AI ಇಂಟಲಿಜೆನ್ಸ್‌ನನ್ನು ಏಲಿಯನ್ ಇಂಟೆಲಿಜೆನ್ಸ್ ಎಂದು ಕರೆದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್!
ಇಸ್ರೋ ಅಧ್ಯಕ್ಷರಾದ ಎಸ್.ಸೋಮನಾಥ್‌ರವರು ಮಾತನಾಡಿ ಕೃತಕ ಬುದ್ಧಿಮತ್ತೆಯ ಪರಿಣಾಮದ ಕುರಿತು ಮಾತನಾಡಿದರು. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನನ್ನು ಏಲಿಯನ್ ಇಂಟೆಲಿಜೆನ್ಸ್ ಎಂದು ಕರೆದರು.
ಬೆಂಗಳೂರು (ಮೇ.26): ಸೃಷ್ಟಿ 2024 ಕಾರ್ಯಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಯುವಕ ಸಂಘ, ಎಐಸಿಟಿಇ, ವಿಎಸ್‌ಎಸ್ ಟ್ರಸ್ಟ್, ವಿಟಿಯು ಹಾಗೂ ಎಟ್ರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇವರ ಸಹಯೋಗದೊಂದಿಗೆ 24.05.2024 ರಿಂದ ದಿನಾಂಕ 26.05.2024ರವರೆಗೂ ಆಯೋಜಿಸಲಾಗಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಿ ಎಸ್ ಸುಂದರ್ ರಾಜು ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಸ್ರೋ ಅಧ್ಯಕ್ಷರಾದ ಶ್ರೀಯುತ ಎಸ್ ಸೋಮನಾಥ್ , ಎಐಸಿಟಿಇ ಅಧ್ಯಕ್ಷರಾದ ಟಿ.ಜಿ ಸೀತಾರಾಮ್, ನ್ಯಾಕ್ ಅಧ್ಯಕ್ಷರಾದ ಪ್ರೊಫೆಸರ್ ಗಣೇಶನ್ ಕನ್ನಬಿರನ್, ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಎಸ್ ಬಾಲಕೃಷ್ಣ , ವಿಟಿಯು ಮೌಲ್ಯಾಂಕನ ಕುಲ ಸಚಿವರಾದ ಟಿ. ಎನ್ ಶ್ರೀನಿವಾಸ್ ರವರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇಸ್ರೋ ಅಧ್ಯಕ್ಷರಾದ ಎಸ್.ಸೋಮನಾಥ್‌ರವರು ಮಾತನಾಡಿ ಕೃತಕ ಬುದ್ಧಿಮತ್ತೆಯ ಪರಿಣಾಮದ ಕುರಿತು ಮಾತನಾಡಿದರು. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನನ್ನು ಏಲಿಯನ್ ಇಂಟೆಲಿಜೆನ್ಸ್ ಎಂದು ಕರೆದ ಸೋಮನಾಥ್ ರವರು ಕೃತಕ ಬುದ್ಧಿಮತ್ತೆಗೆ ಕೆಲವು ನಿಬಂಧನೆಗಳು ಇರುತ್ತವೆ, ಮಾನವ ಪ್ರಜ್ಞೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ವರ್ಚುಯಲ್ ರಿಯಾಲಿಟಿ, 3D ಮ್ಯಾನುಫ್ಯಾಕ್ಚರಿಂಗ್‌ನಲ್ಲಿನ ಕ್ರಾಂತಿಕಾರಿಕ ಬೆಳವಣಿಗಗಳ ಮೇಲೆ ಬೆಳಕು ಚೆಲ್ಲಿದರು. ಎಐ ಮತ್ತು ರೋಬೋಟೆಕ್ ತಂತ್ರಜ್ಞಾನ ಹವಮಾನ ವೈಪರಿತ್ಯಗಳನ್ನು ಸರಿದೂಗಿಸುವತ್ತ ಕಾರ್ಯನಿರ್ವಹಿಸುವ ಬಗೆಗೆ ಚಿಂತಿಸುವಂತೆ ಪ್ರೇರೇಪಿಸಿದರು.
