International Day of Happiness: ಬೆಂಗಳೂರು ಕೇಂದ್ರ ಕಾರಾಗೃಹದ 5500 ಕೈದಿಗಳ ಜೀವನ ಪರಿವರ್ತಿಸಿದ ದಂಪತಿ!

ಹಿಂದೆ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರು ಯೋಗ ಕಲಿಸಲು ಭಯದಿಂದ ಹೋಗುತ್ತಿದ್ದರು. ಈಗ ಅವರಿಗೆ ಬಹಳ ಗೌರವವನ್ನು ತೋರುತ್ತಾರೆ. "ಈಗ ಇದನ್ನು ಆರ್ಟ್ ಆಫ್ ಲಿವಿಂಗ್ ನ ಕೇಂದ್ರವಾಗಿ ಮಾಡಿಬಿಟ್ಟಿರುವಿರಿ. ಈಗ ಇದು ಕಾರಾಗೃಹ ಎಂದೇ ನಮಗೆ ಅನಿಸುವುದಿಲ್ಲ" ಎನ್ನುತ್ತಾರೆ ಅಧಿಕಾರಿಗಳು!

International Day of Happiness special A couple who changed the lives of 5500 prisoners at bengaluru central jail rav

ಬೆಂಗಳೂರು (ಮಾ.19) ಕಾರಾಗೃಹದೊಳಗೆ ಕಡಿಮೆಯಾದ ಆತ್ಮಹತ್ಯೆಗಳು. ಖಿನ್ನತೆಗಾಗಿ ತೆಗೆದುಕೊಳ್ಳುವ ಮಾತ್ರೆಗಳ ಪ್ರಮಾಣ ಈಗ ಕಡಿಮೆ. ಸಂತೋಷವಾಗಿರುವ ಕೈದಿಗಳು. ಈಗ ಯೋಗವನ್ನು ಬೋಧಿಸುತ್ತಿರುವ ಕೈದಿಗಳು. ಈಗ ನಿಜವಾದ ಪರಿವರ್ತನೆ. ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು, "ಈ ಜಗತ್ತಿನಲ್ಲಿ ಕೆಟ್ಟ ವ್ಯಕ್ತಿ ಎಂಬುವರಿಲ್ಲ. ಪ್ರತಿಯೊಂದು ಅಪರಾಧಿಯ ಒಳಗೂ ಅಳುತ್ತಿರುವ ಓರ್ವ ಸಂತ್ರಸ್ತರಿದ್ದಾರೆ" ಎನ್ನುತ್ತಾರೆ. ಯಾವ ರೀತಿಯ ಸಾಮಾಜಿಕ ಅನುಭೂತಿಯನ್ನೂ ಪಡೆಯದಿರುವ ಹೃದಯಗಳಿಗೆ ಹಾಗೂ ಮನಸ್ಸುಗಳಿಗೆ ಮುದವನ್ನು ನೀಡಲು, ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರಾದ , ವೃತ್ತಿಯಲ್ಲಿ ಆಭರಣ ವಿನ್ಯಾಸಕರಾದ ಕಾರ್ತಿಕ್ ರವರು ಹಾಗೂ ಹೊಮಿಯೋಪತಿ ವೈದ್ಯೆಯಾದ ಡಾ. ಸ್ವಪ್ನರವರು, ರಾಜ್ಯದ ಅತೀ ದೊಡ್ಡ ಕಾರಾಗೃಹ ಹಾಗೂ  ಬೆಂಗಳೂರಿನ ಕೇಂದ್ರ ಕಾರಾಗೃಹವಾದ ಪರಪ್ಪನ ಅಗ್ರಹಾರದಲ್ಲಿ 2017 ರಿಂದಲೂ  ಕೈದಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಪರಾಧದ ನ್ಯಾಯ ವ್ಯವಸ್ಥೆಯಲ್ಲಿ ಸಿಲುಕಿರುವ ಅಥವಾ ಅದರಲ್ಲಿ ಕೆಲಸ ಮಾಡುತ್ತಿರುವವರ ಜೀವನಗಳನ್ನು ಪರಿವರ್ತಿಸುವ ಸಲುವಾಗಿ ನಿಯೋಜಿಸಲಾಗಿರುವ ಆರ್ಟ್ ಆಫ್ ಲಿವಿಂಗ್ ನ ಪ್ರಿಸನ್ ಸ್ಮಾರ್ಟ್ ಶಿಬಿರವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮವು ಒತ್ತಡವನ್ನು ಕಡಿಮೆ ಮಾಡುವ, ಆಘಾತವನ್ನು ಗುಣಮುಖಗೊಳಿಸುವ, ಆಂತರ್ಯದಿಂದ ಸಂತೋಷವನ್ನು ಹೊರತರಿಸುವಂತಹ ಕುಶಲತೆಗಳನ್ನು, ಪ್ರಾಯೋಗಿಕವಾದ ಜ್ಞಾನವನ್ನು ಬೋಧಿಸುತ್ತದೆ. ಇದರಿಂದ ಒಬ್ಬರು ನಕಾರಾತ್ಮಕ ಭಾವನೆಗಳನ್ನು ನಿಭಾಯಿಸಬಲ್ಲರು, ತಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಹೊರತಂದು, ಸಮಾಜಕ್ಕೆ  ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡಬಲ್ಲರು.

International Day of Happiness special A couple who changed the lives of 5500 prisoners at bengaluru central jail rav 

ಕಾರ್ತಿಕ್ ಹಾಗೂ ಡಾ.ಸ್ವಪ್ನರವರು  ನಡೆಸುತ್ತಿರುವ ಈ ಯೋಜನೆಯು , ಅತೀ ಹೆಚ್ಚು ಕೈದಿಗಳಿಗೆ ಯೋಗದ  ತರಬೇತಿಗಳನ್ನು ನಡೆಸಿಕೊಟ್ಟಿದ್ದಕ್ಕಾಗಿ ಭಾರತೀಯ ದಾಖಲೆಗಳ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿಯ ಆಪ್ತೆಯಾದವರೂ ಸಹ ಇವರಿಂದ ಸುದರ್ಶನ ಕ್ರಿಯೆ, ಯೋಗ, ಪ್ರಾಣಾಯಾಮ ಹಾಗೂ ಆಧ್ಯಾತ್ಮಿಕ ಜ್ಞಾನವನ್ನು ಕಲಿತಿದ್ದಾರೆ. " ಅವರು ಬಹಳ ನಿಷ್ಠೆಯಿಂದ ಒಂದು ತಿಂಗಳವರೆಗೆ ಪ್ರತಿಯೊಂದು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಅವರ ಪತಿ ತೀರಿಕೊಂಡಾಗಲೂ ಸಹ, ಅವರ ದುಃಖದ ನಡುವೆಯೂ  ಕಕ್ಷೆಗಳಿಗೆ ಬರುತ್ತಿದ್ದರು. 

International Day of Happiness special A couple who changed the lives of 5500 prisoners at bengaluru central jail rav

 

ಏಪ್ರಿಲ್ 13 ರಿಂದ 3 ರಾಶಿಗೆ ಸಂತೋಷದ ಬಾಗಿಲು ತೆರೆಯೋದು ಪಕ್ಕಾ, ದೊಡ್ಡ ಗ್ರಹದಿಂದ ಅದೃಷ್ಟ ಹುಡುಕಿ ಬರುತ್ತೆ

