ತೋಟಗಾರಿಕಾ ಬೆಳೆಗಳ ಉತ್ಪಾದನೆ ದೇಶದಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು  ಆಹಾರ ಧಾನ್ಯಗಳ ಉತ್ಪಾದನೆಗಳಿಗಿಂತಲೂ ಹೆಚ್ಚಾಗಿದೆ.‌ ಇದು ತೋಟಗಾರಿಕಾ  ಬೆಳೆಗಳ ಉತ್ಪಾದನೆಯಲ್ಲಿ ಮಹತ್ವದ ಹೆಗ್ಗುರುತು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ವರದಿ: ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್

ಹೆಸರಘಟ್ಟ (ಮಾ.07): ತೋಟಗಾರಿಕಾ ಬೆಳೆಗಳ ಉತ್ಪಾದನೆ ದೇಶದಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು ಆಹಾರ ಧಾನ್ಯಗಳ ಉತ್ಪಾದನೆಗಳಿಗಿಂತಲೂ ಹೆಚ್ಚಾಗಿದೆ.‌ ಇದು ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಮಹತ್ವದ ಹೆಗ್ಗುರುತು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ತೋಟಗಾರಿಕಾ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸ್ವತಂತ್ರ ನಂತರ ಭಾರತ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು ಮಾತ್ರವಲ್ಲದೆ ಕೋವಿಡ್ ನ ದಿನಗಳಲ್ಲಿ ಹಲವಾರು ಆಹಾರ ಧಾನ್ಯಗಳನ್ನು ಅವಶ್ಯವಿರುವ ಬೇರೆ ಬೇರೆ ದೇಶಗಳಿಗೆ ರಫ್ತು ಸಹ ಮಾಡಿದ್ದೇವೆ. ಪೋಷಕಾಂಶಗಳ ಸ್ವಾವಲಂಬನೆಗಾಗಿ ತೋಟಗಾರಿಕಾ ಉತ್ಪನ್ನಗಳು ಸಹಾಯಕವಾಗಿವೆ. ಇತ್ತೀಚಿನ ದಿನಗಳಲ್ಲಿ ತೋಟಗಾರಿಕಾ ಬೆಳೆಗಳ ಉತ್ಪನ್ನ ಆಹಾರ ಧಾನ್ಯಗಳ ಉತ್ಪನ್ನಕ್ಕಿಂತ ಹೆಚ್ಚಾಗಿದೆ, ಅಂದರೆ ದೇಶದ ತೋಟಗಾರಿಕಾ ಉತ್ಪನ್ನವು 351 ಮಿಲಿಯನ್ ಟನ್ಗಳಷ್ಟಾಗಿದ್ದು ಆಹಾರ ಧಾನ್ಯಗಳ ಉತ್ಪಾದನೆ 330 ಮಿಲಿಯನ್ ಟನ್ ಗಳಾಗಿದೆ, ಇದು ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ದಾಖಲೆಯ ಹೆಜ್ಜೆ ಎಂದರು. 

ಮುಂದಿನ 4 ತಿಂಗಳಿನಲ್ಲಿ ಕಲ್ಯಾಣ ಸಾರಿಗೆಗೆ 485 ಹೊಸ ಬಸ್: ಸಚಿವ ರಾಮಲಿಂಗಾರೆಡ್ಡಿ

ಇದೇ ವೇಳೆ ಬೆಂಗಳೂರಿನ ಸದ್ಯದ ಸ್ಥಿತಿಯನ್ನು ಉಲ್ಲೇಖಿಸಿದ ಸಚಿವರು ಬೆಂಗಳೂರಿನ ಸುತ್ತಮುತ್ತಲಿನ ವಾತಾವರಣ ಇಷ್ಟು ಅಸಹನಿಯವಾಗಿದುದನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ಈ ರೀತಿಯ ಹವಾಮಾನ ಏರುಪೇರುಗಳಿಗೆ ಹೊಂದಿಕೊಳ್ಳುವಂತೆ ಬೆಳೆಗಳನ್ನು ರೈತರು ಅಳವಡಿಸಿಕೊಳ್ಳಬೇಕಾಗಿದೆ. ಅದಕ್ಕೆ ಪೂರಕವಾದ ತಂತ್ರಜ್ಞಾನ ಹಾಗೂ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ವಿಜ್ಞಾನಿಗಳ ಆದ್ಯ ಕರ್ತವ್ಯವೂ ಹೌದು ಎಂದರು.

ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ ಸಂಸ್ಕರಣೆ ಹಾಗೂ ರಫ್ತು ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ರೈತರ ಆದಾಯ ದ್ವಿಗುಣ, ತ್ರಿಗುಣವಾಗಲು ಸಾಧ್ಯವಾಗುತ್ತದೆ. ಭಾರತದ ಆಹಾರ ಪದಾರ್ಥಗಳಿಗೆ ವಿಶ್ವದಾದ್ಯಂತ ಅತ್ಯುತ್ತಮ ಬೇಡಿಕೆ ಇದೆ. ಆದುದರಿಂದ ಉಪಯೋಗಿಸಲು ಸಿದ್ಧವಾದ ಆಹಾರ ಪದಾರ್ಥಗಳನ್ನು ತಯಾರು ಮಾಡಿದರೆ ಉತ್ತಮ. ಉದಾಹರಣೆಗೆ ಕೊಬ್ಬರಿಗೆ ಬೆಲೆ ಕಡಿಮೆ ಇದೆ, ಆದರೆ ಅದೇ ಕೊಬ್ಬರಿಯನ್ನು ಪುಡಿ ಮಾಡಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳಿಸಿದರೆ ಉತ್ತಮ ಬೆಲೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. 

ಭಾರತ ಸರ್ಕಾರವು ರೈತರ ಏಳಿಗೆಗೂಸ್ಕರ ರೈತ ಸಮ್ಮಾನ ನಿಧಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಬೆಳೆಗಳ ಸಂಗ್ರಹಣೆ ಗೋದಾಮುಗಳು, ಶಿಥಿಲ ಸಂಗ್ರಹಣಾ ಕೇಂದ್ರ, ಪರಿಕ್ಷಾ ಪ್ರಯೋಗಾಲಯ ಮುಂತಾದ ಕೃಷಿಗೆ ಅನುಕೂಲವಾದ ಹಲವಾರು ಸೌಲಭ್ಯ ಹಾಗೂ ಸೌಕರ್ಯಗಳನ್ನು ಮಾಡಿಕೊಟ್ಟಿದೆ. ರೈತ ಬಂಧುಗಳು ಈ ಕಾರ್ಯಕ್ರಮಗಳ ಉಪಯೋಗ ಪಡೆದುಕೊಂಡು ತಮ್ಮ ಆದಾಯವನ್ನು ವೃದ್ಧಿ ಮಾಡಿಕೊಳ್ಳು ಸಚಿವರು ಕರೆ ನೀಡಿದರು. ಅಲ್ಲದೆ ದೇಶವು ಎಣ್ಣೆಕಾಳು ಮತ್ತು ಬೇಳೆಕಾಳುಗಳಲ್ಲಿಯೂ ಸ್ವಾವಲಂಬನೆ ಸಾಧಿಸಬೇಕಾಗಿದೆ. ಆದುದರಿಂದ ಖಾದ್ಯ ಬೆಳೆಗಳ ಮಿನಿಕಿಟ್ ಹಾಗೂ ಬೀಜಗಳ ಕಿಟ್ ಕೊಡುವುದರ ಮೂಲಕ ಬೆಳೆಗಳಲ್ಲಿಯೂ ಸ್ವಾವಲಂಬನೆ ಸಾಧಿಸುತ್ತೇವೆ ಎಂದರು. 

ನಾನು ಮತ್ತೆ ಬಿಜೆಪಿಗೆ ಹೋಗುವ ಅಗತ್ಯವಿಲ್ಲ: ಶಾಸಕ ಲಕ್ಷ್ಮಣ ಸವದಿ ಸ್ಪಷ್ಟನೆ

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸರ್ಕಾರಿ, ಸರ್ಕಾರೇತರ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಿದ ಮೂರು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ 70,000ಕ್ಕೂ ಅಧಿಕ ಮಂದಿ ಭಾಗವಹಿಸಿ ಮೇಳದ ಪ್ರಯೋಜನ ಪಡೆದುಕೊಂಡರು. ಭಾರತೀಯ ತೋಟಗಾರಿಕಾ ಸಂಶೋಧನೆಯ ಸಂಸ್ಥೆಯ ನಿರ್ದೇಶಕರು, ವಿಜ್ಞಾನಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.