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುತ್ತಾರೆ: ಮಾಜಿ ಶಾಸಕಿ ರೂಪಾಲಿ ನಾಯ್ಕ
ಎಐಸಿಟಿ ಈ ಅಧ್ಯಕ್ಷರಾದ ಸೀತಾರಾಮ್ ಅವರು ಮಾತನಾಡಿ ವಿದ್ಯಾರ್ಥಿ ಪರಿಷತ್ ಮತ್ತು ಸೃಷ್ಟಿ ಕಾರ್ಯಕ್ರಮದ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು 25,000 ಸ್ಟಾರ್ಟ್ಅಪ್‌ಗಳೊಂದಿಗೆ ಭಾರತವು ಮುಂದಡಿ ಇಡುತ್ತಿದ್ದು ಜನರ ಜೀವನೋಪಾಯವನ್ನು ಪೋಷಿಸುವಂತಹ ಕ್ರಾಂತಿಕಾರಿ ಅನ್ವೇಷಗಳು ನಡೆಯಬೇಕೆಂದು ಆಶಿಸಿದರು. ಪ್ರೊಫೆಸರ್ ಗಣೇಶನ್ ಕನ್ನಬಿರನ್ ಕೌಶಲ್ಯಾಧಾರಿತ ಶಿಕ್ಷಣದ ಅನಿವಾರ್ಯತೆಯ ಬಗೆಗೆ ಒತ್ತಿ ಹೇಳಿದರು, ಸೃಷ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಅಭಿನಂದನೆಗಳು ಹೇಳಿ, ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳು ಮತ್ತು ಉದ್ಯೋಗ ಪ್ರಗತಿಗಾಗಿ ಹೊರಹೊಮ್ಮುತ್ತಿರುವ ತಂತ್ರಜ್ಞಾನಗಳ ಮಹತ್ವವನ್ನು ಒತ್ತಿಹೇಳಿದರು. ಡಾ. ಟಿ. ಎನ್. ಶ್ರೀನಿವಾಸ ಅವರು ಭಾಗವಹಿಸಿದವರ ಪರಿಶ್ರಮವನ್ನು ಮೆಚ್ಚಿ, 293 ಪ್ರಾಜೆಕ್ಟ್ಗಳೊಂದಿಗೆ ಸೃಷ್ಟಿಯ ಬೆಳವಣಿಗೆಯನ್ನು ಪ್ರಶಂಶಿಸಿದರು ಹಾಗೂ ವಿದ್ಯಾರ್ಥಿ ಗಳಲ್ಲಿ ನಾವೀನ್ಯತೆ ಮತ್ತು ಪೇಟೆಂಟ್‌ಗಳ ಮಹತ್ವದ ಕುರಿತು ಮಾತನಾಡಿದರು.
ಎಬಿವಿಪಿ ರಾಷ್ಟ್ರೀಯ ಸಂಯೋಜಕ ಕಾರ್ಯದರ್ಶಿ ಶ್ರೀ ಎಸ್. ಬಾಲಕೃಷ್ಣ ಅವರು ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿ ಸದುಪಯೋಗಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿ, ಯುವಕರು ದೇಶದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು. ಎಟ್ರಿಯಾ ಇನ್ಸ್ಟಿಟ್ಯೂಟ್ ಪ್ರಾಂಶುಪಾಲರಾದ ಶ್ರೀ ಸುಂದರ್ ರಾಜು ಅವರು ಅಧ್ಯಕ್ಷೀಯ ಭಾಷಣದಲ್ಲಿ, ನಾವೀನ್ಯತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ಎಟ್ರಿಯಾ ಸಂಸ್ಥೆಯು ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು . ಸೃಷ್ಟಿ 2024 ಕಾರ್ಯಕ್ರಮದಲ್ಲಿ ಅನೇಕ ಕಾಲೇಜುಗಳು ಭಾಗವಹಿಸಿದವು, ಇದರಲ್ಲಿ ಪಿಇಎಸ್ಐಟಿಎಂ ಶಿವಮೊಗ್ಗ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಗೆದ್ದಿತು. ಎಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಎಜಿಐಟಿಎಂ ಮಂಗಳೂರು ಕಾಲೇಜು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡವು.
ಕಾಂಗ್ರೆಸ್ ಅಭ್ಯರ್ಥಿ ಸದನದಲ್ಲಿ ಆಕಳಿಸುತ್ತಿದ್ರು: ಕೇಂದ್ರ ಸಚಿವ ಜೋಶಿ ವ್ಯಂಗ್ಯ
ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಡಾ ಸತೀಶ್ ಎಚ್ ಕೆ ಕಾರ್ಯದರ್ಶಿಗಳಾದ ಪ್ರವೀಣ್ ಎಚ್ ಕೆ , ಏ ಐ ಟಿ ಕಾಲೇಜಿನ ಪ್ರಾಂಶುಪಾಲರು ಡಾ. ರಾಜೇಶ್ ,ಯುವಕ ಸಂಘದ ಯಶವಂತ ಹಾಗೂ ಸೃಷ್ಟಿ ಸಂಚಾಲಕರಾದ ನಿಶ್ಚಿತ್ ಬಂಟ್ವಾಳರವರು ಇದ್ದರು .ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಪ್ರವೀಣ್ ಎಚ್ ಕೆ ಅವರು ನೆರವೇರಿಸಿ, ಏಟ್ರಿಯ ಕಾಲೇಜಿನ ಪ್ರಾಧ್ಯಾಪಕರಾದ ಎಚ್ .ಬಿ ಬಾಲಕೃಷ್ಣರವರು ವಂದಿಸಿದರು . ಈ ಕಾರ್ಯಕ್ರಮ 'ವಂದೇ ಮಾತರಂ' ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು. ಒಟ್ಟಾರೆಯಾಗಿ, ಈ ಕಾರ್ಯಕ್ರಮವು ಸುಮಾರು 3000ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಸಂಪನ್ನಗೊಂಡಿತು.