ಓರ್ವ ಕೈದಿಯು ಕಾರಾಗೃಹದ ರೌಡಿಶೀಟರ್ ಎಂದೇ ಖ್ಯಾತಿಯನ್ನು ಪಡೆದಿದ್ದರು. ಅವರು ಬಹಳ ಕಟ್ಟುಮಸ್ತಾಗಿದ್ದರು. ಅವರು ಕಾರ್ತಿಕ್ ರನ್ನು, 'ನಿಮ್ಮನ್ನು ಪ್ರತಿದಿನ ಇಲ್ಲಿ ನೋಡುತ್ತೇನೆ. ನೀವು ಬಹಳ ಸಂತೋಷವಾಗಿರುವಂತೆ ಕಾಣುತ್ತೀರಿ. ನಿಮಗೆ ಭಯವಾಗುವುದಿಲ್ಲವೆ?' ಎಂದು ಕೇಳಿದರು. ಭಯವಾಗುತ್ತಿದ್ದರೂ ಕಾರ್ತಿಕ್ ಭಯ ತೋರಿಸಿಕೊಳ್ಳುತ್ತಿರಲಿಲ್ಲ! ಅವರು, 'ನಿಮ್ಮ ಯೋಗದ ತರಬೇತಿಗೆ ಬರಲು ನನಗೆ ಇಷ್ಟ. ಆದರೆ ಮಹಿಳೆಯರ ಧ್ವನಿ ಕೇಳಲು ನನಗೆ ಇಷ್ಟವಿಲ್ಲ. ನೀವು ಮಾತ್ರ ಬಂದು ನನಗೆ ಹೇಳಿಕೊಡುತ್ತೀರೆ?' ಎಂದರು ಅವರು. ಅದಕ್ಕೆ ಕಾರ್ತಿಕ್ ರವರು ಮಾತ್ರ ಅವರಿದ್ದ ಕೋಣೆಗೆ ಹೋಗಿ ಯೋಗದ ಕಕ್ಷೆಗಳನ್ನು  ತೆಗೆದುಕೊಳ್ಳಲು ಆರಂಭಿಸಿದರು. ತಮ್ಮಂತೆಯೇ ಭಾರಿಯಾಗಿರುವ ಇಪ್ಪತ್ತು ಇತರ ಕೈದಿಗಳನ್ನು ಅವರು ಸೇರಿಸಿದರು. ಶಿಬಿರದ ನಾಲ್ಕನೆಯ ದಿನದಂದು ಕಕ್ಷೆಯೊಳಗೆ ಓರ್ವ ಪೋಲಿಸರು ಒಳಬಂದರು. ಸಾಮಾನ್ಯವಾಗಿ ಪೋಲಿಸರು ತರಬೇತಿ ಕೊಣೆಯೊಳಗೆ ಬರುತ್ತಿರಲಿಲ್ಲ. ಇವರನ್ನು ಕಂಡ ಪೋಲಿಸರು, ಅದು ಹೇಗೆ ನೀವು ಇಷ್ಟು ಮೃದುವಾಗಿರುವಿರಿ?  ಮಗುವಿನಂತೆ ಶುದ್ಧರಾಗಿರುವಿರಿ" ಎಂದರು. ನಾಲ್ಕನೆಯ ದಿನದಂದು ತಮ್ಮ ಪತ್ನಿಯನ್ನೂ ಕರೆತರಬಹುದೆಂದು ಕಾರ್ತಿಕ್ ರವರಿಗೆ ಹೇಳಿದರು. ಎಲ್ಲರೂ ಅವರ ಮಾತನ್ನು ಕೇಳುತ್ತಿದ್ದರಿಂದ ಅನೇಕ ಜನರು ಯೋಗದ ತರಬೇತಿಯಲ್ಲಿ ಭಾಗವಹಿಸುವಂತೆ ಮಾಡಿದರು. ಅವರು ಎಲ್ಲೇ ಹೋದರೂ , "ಆರ್ಟ್ ಆಫ್ ಲಿವಿಂಗ್ ರವರನ್ನು ಯೋಗ ತರಬೇತಿ ತೆಗೆದುಕೊಳ್ಳಲು ಕರೆಯಿರಿ" ಎನ್ನುತ್ತಿದ್ದರು. ಅವರು ಬಿಡುಗಡೆಯಾದ ನಂತರ ಈಗ ತಮ್ಮದೇ ಆದ ಯೋಗದ ತರಬೇತಿಗಳನ್ನು ನಡೆಸುತ್ತಿದ್ದಾರೆ. 

