Asianet Suvarna News Asianet Suvarna News

ಕರ್ನಾಟಕದಲ್ಲಿ ಸೇವೆಗೆ ಅವಕಾಶ ಸಿಕ್ಕಿದ್ದು ಪುಣ್ಯ :ಐಪಿಎಸ್ ಡಿ. ರೂಪಾ

ಕಷ್ಟ ಪಡದೇ ಜೀವನದಲ್ಲಿ ಯಾವ ಸಾಧನೆಯೂ ಆಗದು. ಪರಿಶ್ರಮದಿಂದ ಮಾತ್ರವೆ ಎಲ್ಲವೂ ಸಾಧ್ಯ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಹೇಳಿದ್ದಾರೆ.

IPS D Roopa participated  sagarottara Samvada Programe
Author
Bengaluru, First Published Aug 18, 2020, 10:23 AM IST

ಬೆಂಗಳೂರು (ಆ.18): ‘ಜೀವನದಲ್ಲಿ ಕಷ್ಟಪಡದೇ ಯಾವ ಕಾರ್ಯಸಾಧನೆಯೂ ಆಗುವುದಿಲ್ಲ. ಇದಕ್ಕಾಗಿ ಎಲ್ಲರೂ ಶ್ರಮ ಪಡಬೇಕು. ತನ್ಮೂಲಕ ಸಾರ್ಥಕತೆ ಪಡೆಯಬೇಕು’ ಎಂದು ಎಂದು ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಅಭಿಪ್ರಾಯಪಟ್ಟರು.

ಸೋಮವಾರ ಸಾಗರೋತ್ತರ ಕನ್ನಡಿಗರು ಸಂಘಟನೆ ಸೋಮವಾರ ಆಯೋಜಿಸಿದ ಸಾಗರೋತ್ತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ. ರೂಪಾ ಅವರು, ‘ನನ್ನ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ಸರ್ಕಾರ ನನಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಜವಾಬ್ದಾರಿ ಕೆಲಸವನ್ನು ನಿರ್ವಹಿಸಿದ್ದೇನೆ’ ಎಂದು ಹೇಳಿದರು.

ರಾಜ್ಯದ ಮೊದಲ ಮಹಿಳಾ ಗೃಹ ಕಾರ‍್ಯದರ್ಶಿ ರೂಪಾ!

‘ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ನೊಂದಿರುವ ಎಷ್ಟೋ ಜನ ನನ್ನ ಹತ್ತಿರ ಬಂದು ತಮ್ಮ ಕಷ್ಟಹೇಳಿದಾಗ ಸಹಕಾರ ಮಾಡಿದ್ದೇನೆ. ಕರುನಾಡಿನಲ್ಲಿ ಸೇವೆ ಸಲ್ಲಿಸಲು ದೊರೆತ ಅವಕಾಶವನ್ನು ನನ್ನ ಭಾಗ್ಯ ಎಂದೇ ಭಾವಿಸಿದ್ದೇನೆ’ ಎಂದರು.

ಹೆಚ್ಚುವರಿ ಹಣ ವಸೂಲಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ; ಐಜಿಪಿ ಡಿ. ರೂಪಾ...

‘ಇನ್ನು ಸಾಗರೋತ್ತರ ಕನ್ನಡಿಗರು ವಿಶ್ವದ ಎಲ್ಲಾ ದೇಶಗಳ ಕನ್ನಡಿಗರನ್ನು ಒಗ್ಗೂಡಿಸಿ ಇಂತಹ ವಿನೂತನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆಯಿದೆ’ ಎಂದು ಹೇಳಿದರು.

ಗಾಯಕಿ ಶಮಿತಾ ಮಲ್ನಾಡ್‌ ಅವರು ಮಾತನಾಡಿ, ‘ಹೊರದೇಶಗಳಲ್ಲಿ ಇದ್ದರೂ ಕೂಡ ಕನ್ನಡ ತನವನ್ನು ಉಳಿಸಿ ಬೆಳೆಸುವಂತೆ ಮಾಡುತ್ತಿರುವುದು ತಂಬಾ ಮಹತ್ವದ ವಿಚಾರವಾಗಿದೆ. ಅಧಿಕಾರಿಯಾಗಿ ನೋಡದೆ ರೂಪಾ ಅವರನ್ನು ಈಗ ಒಬ್ಬ ಗಾಯಕಿಯಾಗಿ ನೋಡಿದೆ. ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ರೂಪಾ ಹೊಂದಿದ್ದಾರೆ’ ಎಂದರು.

ಸ್ವತಃ ಗಾಯಕಿಯಾಗಿರುವ ರೂಪಾ ಅವರು ಮಿಸ್‌ ಲೀಲಾವತಿ ಚಿತ್ರದ ಗೀತೆಯಾದ ‘ದೋಣಿ ಸಾಗಲಿ ಮುಂದೆ ಹೋಗಲಿ’ ಗೀತೆಗಾಯನ ಮಾಡಿದರು. ಈ ವೇಳೆ ಸಾಗರೋತ್ತರ ಕನ್ನಡ ರತ್ನ ಪ್ರಶಸ್ತಿ ಪತ್ರವನ್ನು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಸುರೇಖಾ ಕುಲಕರ್ಣಿ, ರೋಹಿಣಿ ಅನಂತ್‌ ಸೇರಿದಂತೆ ಮತ್ತಿತರರಿಗೆ ರೂಪಾ ವಿತರಣೆ ಮಾಡಿದರು. ಸಾಗರೋತ್ತರ ಕನ್ನಡಿಗರ ಸಂಘಟನೆಯ ಉಪಾಧ್ಯಕ್ಷ ಗೋಪಾಲ ಕುಲಕರ್ಣಿ ಹಾಗೂ ಅವರ ಪತ್ನಿ ಸುರೇಖಾ ಕುಲಕರ್ಣಿ, ಶಿಲ್ಪಾ ರವಿ, ಡಾ. ಸಂಜನಾ ಮಧು ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

Follow Us:
Download App:
  • android
  • ios