Asianet Suvarna News Asianet Suvarna News

ಕೊರೋನಾ ವೈರಸ್‌ಗೆ ಲಸಿಕೆ: ಮುಗಿಬಿದ್ದ ಬಡಾವಣೆ ಜನ!

ಕೊರೋನಾ ವೈರಸ್‌ಗೆ ಲಸಿಕೆ: ಮುಗಿಬಿದ್ದ ಬಡಾವಣೆ ಜನ!| ಸ್ಥಳೀಯರಿಂದ ಪೊಲೀಸರಿಗೆ ದೂರು

Injection For Coronavirus People Rush towards clinic
Author
Bangalore, First Published Mar 15, 2020, 7:41 AM IST

ದಾವಣಗೆರೆ[ಮಾ.15]: ಹೋಮಿಯೋಪತಿ ಕ್ಲಿನಿಕ್‌ನಲ್ಲಿ ವ್ಯಕ್ತಿಯೊಬ್ಬರು ಕೊರೋನಾ ವೈರಸ್‌ಗೆ ಉಚಿತವಾಗಿ ಲಸಿಕೆ ಹಾಕುತ್ತೇನೆ ಎಂದು ಹೇಳಿ ಅನæೕಕ ಮಂದಿಗೆ ಲಸಿಕೆ ಹಾಕಿರುವ ಘಟನೆ ದಾವಣಗೆರೆ ನಗರದ ಪಿ.ಜೆ. ಬಡಾವಣೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಇಲ್ಲಿಯ ಖಾಸಗಿ ಶಾಲಾ ಆವರಣದಲ್ಲಿ ಕೊರೋನಾ ವೈರಸ್‌ಗೆ ಉಚಿತವಾಗಿ ಲಸಿಕೆ(ಹೋಮಿಯೋಪಥಿ) ನೀಡುತ್ತಿರುವ ವಿಚಾರ ಗೊತ್ತಾಗಿ ಸಾರ್ವಜನಿಕರು ಶಾಲೆ ಬಳಿ ಹೋಗಿದ್ದಾರೆ. ಕೆಲವರು ತಮಗೆ ಮತ್ತು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಾರ್ವಜನಿಕರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಸಹ ಸ್ಥಳಕ್ಕೆ ಬಂದು ವೈದ್ಯಕೀಯ ಇಲಾಖೆಯಿಂದ ನಿಮಗೆ ಲಸಿಕೆ ಹಾಕಲು ಅನುಮತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

'ತಂಗಿ ಶವದೊಂದಿಗೆ 2 ದಿನದಿಂದ ಮನೆಯಲ್ಲಿದ್ದೇನೆ, ಏನು ಮಾಡ್ಬೇಕಂತ ತಿಳೀತಿಲ್ಲ!'

ಆದರೆ, 20 ವರ್ಷದಿಂದಲೂ ಲಸಿಕೆ ಹಾಕುತ್ತಿರುವುದಾಗಿ ಆ ವ್ಯಕ್ತಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕೊರೋನಾ ಸೋಂಕಿಗೆ ಯಾವುದೇ ಲಸಿಕೆ ಇಲ್ಲ. ಹೀಗಾಗಿ ಲಸಿಕೆ ಹಾಕುತ್ತಿರುವ ಶಾಲೆಗೆ ಭಾನುವಾರ ಬೆಳಗ್ಗೆಯೇ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ, ವೈದ್ಯಾಧಿಕಾರಿ ಡಾ.ಜಿ.ಡಿ.ರಾಘವನ್‌ರನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ

Follow Us:
Download App:
  • android
  • ios