ನಮ್ಮ ಮೆಟ್ರೋದಲ್ಲಿ ಸಮಸ್ಯೆ ಆಯ್ತಾ? ತುರ್ತು ಎಚ್ಚರಿಕೆ ಗಂಟೆ ಬಳಸಿ
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣಿಕರಿಗೆ ಸಹಾಯ ಮಾಡಲು ನಮ್ಮ ಮೆಟ್ರೋ ಸಿದ್ಧವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಭದ್ರತಾ ಸಿಬ್ಬಂದಿಯು ಸದಾ ಜಾಗರೂಕರಾಗಿದ್ದು, ತುರ್ತು ಸಂದರ್ಭದಲ್ಲಿ ಯಾವುದೇ ಸಹಾಯಕ್ಕಾಗಿ ಸಿದ್ಧರಿರುತ್ತಾರೆ.
ಬೆಂಗಳೂರು (ಡಿ.9) ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣಿಕರಿಗೆ ಸಹಾಯ ಮಾಡಲು ನಮ್ಮ ಮೆಟ್ರೋ ಸಿದ್ಧವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಭದ್ರತಾ ಸಿಬ್ಬಂದಿಯು ಸದಾ ಜಾಗರೂಕರಾಗಿದ್ದು, ತುರ್ತು ಸಂದರ್ಭದಲ್ಲಿ ಯಾವುದೇ ಸಹಾಯಕ್ಕಾಗಿ ಸಿದ್ಧರಿರುತ್ತಾರೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೇಂದ್ರದ ದೂರವಾಣಿ ಸಂಖ್ಯೆ 080 2519 1208 ಮತ್ತು 080 2216 2258 / 2208 ಮತ್ತು ಟೋಲ್ ಫ್ರೀ ಸಹಾಯವಾಣಿ 1800-425-12345 ಗೆ ಸಂಪರ್ಕಿಸಬಹುದು.
ಹೆಚ್ಚುವರಿಯಾಗಿ, ತುರ್ತು ಸಮಯದಲ್ಲಿ ಪ್ರಯಾಣಿಕರು ಸಹಾಯ ಪಡೆಯಲು ಎಲ್ಲಾ ಮೆಟ್ರೋ ಬೋಗಿಯಲ್ಲಿ (ಪ್ರತಿ ಬೋಗಿಯಲ್ಲಿ 4) ಅಳವಡಿಸಿರುವ ತುರ್ತು ಎಚ್ಚರಿಕೆ ಗಂಟೆ ವ್ಯವಸ್ಥೆಯನ್ನು ಬಳಸಿ, ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಬಹುದು. ಇದರಿಂದಾಗಿ ಸಮೀಪಿಸುತ್ತಿರುವ ಅಥವಾ ಮುಂದಿನ ನಿಲ್ದಾಣದಲ್ಲಿ ಸಹಾಯ ಒದಗಿಸಲು ಅನುಕೂಲವಾಗಲಿದೆ.
ನಮ್ಮ ಮೆಟ್ರೋ: ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿ ಮೆಟ್ರೋ ಭದ್ರತಾ ಸಿಬ್ಬಂದಿ
ಗುರುವಾರ ಬೆಳಗ್ಗೆ 9.40ರ ಸುಮಾರಿಗೆ ರಾಜಾಜಿನಗರದಿಂದ ಎಂ.ಜಿ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳಾ ಪ್ರಯಾಣಿಕರು, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ ರೈಲಿನಿಂದ ಹೊರ ಬರುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ದೌರ್ಜನ್ಯ ಎಸಗಿದ್ದಾನೆ ಎಂದು ಭದ್ರತಾ ಸಿಬ್ಬಂದಿಯ ಸಹಾಯವನ್ನು ಕೋರಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಬಿಎಂಆರ್‌ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.