ಐಪಿಎಲ್ ಟಿಕೆಟ್ ಸಿಗದ್ದಕ್ಕೆ ಆಕ್ರೋಶ: ಅಭಿಮಾನಿಗಳಿಂದ ದಾಂಧಲೆಗೆ ಯತ್ನ
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್‌್ಸ(ಸಿಎಸ್‌ಕೆ) ತಂಡಗಳ ನಡುವಿನ ಟಿ-20 ಕ್ರಿಕೆಟ್ ಪಂದ್ಯದ ಟಿಕೆಟ್ ಸಿಗದೆ ಆಕ್ರೋಶಗೊಂಡು ಭಾನುವಾರ ನಗರದ ಎಂ.ಚಿನ್ನಸ್ವಾಮಿ ಕ್ರಿಕೆಟ್ ಮೈದಾನಕ್ಕೆ ನುಗ್ಗಲು ಯತ್ನಿಸಿದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.
ಬೆಂಗಳೂರು (ಏ.17) : ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್‌್ಸ(ಸಿಎಸ್‌ಕೆ) ತಂಡಗಳ ನಡುವಿನ ಟಿ-20 ಕ್ರಿಕೆಟ್ ಪಂದ್ಯದ ಟಿಕೆಟ್ ಸಿಗದೆ ಆಕ್ರೋಶಗೊಂಡು ಭಾನುವಾರ ನಗರದ ಎಂ.ಚಿನ್ನಸ್ವಾಮಿ ಕ್ರಿಕೆಟ್ ಮೈದಾನಕ್ಕೆ ನುಗ್ಗಲು ಯತ್ನಿಸಿದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.
ರಾಜಧಾನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(IPL) ಟಿ-20 ಕ್ರಿಕೆಟ್ ಪಂದ್ಯಾವಳಿ ಕ್ರೇಜ್ ಜೋರಾಗಿದೆ. ಸೋಮವಾರ ನಗರದ ಎಂ.ಚಿನ್ನಸ್ವಾಮಿ ಕ್ರಿಕೆಟ್ ಮೈದಾನ(M. Chinnaswamy Cricket Ground)ದಲ್ಲಿ ಆರ್‌ಸಿಬಿ(RCB) ಮತ್ತು ಸಿಎಸ್‌ಕೆ(CSK) ತಂಡಗಳ ನಡುವಿನ ಪಂದ್ಯ ನಿಗದಿಯಾಗಿದೆ. ಈ ಹೈ ವೋಲ್ಟೇಜ್ ಪಂದ್ಯ(High voltage match) ವೀಕ್ಷಣೆಗೆ ಟಿಕೆಟ್ ಈಗಾಗಲೇ ಆನ್‌ಲೈನ್‌ನಲ್ಲಿ ಸೋಲ್ಡ್ ಔಟ್ ಆಗಿತ್ತು. ಆದರೂ ಅಭಿಮಾನಿಗಳು ಆಫ್‌ಲೈನ್‌ನಲ್ಲಿ ಮೈದಾನದ ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಭಾನುವಾರ ರಾತ್ರಿಯಿಂದಲೇ ಮೈದಾನದ ಬಳಿಗೆ ಬಂದು ಕಾದು ಕುಳಿತ್ತಿದ್ದರು. ಆದರೆ, ಬೆಳಗ್ಗೆ ಕ್ರಿಕೆಟ್ ಮೈದಾನದ ಆಡಳಿತ ಮಂಡಳಿ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಬೋರ್ಡ್ ಹಾಕಿತು.
ದಿನೇಶ್ ಕಾರ್ತಿಕ್ ಡಕೌಟ್, ರೋಹಿತ್ ಶರ್ಮಾ ದಾಖಲೆ ಮುರಿದ RCB ವಿಕೆಟ್ ಕೀಪರ್!
ಟಿಕೆಟ್‌ಗಾಗಿ ತಾಸುಗಟ್ಟಲೇ ಕಾದು ಕುಳಿತ್ತಿದ್ದ ಅಭಿಮಾನಿಗಳು, ಸೋಲ್ಡ್ ಔಟ್ ಫಲಕ ನೋಡಿ ಮೈದಾನದ ಭದ್ರತಾ ಸಿಬ್ಬಂದಿ ಜತೆಗೆ ಮಾತಿನ ಚಕಮಕಿಗೆ ಮುಂದಾದರು. ಒಂದು ಹಂತದಲ್ಲಿ ಅಭಿಮಾನಿಗಳ ಆಕ್ರೋಶದ ಕಟ್ಟೆಒಡೆದು ಮೈದಾನಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅನ್ಯ ಮಾರ್ಗವಿಲ್ಲದೆ ಅಭಿಮಾನಿಗಳ ಮೇಲೆ ಲಾಠಿ ಬೀಸಿ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು. ಮೈದಾನಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಯಿತು.