Asianet Suvarna News Asianet Suvarna News

ಆದಾಯ ತೆರಿಗೆ ಬಾಕಿ ಉಳಿಸಿಕೊಂಡವರಿಗೊಂದು ಸಂತಸದ ಸುದ್ದಿ..!

ಎಷ್ಟೇ ವರ್ಷಗಳು ಬಾಕಿ ಮೊತ್ತವಿದ್ದರೂ ಆದಾಯ ತೆರಿಗೆ ಇಲಾಖೆಗೆ ಪಾವತಿಸುವಂತೆ ವಿನಾಯಿತಿ| ಶಾಶ್ವತವಾಗಿ ಡಿಸ್ಪ್ಯೂಟ್‌ಗಳಿಗೆ ವಿನಾಯಿತಿ ನೀಡಿದ ಆದಾಯ ತೆರಿಗೆ ಇಲಾಖೆ| ಹೆಚ್ಚಿನ ಬಡ್ಡಿ ಹಾಗೂ ಫೈನ್‌ಗಳಿಗೆ ಕಂಪ್ಲೀಟ್ ವಿನಾಯಿತಿ| 

Income Tax Department Announced Offer to those not Pay Property Tax grg
Author
Bengaluru, First Published Dec 26, 2020, 11:00 AM IST

ಬೆಂಗಳೂರು(ಡಿ.26): ಬಾಕಿ ಉಳಿಸಿಕೊಂಡಿರುವ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಸಂತಸದ ಸುದ್ದಿಯೊಂದು ಬಂದಿದೆ. ಹೌದು, ವಿವಾದ್ ಸೇ ವಿಶ್ವಾಸ್ ಸೆಮಿನಾರ್‌ನ ಅಡಿ ಬಾಕಿದಾರರಿಗೆ ಆಫರ್‌ವೊಂದನ್ನ ನೀಡಿದೆ. 

ಬಾಕಿ ಉಳಿಸಿಕೊಂಡಿರುವ ಆದಾಯ ತೆರಿಗೆಗೆ ಯಾವುದೇ ವಿವಾದ ವಿಲ್ಲದೆ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಎಷ್ಟೇ ವರ್ಷಗಳು ಬಾಕಿ ಮೊತ್ತವಿದ್ದರೂ ಆದಾಯ ತೆರಿಗೆ ಇಲಾಖೆಗೆ ಪಾವತಿಸುವಂತೆ ವಿನಾಯಿತಿ ನೀಡಲಾಗಿದೆ. ಬಾಕಿ ಪಾವತಿಸುವವರ ವಿರುದ್ಧ ಯಾವುದೇ ದೂರು ದಾಖಲಿಸುವುದಿಲ್ಲ ಎಂದು ಗೋವಾ ಹಾಗೂ ಕರ್ನಾಟಕ ಮುಖ್ಯ ಆಯುಕ್ತ ಡಿಸಿ ಪಟ್ಟಾರಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. 

Income Tax Department Announced Offer to those not Pay Property Tax grg

ತೆರಿಗೆ ಬಾಕಿ ಉಳಿಸಿಕೊಂಡ್ರೆ ಆಸ್ತಿ ಮುಟ್ಟುಗೋಲು

ವಿವಾದ್ ಸೇ ವಿಶ್ವಾಸ್ ಸೆಮಿನಾರ್‌ನ ಅಡಿ ಹೆಚ್ಚಿನ ಬಡ್ಡಿ ಹಾಗೂ ಫೈನ್‌ಗಳಿಗೆ ಕಂಪ್ಲೀಟ್ ವಿನಾಯಿತಿ ಸಿಗಲಿದೆ. ಈ ಮೂಲಕ ಆದಾಯ ತೆರಿಗೆ ಇಲಾಖೆ ಶಾಶ್ವತವಾಗಿ ಡಿಸ್ಪ್ಯೂಟ್‌ಗಳಿಗೆ ವಿನಾಯಿತಿ ನೀಡಿದೆ.  ತೆರಿಗೆ ಪಾವತಿದಾರರು ವಿವಾದಿತ ತೆರಿಗೆ ಪಾವತಿಸುವ ಮೂಲಕ ಆದಾಯ ತೆರಿಗೆ ಇಲಾಖೆಯೊಂದಿಗೆ ತಮ್ಮ ತೆರಿಗೆ ವಿವಾದಗಳನ್ನು ಕೊನೆಗೊಳಿಸಲು ಮತ್ತು ಬಡ್ಡಿ ದಂಡವನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯಬಹುದಾಗಿದೆ. ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಹಾಯ ಮಾಡಲು ವಿವಾದ ವಿವಾದ ಸೆ ವಿಶ್ವಾಸ್‌ ಯೋಜನೆಯನ್ನು ಪರಿಚಯಿಸಲಾಗಿದೆ. ಅರ್ಹ ತೆರಿಗೆ ಪಾವತಿದಾರರು www.incometaxindiafiling.gov.in ವೆಬ್‌ಸೈಟ್‌ನಲ್ಲಿ ಫಾರ್ಮ್‌ 1, ಫಾರ್ಮ್‌  2 ಆನ್‌ಲೈನ್‌ನಲ್ಲಿ ವಿವಾದ್‌ ಸೆ ವಿಶ್ವಾಸ್‌ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. 
 

Follow Us:
Download App:
  • android
  • ios