Asianet Suvarna News Asianet Suvarna News

ಬಡವರ ಉದ್ಧಾರವೇ ನೈಜ ರಾಜಕಾರಣ; ಕೋಟ ಶ್ರೀನಿವಾಸ್‌ ಪೂಜಾರಿ

  • ನಾಗರಭಾವಿಯಲ್ಲಿ ನೂತನ ಕನಕ ಭವನ ಲೋಕಾರ್ಪಣೆ
  • - ಮುಖ್ಯಮಂತ್ರಿ ನೇತೃತ್ವದಲ್ಲಿ ಮುಂದಿನ ಒಂದು ತಿಂಗಳಲ್ಲಿ ಶ್ರೀಮಠಕ್ಕೆ ಹಸ್ತಾಂತರ: ಸಚಿವ ವಿ.ಸೋಮಣ್ಣ
Inauguration of the new Kanaka Bhavan at Nagarabhavi at bengaluru  rav
Author
Bengaluru, First Published Aug 22, 2022, 10:37 AM IST

ಬೆಂಗಳೂರು (ಆ.22) : ಆರೋಗ್ಯವಂತ ಸಮಾಜ ಕಟ್ಟುವುದು ಮತ್ತು ಬಡವರ ಉದ್ಧಾರಕ್ಕಾಗಿ ಕೆಲಸ ಮಾಡುವುದೇ ನಿಜವಾದ ರಾಜಕಾರಣ. ಶಾಸಕರಾಗಿ, ಸಚಿವರಾಗಿ ವಿ.ಸೋಮಣ್ಣ ಕ್ಷೇತ್ರಾಭಿವೃದ್ಧಿಗೆ ಕಂಕಣ ಕಟ್ಟಿದುಡಿಯುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರ್‌(Shrinivas Poojari) ಶ್ಲಾಘಿಸಿದರು. ಭಾನುವಾರ ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆ ಅಡಿಯಲ್ಲಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಂದ್ರಲೇಔಟ್‌(Chandra Layout)ನಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಭವನ(Kanaka bhavana) ಲೋಕಾರ್ಪಣೆ ಮತ್ತು ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೃಹ ಮಂಡಳಿಯಿಂದ ಈ ವರ್ಷ 50,000 ನಿವೇಶನ: ಸಚಿವ ಸೋಮಣ್ಣ

ಕೊರೋನಾ(Coronja) ಕಾರಣಗಳಿಂದ ಕಳೆದ ಎರಡೂವರೆ ವರ್ಷದಲ್ಲಿ ಮನೆಗಳನ್ನು ಹಂಚಿಕೆ ಮಾಡಿರಲಿಲ್ಲ. ಆದರೆ ವಸತಿ ಸಚಿವ ವಿ.ಸೋಮಣ್ಣ(Minister V.Somanna) ಅವರು ಪ್ರತಿ ಗ್ರಾಮ ಪಂಚಾಯಿತಿಗೆ ನೂರು ಮನೆಗಳನ್ನು ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಡವರ ಮನೆಯನ್ನು ಕಟ್ಟಿದ ಯಾರಾದರೊಬ್ಬ ಮಂತ್ರಿ ಇದ್ದರೆ ಅದು ಸೋಮಣ್ಣ ಮಾತ್ರ. 2008ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದಾಗ ಉಡುಪಿ ಶ್ರೀಕೃಷ್ಣ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಹೋಗಿದ್ದೆ. ಸ್ವಾಮೀಜಿಯವರು ನನಗೆ ಮಂತ್ರಾಕ್ಷತೆಯನ್ನು ಕೊಟ್ಟು, ಕರ್ನಾಟಕದಲ್ಲಿ ಸೋಮಣ್ಣನಂತಹ ರಾಜಕಾರಣಿ ನೀನಾಗಬೇಕು ಎಂದು ಆಶೀರ್ವದಿಸಿದ್ದರು. ಹಾಗಾಗಿ ಸೋಮಣ್ಣ ಅವರ ಬಗ್ಗೆ ನಮಗೆ ವಿಶೇಷವಾದ ಗೌರವ, ಪ್ರೀತಿ ಇದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ನನ್ನದೇ ಆದ ದೃಷ್ಟಿಕೋನದಲ್ಲಿ ಮಾಡಿದ್ದೇನೆ. ನನ್ನ ಆರಾಧ್ಯದೈವ ಸಿದ್ದಗಂಗಾ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಅವರ ಆಶೀರ್ವಾದದ ಫಲದಿಂದ ಕನಕ ಭವನ ಲೋಕಾರ್ಪಣೆ ಮಾಡಿದ್ದೇವೆ. ದಾನಶ್ರೇಷ್ಠ ಕನಕದಾಸರ ಸ್ಮರಣೆಯಲ್ಲಿ ಕನಕ ಭವನ ನಿರ್ಮಿಸಲಾಗಿದೆ. ನಾಲ್ಕು ವರ್ಷ ಮೂರು ತಿಂಗಳ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಶರವೇಗದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಕನಕಭವನವನ್ನು ಶ್ರೀಮಠಕ್ಕೆ ಹಸ್ತಾಂತರಿಸುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.

ಆಶೀರ್ವಚನ ನೀಡಿದ ಕಾಗಿನೆಲೆ ಮಹಾಸಂಸ್ಥಾನ ಮಠದ ನಿರಂಜನಾನಂದಪುರಿ ಸ್ವಾಮೀಜಿ ಅವರು, ಕನಕ ಭವನ ಲೋಕರ್ಪಣೆ ಬಹಳ ದಿನಗಳ ಕನಸು ನನಸಾಗಿದೆ. ಜಾತ್ಯತೀತ ಸಿದ್ಧಾಂತ ಪ್ರತಿಪಾದಿಸುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ಕೂಡಲೇ ಅವರಿಗೆ ಸ್ವಜಾತಿ ಪ್ರೇಮ ಬಂದು ಬಿಡುತ್ತದೆ. ಅದರೆ ಸಚಿವ ವಿ.ಸೋಮಣ್ಣರವರು ಎಲ್ಲ ಜಾತಿ, ಜನಾಂಗದ ಪ್ರೀತಿ ಗಳಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಬಸವರಾಜ್‌, ಮುನಿರತ್ನ, ಎಂಟಿಬಿ ನಾಗರಾಜ್‌, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಮೇಯರ್‌ ಹುಚ್ಚಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಎರಡೇ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯ ಕೈಗಾರಿಕಾ ಚಿತ್ರಣವೇ ಬದಲು: ಸಚಿವ ಸೋಮಣ್ಣ

ಕುರುಬ ಸಮುದಾಯಕ್ಕೆ ಪವಿತ್ರ ಯಾತ್ರಾ ಸ್ಥಳ:

ಸಂಗೊಳ್ಳಿ ರಾಯಣ್ಣ, ಕನಕಗಿರಿ ಉದ್ಯಾನವನ, ಕನಕ ಭವನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಕುರುಬ ಸಮುದಾಯಕ್ಕೆ ಪವಿತ್ರಯಾತ್ರ ಸ್ಥಳವಾಗಿದೆ ಎಂದು ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು. ದೈವ ಸಂಕಲ್ಪ ಇದ್ದಾಗ ಮಾತ್ರ ಪುಣ್ಯ ಕೆಲಸಗಳನ್ನು ಮಾಡಲು ಸಾಧ್ಯ. ಬೀರೇಶ್ವರನ ಕೃಪೆಯಿಂದ ಕನಕ ಭವನ ಉದ್ಘಾಟನೆಯಾಗಿದೆ. ನುಡಿದಂತೆ ನಡೆವ, ನಡೆದಂತೆ ನುಡಿವ ಸಚಿವ ವಿ.ಸೋಮಣ್ಣ ಅವರ ಕೆಲಸವನ್ನು ಮರೆಯುವ ಹಾಗಿಲ್ಲ ಎಂದರು.

Follow Us:
Download App:
  • android
  • ios