ನು ನಾಚಿಸುವಂತೆ ಶಿವ ಪೂಜೆ ಮಾಡ್ತಾ ಇದ್ದರು. 

"

ಇನ್ನು ಕಳೆದ 30 ವರ್ಷದಿಂದ ಇಲ್ಲೇ ವಾಸವಾಗಿರುವ‌ ಬಾಬಾ, ತಾವು ಮೃತಪಟ್ಟರೆ ಭಾರತದಲ್ಲೇ ಅಂತ್ಯ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದರಂತೆ.‌  

ಈ ಹಿನ್ನೆಲೆಯಲ್ಲಿ ಗಂಗಾವತಿ ಪೊಲೀಸರು ಇಟಲಿ ರಾಯಭಾರಿ ಕಚೇರಿಗೆ ಕರೆ ಮಾಡಿ, ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಾರಾಂತ್ಯದ ರಜೆ ಇರುವುದರಿಂದ ಸೋಮವಾರ ಕಚೇರಿ ಆರಂಭವಾದ ಬಳಿಕ ಮಾತುಕತೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios