Asianet Suvarna News Asianet Suvarna News

ರೈತರ ಸಹಕಾರಿ ಬ್ಯಾಂಕ್ ಸಾಲದ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ ಘೋಷಣೆ

ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Interest waived if farmers pay cooperative bank loan CM Siddaramaiah announced sat
Author
First Published Dec 15, 2023, 4:00 PM IST

ವಿಧಾನಸಭೆ (ಡಿ.15): ರಾಜ್ಯದಲ್ಲಿ ಬರ ಆವರಿಸಿರುವ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲದ ಅಸಲು ಹಣವನ್ನು ಪಾವತಿಸಿದರೆ ಸಂಪೂರ್ಣವಾಗಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಎಲ್ಲ ರೈತರ ಸಹಕಾರಿ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಕೆಲವು ಷರತ್ತುಗಳನ್ನು ವಿಧಿಸಿದ ಸಿದ್ದರಾಮಯ್ಯ ಅವರು ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲಕ್ಕೆ ಮಾತ್ರ ಈ ಬಡ್ಡಿ ಮನ್ನಾ ಅನ್ವಯವಾಗುತ್ತದೆ. ಸರ್ಕಾರ ಬಡ್ಡಿ ಮನ್ನಾ ಮಾಡುವ ಅವಧಿಯನ್ನು ಘೋಷಣೆ ಮಾಡಿದ ಅವಧಿಯಲ್ಲಿ ರೈತರು ಸಾಲ ಪಡೆದ ಅಸಲು ಮೊತ್ತವನ್ನು ಪಾವತಿ ಮಾಡಿದಲ್ಲಿ ಮಾತ್ರ ಬಡ್ಡಿ ಮನ್ನಾ ಅನ್ವಯ ಆಗುತ್ತದೆ ಎಂದು ತಿಳಿಸಿದರು.

ಕರ್ನಾಟಕದ ಶಾಸಕರಿಗೆ ಕನ್ನಡವೇ ಬರೊಲ್ಲ, ಮರಾಠಿಯಲ್ಲಿ ಮಾತನಾಡಿದ ವಿಠಲ್ ಹಲಗೇಕರ್

ಸರ್ಕಾರದಿಂದ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಣೆಯನ್ನು ಕಟುವಾಗಿ ಟೀಕಿಸಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಬರಗಾಲದ ಹಿನ್ನೆಲೆಯಲ್ಲಿ ರೈತರು ಸಹಕಾರಿ ಬ್ಯಾಂಕ್‌ನ ಸಾಲವನ್ನು ಕಟ್ಟಲು ಸಾಧ್ಯವಾಗಲ್ಲ. ನೀವು ಕೂಡ ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರದ ಮೇಲೆ ಸಂಶಯ ಬೇಡ. ನಾವು ನುಡಿದಂತೆ ನಡೆಯುತೇವೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾವು‌ ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಕಲಾಪದಲ್ಲಿ ಉತ್ತರ ನೀಡಿದರು.

ನಂತರ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಘೋಷಣೆ ಮಾಡಿದರು:
- ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕತೆಗೆ, ಸ್ಥಳೀಯರಿಗೆ ಉದ್ಯೋಗಕ್ಕೆ ಉತ್ತೇಜನ
- ಬೆಳಗಾವಿ ಸಮೀಪ 2 ಸಾವಿರ ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆಯಲ್ಲಿ ಫೌಂಡರಿ ಕ್ಲಸ್ಟರ್ ಸ್ಥಾಪನೆ
- ಧಾರವಾಡದಲ್ಲಿ ಎಸ್‌ಎಂಸಿಜಿ ಕೈಗಾರಿಕಾ ಕ್ಲಸ್ಟರ್, ಇದಕ್ಕೆ 19 ಘಟಕಗಳು 1255 ಕೋಟಿ ಬಂಡವಾಳ ಹೂಡ್ತಿವೆ, ಇದರಿಂದ 2450 ಉದ್ಯೋಗ ಸೃಷ್ಟಿ ನಿರೀಕ್ಷೆ
- ಧಾರವಾಡ ಸಮೀಪ 3 ಸಾವಿರ ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆ
- ರಾಯಚೂರಿನಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳಿಗೆ ವಿಶೇಷ ಒತ್ತು
- ವಿಜಯಪುರದಲ್ಲಿ ಉತ್ಪಾದನಾ ಕ್ಕಸ್ಟರ್ ಅನ್ನು 1500 ಎಕರೆ ಪ್ರದೇಶದಲ್ಲಿ ಸ್ಥಾಪನೆ
- ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸಮಗ್ರ ಕ್ರಿಯಾಯೋಜನೆ
- ಧಾರವಾಡದ ವಾಲ್ಮಿ ನೀರಾವರಿ ಸಂಸ್ಥೆ ಮೇಲ್ದರ್ಜೆಗೆ ಏರಿಕೆ, ಇದರಿಂದ ಜಲಶಿಕ್ಷಣ ನೀಡಲು ಒತ್ತು
- ಬಳ್ಳಾರಿ, ರಾಯಚೂರು ಏರ್‌ಪೋರ್ಟ್ ಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ವಕೀಲರ ಮೇಲೆ ಹಲ್ಲೆಗೆ 3 ವರ್ಷವರೆಗೆ ಜೈಲು- ವಿಧಾನಸಭೆಯಲ್ಲಿ ಕಾಯ್ದೆ ಅಂಗೀಕಾರ: ರಾಜ್ಯದಲ್ಲಿ ವೃತ್ತಿಪರ ವಕೀಲರಿಗೆ ರಕ್ಷಣೆ ನೀಡುವ ಸಲುವಾಗಿ ಕರ್ತವ್ಯ ನಿರ್ವಹಣೆಯಲ್ಲಿರುವ ವಕೀಲರಿಗೆ ಅಡ್ಡಿಪಡಿಸುವ ಉದ್ದೇಶದಿಂದ ಕಿರುಕುಳ, ಬೆದರಿಕೆ ಅಥವಾ ಹಲ್ಲೆ ನಡೆಸುವವರಿಗೆ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ಹಾಗೂ ಒಂದು ಲಕ್ಷ ರು.ವರೆಗೆ ದಂಡ ವಿಧಿಸುವ 2023ನೇ ಸಾಲಿನ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ’ಕ್ಕೆ ವಿಧಾನಸಭೆ ಅಂಗೀಕಾರ ದೊರೆತಿದೆ. ಈ ವಿಧೇಯಕದ ಪ್ರಕಾರ ಪೊಲೀಸರು ಯಾವೊಬ್ಬ ವಕೀಲರನ್ನು ಬಂಧಿಸಿದರೂ 24 ಗಂಟೆ ಒಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು.

ಉತ್ತರ ಕರ್ನಾಟಕ ಬಗ್ಗೆ ಚರ್ಚಿಸೋಕೆ ಬಿಜೆಪಿ-ಜೆಡಿಎಸ್‌ ಆಸಕ್ತಿ ಇಲ್ಲ: ಸಚಿವ ಚಲುವರಾಯಸ್ವಾಮಿ

ವೃತ್ತಿನಿರತ ವಕೀಲರಿಗೆ ಕಕ್ಷಿದಾರ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾರೊಬ್ಬರಾದರೂ ಬೆದರಿಕೆ, ಕೆಲಸಕ್ಕೆ ಅಡ್ಡಿ, ಕಿರುಕುಳ, ಹಲ್ಲೆ ನಡೆಸಿದರೆ ಕಾಯಿದೆ ಅಡಿ ಶಿಕ್ಷೆ ವಿಧಿಸಬಹುದು. ಇನ್ನುದೇಶ- ವಿದೇಶದಲ್ಲಿ ಮುಕ್ತವಾಗಿ ಪ್ರಯಾಣಿಸಲು ಹಾಗೂ ಕಕ್ಷಿದಾರರೊಂದಿಗೆ ಸಮಾಲೋಚಿಸಲು ವಕೀಲರಿಗೆ ಅವಕಾಶ ಕಲ್ಪಿಸಲಾಗಿದೆ.ವಿಧೇಯಕ ಮಂಡಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, ವಕೀಲರ ವಿರುದ್ಧದ ದಾಳಿಗಳನ್ನು ತಡೆಯಲು ಕಾಯಿದೆ ರೂಪಿಸುವಂತೆ ಹಲವು ವರ್ಷಗಳಿಂದ ವಕೀಲರು ಒತ್ತಡ ಹೇರುತ್ತಿದ್ದರು. 

Latest Videos
Follow Us:
Download App:
  • android
  • ios