ರಾಜ್ಯದ ಮೊದಲ ಮಹಿಳಾ ಕಮಿಷನರ್‌ IPS ರೇಣುಕಾ ಸುಕುಮಾರ್ ಅಧಿಕಾರ ಸ್ವೀಕಾರ!

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ಮೊದಲ ಮಹಿಳಾ ಪೊಲೀಸ್‌ ಆಯುಕ್ತರಾಗಿ ಐಪಿಎಸ್‌ ಅಧಿಕಾರಿ ರೇಣುಕಾ ಸುಕುಮಾರ್‌ ಗುರುವಾರ ಅಧಿಕಾರ ಸ್ವೀಕರಿಸಿದರು. ರೇಣುಕಾ ಅವರು ಪೊಲೀಸ್‌ ಆಯುಕ್ತ ಹುದ್ದೆ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 

ips renuka sukumar appointed new commissioner of hubli dharwad gvd

ಹುಬ್ಬಳ್ಳಿ (ಆ.11): ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ಮೊದಲ ಮಹಿಳಾ ಪೊಲೀಸ್‌ ಆಯುಕ್ತರಾಗಿ ಐಪಿಎಸ್‌ ಅಧಿಕಾರಿ ರೇಣುಕಾ ಸುಕುಮಾರ್‌ ಗುರುವಾರ ಅಧಿಕಾರ ಸ್ವೀಕರಿಸಿದರು. ರೇಣುಕಾ ಅವರು ಪೊಲೀಸ್‌ ಆಯುಕ್ತ ಹುದ್ದೆ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಕೆ.ಸಂತೋಷ ಬಾಬು ಅವರು ಹುಬ್ಬಳ್ಳಿ-ಧಾರವಾಡದ ಪ್ರಭಾರಿ ಆಯುಕ್ತರಾಗಿದ್ದರು. ಇದೀಗ ರೇಣುಕಾ ಸುಕುಮಾರ್‌ ಅವರನ್ನು ಸರ್ಕಾರ ಈ ಸ್ಥಾನಕ್ಕೆ ವರ್ಗ ಮಾಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರೇಣುಕಾ ಅಧಿಕಾರ ಸ್ವೀಕರಿಸಿದರು. 

ಈ ಹಿಂದೆ ಹುಬ್ಬಳ್ಳಿ -ಧಾರವಾಡ ಕಮಿಷನರೇಟ್‌ನಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇಲ್ಲಿಯೇ ಡಿಸಿಪಿಯಾಗಿ ನಾನು ಕಾರ್ಯ ನಿರ್ವಹಿಸಿದ್ದೇನೆ. ಇದೀಗ ಅವಳಿ ನಗರದ ಆಯಕ್ತರಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಖುಷಿಯಾಗುತ್ತಿದೆ. ಮಹಿಳಾ ಸುರಕ್ಷತೆ ಹಾಗೂ ರೌಡಿಗಳನ್ನು ಮಟ್ಟಹಾಕಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಎಸ್‌ಪಿ ಕೆಡರ್‌ನವರಿಗೆ ಸರ್ಕಾರ ಆಯುಕ್ತರ ಜವಾಬ್ದಾರಿ ನೀಡಿದೆ. ಈ ವಿಷಯದಲ್ಲಿ ಸರ್ಕಾರ ನಿಯಮಗಳನ್ನು ಮೀರಿಲ್ಲ. ನನಗೆ ಆಯುಕ್ತರಾಗಿ ಸೇವೆ ಸಲ್ಲಿಸಲು ಸರ್ಕಾರ ಆದೇಶಿಸಿದೆ ಎಂದರು. 

ಮಾರ್ಕೆಟಿಂಗ್ ಕಂಪನಿಯಲ್ಲಿ ಚಾಣಾಕ್ಷ, ದೇಶಾದ್ಯಂತ ಲಕ್ಷಾಂತರ ಜನರ ಉದ್ಯೋಗದಾತ ಡಾ.ಅಫ್ಸರ್ ಹಿಂದೂಸ್ಥಾನಿ!

ಎಸ್ಪಿ ಕೇಡರ್‌ನವರಿಗೆ ಇದೇ ಮೊದಲು: ಪೊಲೀಸ್‌ ಆಯುಕ್ತರ ಹುದ್ದೆಯನ್ನು ಎಸ್ಪಿ ಕೇಡರ್‌ನವರಿಗೆ ಕೊಟ್ಟಿರುವುದು ಇದೇ ಮೊದಲು. ಹೀಗಾಗಿ ಆಯುಕ್ತರ ಹುದ್ದೆಯನ್ನು ಎಸ್ಪಿ ಕೇಡರ್‌ನವರಿಗೆ ಕೊಡುವ ಮೂಲಕ ಡಿಗ್ರೇಡ್‌ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

Latest Videos
Follow Us:
Download App:
  • android
  • ios