ಹೆಚ್ಚಿಗೆ ಪಡೆದ 1 ರೂಪಾಯಿಯನ್ನು ಅಪಘಾತ ವಿಮೆಗೆ ಬಳಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ಅಪಘಾತ ವಿಮೆಗೆ ಬಳಸಲು 1 ಲಕ್ಷದಿಂದ 10 ಲಕ್ಕಕ್ಕೆ ಏರಿಕೆ ಮಾಡಿದ್ದಾರೆ. 50 ರೂ.ನಿಂದ 99 ರೂ.ವರೆಗಿನ ಮುಖ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 1 ರೂ. ಪಡೆದುಕೊಳ್ಳಲಾಗುತ್ತಿದೆ. 

ಬೆಂಗಳೂರು(ಜ.09): ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರದಲ್ಲಿ ಒಂದು ರೂ. ಹೆಚ್ಚಳವಾಗಿದೆ. ಹೌದು, ಜ.1 ರಿಂದಲೇ ಟಿಕೆಟ್ ದರದಲ್ಲಿ ಒಂದು ರೂ. ಹೆಚ್ಚಿಸಲಾಗಿದೆ. 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸುವ ಪ್ರಯಾಣಿಕರಿಂದ 1 ರೂಪಾಯಿ ಹೆಚ್ಚಿನ ದರ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. 

ಹೆಚ್ಚಿಗೆ ಪಡೆದ 1 ರೂಪಾಯಿಯನ್ನು ಅಪಘಾತ ವಿಮೆಗೆ ಬಳಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ಅಪಘಾತ ವಿಮೆಗೆ ಬಳಸಲು 1 ಲಕ್ಷದಿಂದ 10 ಲಕ್ಕಕ್ಕೆ ಏರಿಕೆ ಮಾಡಿದ್ದಾರೆ. 50 ರೂ.ನಿಂದ 99 ರೂ.ವರೆಗಿನ ಮುಖ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 1 ರೂ. ಪಡೆದುಕೊಳ್ಳಲಾಗುತ್ತಿದೆ. 

ಸಾರಿಗೆ ಸಚಿವರೇ ಇಲ್ನೋಡಿ... ನಮ್ಮ ಭದ್ರತೆಗಾಗಿ ಮರಕಮದಿನ್ನಿ ಗ್ರಾಮಕ್ಕೊಂದು ಬಸ್‌ ಬಿಡಿ: ವಿದ್ಯಾರ್ಥಿನಿಯರ ಮನವಿ!

100 ರೂ. ಹಾಗೂ ಹೆಚ್ಚಿನ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 2 ರೂ.ನಂತೆ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. ಅಪಘಾತ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳಲಾಗುತ್ತಿದೆ. 

ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್‌ಗೆ ಸಂಗ್ರಹವಾದ ಹಣ ವರ್ಗಾವಣೆಯಾಗಲಿದೆ. ಬಸ್‌ನಲ್ಲಿ‌ ಪ್ರಯಾಣಿಸುವ ವೇಳೆ ದುರದೃಷ್ಟವಶಾತ್ ಪ್ರಯಾಣಿಕರು ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ದೊರೆಯಲಿದೆ. ಹೀಗಾಗಿ ಪ್ರಯಾಣಿಕರಿಂದ 1 ರೂ. ಹೆಚ್ಚಿಗೆ ಸಂಗ್ರಹ ಮಾಡಲಾಗುತ್ತಿದೆ. ಈ ಹಿಂದೆ 100 ರೂ. ಮುಖಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 1 ರೂ. ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆ ಮಾಡಲಾಗುತ್ತಿತ್ತು.