ಬೆಂಗಳೂರು(ಡಿ.03): ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ. ಬಂಗಾಳ ಕೊಲ್ಲಿಯಲ್ಲಿ ನಿಂತರವಾಗಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ತೀವ್ರತೆ ಹಾಗೂ ವಾತಾವರಣದಲ್ಲಿನ ಬದಲಾವಣೆಗಳಿಂದ ರಾಜ್ಯದಲ್ಲಿ ಮಳೆ, ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. 

ಇದರಿಂದ ಉಷ್ಣಾಂಶ ಕಡಿಮೆಯಾಗಿದ್ದು, ಚಳಿ ಪ್ರಮಾಣ ಹೆಚ್ಚುತ್ತಿದೆ. ಕರಾವಳಿ ಭಾಗದಲ್ಲಿ ನಿತ್ಯ ತಾಪಮಾನ ಹೆಚ್ಚು ದಾಖಲಾಗುತ್ತಿದೆ. ಡಿ.3ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಕಾರವಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 

ಊಟಿಯಂತಾದ ಬೆಂಗಳೂರು: ಚಳಿಯೋ ಚಳಿ..!

ಹೀಗಾಗಿ ಅಲ್ಲಿ ಚಳಿ ತುಸು ಕಡಿಮೆ ಇದೆ. ಇನ್ನು ರಾಜ್ಯದ ಕನಿಷ್ಠ ತಾಪಮಾನ 9.4 ಡಿ.ಸೆ. ಬೀದರ್‌ನಲ್ಲಿ ದಾಖಲಾಗಿದೆ. ಅಲ್ಲದೆ ದಾವಣಗೆರೆ 11.3, ವಿಜಯಪುರ 12, ಧಾರವಾಡ 13.5, ಬೆಂಗಳೂರಲ್ಲಿ ಕನಿಷ್ಠ 18 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಕರಾವಳಿ ಭಾಗ ಹೊರತುಪಡಿಸಿ ಉಳಿದ ಭಾಗದಲ್ಲಿ ಚಳಿ ತುಸು ಹೆಚ್ಚಾಗಿದೆ.