ರಾಜ್ಯದ ಮೊದಲ ಮಹಿಳಾ ಗೃಹ ಕಾರ‍್ಯದರ್ಶಿ ರೂಪಾ!
ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಿ.ರೂಪಾ ಅವರು ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದು, ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.ಭ್ರಷ್ಟರ ವಿರುದ್ಧ ಯವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಈ ಲೇಡಿ ಸಿಂಗಂ, ಕರ್ನಾಟಕದ ಮೊದಲ IPS ಆಫೀಸರ್ ಕೂಡಾ ಹೌದು. ಇಲ್ಲಿದೆ ನೋಡಿ ಡಿ. ರೂಪಾ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು
ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಿ.ರೂಪಾ ಅವರು ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
2000ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಡಿ.ರೂಪಾ ಅವರನ್ನು ರೈಲ್ವೆ ಐಜಿಪಿ ಹುದ್ದೆಯಿಂದ ಗೃಹ ಕಾರ್ಯದರ್ಶಿಯಾಗಿ ನೇಮಿಸಿ ರಾಜ್ಯ ಸರ್ಕಾರ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು.
ಮಂಗಳವಾರ ಗೃಹ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ರೂಪಾ, ‘ಈ ಹುದ್ದೆಯನ್ನು ಸ್ವೀಕರಿಸಿದ ಮೊದಲ ಮಹಿಳೆ ಎಂಬುದು ಗೊತ್ತಾಗಿದೆ’ ಎಂದು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಬರೆಯುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವ, ದಕ್ಷ ಅಧಿಕಾರಿ ಡಿ. ರೂಪಾ ಮೌಡ್ಗಿಲ್ ಕರ್ನಾಟಕದ ಮೊದಲ ಮಹಿಳಾ IPS ಆಫೀಸರ್.
2017ರಲ್ಲಿ ಕಾರಾಗೃಹ DIG ಆಗಿದ್ದ ಡಿ. ರೂಪಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದರು.
ಅದರಲ್ಲೂ ಪ್ರಮುಖವಾಗಿ ಪರಪ್ಪನ ಅಗ್ರಹಾರದಲ್ಲಿ ಸುಪ್ರೀಂ ಆದೇಶ ಮೀರಿ ಜಯಲಲಿತಾ ಆಪ್ತೆ ಶಶಿಕಲಾರಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತಿನ ವಿಡಿಯೋ ಬಿಡುಗಡೆ ಮಾಡಿದ್ದರು.
ಅದರಲ್ಲೂ ಪ್ರಮುಖವಾಗಿ ಪರಪ್ಪನ ಅಗ್ರಹಾರದಲ್ಲಿ ಸುಪ್ರೀಂ ಆದೇಶ ಮೀರಿ ಜಯಲಲಿತಾ ಆಪ್ತೆ ಶಶಿಕಲಾರಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತಿನ ವಿಡಿಯೋ ಬಿಡುಗಡೆ ಮಾಡಿದ್ದರು.
ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಅಂಜಿಕೆ ಹಾಗೂ ಮುಲಾಜಿಲ್ಲದೆ ದಿಟ್ಟ ಕ್ರಮ ಕೈಗೊಳ್ಳುವ ಈ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ದಕ್ಷತೆಗೆ ರಾಷ್ಟ್ರಾದ್ಯಂತ ಹೆಸರುವಾಸಿಯಾಗಿದ್ದಾರೆ.