ಮೈಸೂರು : ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿದೆ.  ವೈಮಾನಿಕ ದಾಳಿಯ ಮೂಲಕ ಭಾರತ ಸೂಕ್ತ ಪ್ರತ್ಯುತ್ತರವನ್ನೇ ನೀಡಿದೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. 

ಮೈಸೂರಿ‌ನಲ್ಲಿ ನಡೆದ  ಮೇರಾ ಬೂತ್ ಸಬ್‌ಸೇ ಮಜಬೂತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಯಾವ ಪರಿಸ್ಥಿತಿ ಎದುರಿಸುತ್ತಿದೆ ಎಂದು  ಎಲ್ಲರಿಗೂ ಗೊತ್ತಿದೆ ಎಂದರು. 

ವೈಮಾನಿಕ ದಾಳಿಯನ್ನು ಇಡೀ ದೇಶ‌ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆ. ಭಾರತ ಪ್ರಪಂಚದಲ್ಲೇ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. ಪಾಕಿಸ್ತಾನಕ್ಕೆ ನಾವು ಹೆದರಬೇಕಾದ ಅವಶ್ಯಕತೆ ಇಲ್ಲ. ಪಾಕಿಸ್ತಾನಕ್ಕೆ ಬುದ್ದಿ ಕಲಿಸುವ ಅಗತ್ಯವಿದೆ ಎಂದು ಹೇಳಿದರು. 

ಅಲ್ಲದೇ ಭಾರತದ ತಂಟೆಗೆ ಪಾಕ್ ಬಂದರೆ ಸುಮ್ಮನಿರುವ ಮಾತೇ ಇಲ್ಲ. ನಮ್ಮ ಪ್ರಧಾನಿ ಪಾಕಿಗೆ ಸೂಕ್ತ ಉತ್ತರ ನೀಡುತ್ತಾರೆ. ಇನ್ನೇನು ಲೋಕಸಭಾ ಚುನಾವಣೆ ಸಮೀಫಿಸುತ್ತಿದ್ದು ಮೋದಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದರು.

ಅಲ್ಲದೇ ಮೈಸೂರಿನಿಂದ ಸಂಸದ ಪ್ರತಾಪ್ ಸಂಹ ಅವರನ್ನು ಆರಿಸಿ ಕಳಿಸಿ ಎಂದು ಜನರಲ್ಲಿ ಮನವಿ ಮಾಡಿದರು.