ಆರಂಭದಲ್ಲಿ ಜನರನ್ನು ಸೇರಿಸುವುದೇ ಸವಾಲಾಗಿತ್ತು. 5000 ಕೈದಿಗಳು ಮತ್ತು 600 ಪೊಲೀಸಿನವರಿದ್ದರು. ಆರಂಭದಲ್ಲಿ ಅವರನ್ನು  ಕರೆತರುವುದು ಕಷ್ಟವಾಗಿತ್ತು. ಬಂದ ನಂತರ ಅವರನ್ನು ಕೂರಿಸಬೇಕಾಗಿತ್ತು. ಅನೇಕರಿಗೆ ನಿದ್ದೆಯ ಕೊರತೆಯಿತ್ತು. ಅನೇಕರು ಧೂಮಪಾನ ಮಾಡುತ್ತಿದ್ದರು. ಅನೇಕರು ಮಾದಕ ವಸ್ತುಗಳ ವ್ಯಸನಿಗಳಾಗಿದ್ದರು. ಸಾಮಾನ್ಯವಾಗಿ ಜಗಳಗಳನ್ನು ಆರಂಭಿಸಿಬಿಡುತ್ತಿದ್ದರು. 'ಮೇಡಂ ನಿಮ್ಮನ್ನು ನೀವೇ ನೋಡಿಕೊಳ್ಳಬೇಕು" ಎಂದು ಹೇಳಲಾಗುತ್ತಿತ್ತು. ಪೋಲಿಸರು 100% ಸಹಕಾರವನ್ನು ನೀಡಿದರು. ಈಗ ಕೈದಿಗಳಲ್ಲಿದ್ದ ಆತ್ಮಹತ್ಯಾ ಪ್ರವೃತ್ತಿ ಬಹಳ ಕಡಿಮೆಯಾಗಿದೆ. ಶಿಬಿರವನ್ನು ಈಗ ನಿಲ್ಲಿಸುತ್ತೇವೆ ಎಂದಾಗ ಕಾರಾಗೃಹದ ಅಧಿಕಾರಿಗಳು, 'ದಯವಿಟ್ಟು ಶಿಬಿರವನ್ನು ಮುಂದುವರಿಸಿ. ಅದರಿಂದ ನಮಗೆ ಕೆಲಸ ಕಡಿಮೆ' ಎಂದರು.

International Day of Happiness special A couple who changed the lives of 5500 prisoners at bengaluru central jail rav

ವಿಶ್ವದ ಅತ್ಯಂತ ಅತೃಪ್ತ ದೇಶ ಯಾವುದು? ಭಾರತವೂ ಹ್ಯಾಪಿಯಾಗಿದ್ಯಾ?

ಕೈದಿಗಳು ಖಿನ್ನತೆಗಾಗಿ ತೆಗೆದುಕೊಳ್ಳುವ ಮಾತ್ರೆಗಳ ಪ್ರಮಾಣವೂ ಕಡಿಮೆಯಾಗಿದೆ. ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕೇಂದ್ರವು ಕುಶಲ ಅಭಿವೃದ್ಧಿ ಕೇಂದ್ರವನ್ನು ಕಾರಾಗೃಹದಲ್ಲಿ ನಡೆಸುತ್ತಿದ್ದು, ಹೊಲಿಗೆ, ಗಣಕಯಂತ್ರ ತರಬೇತಿ, ಬಡಿಗೆ ಕೆಲಸ ಇತ್ಯಾದಿಯನ್ನೂ ಕಲಿಸುತ್ತಿದೆ. 

International Day of Happiness special A couple who changed the lives of 5500 prisoners at bengaluru central jail rav

 ಹಿಂದೆ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರು ಯೋಗ ಕಲಿಸಲು ಭಯದಿಂದ ಹೋಗುತ್ತಿದ್ದರು. ಈಗ ಅವರಿಗೆ ಬಹಳ ಗೌರವವನ್ನು ತೋರುತ್ತಾರೆ. "ಈಗ ಇದನ್ನು ಆರ್ಟ್ ಆಫ್ ಲಿವಿಂಗ್ ನ ಕೇಂದ್ರವಾಗಿ ಮಾಡಿಬಿಟ್ಟಿರುವಿರಿ. ಈಗ ಇದು ಕಾರಾಗೃಹ ಎಂದೇ ನಮಗೆ ಅನಿಸುವುದಿಲ್ಲ" ಎನ್ನುತ್ತಾರೆ ಅಧಿಕಾರಿಗಳು!

Latest Videos
Follow Us:
Download App:
  • android
  • ios