'ಆಗಸ್ಟ್‌ನಲ್ಲಿ ಕೊರೋನಾ ತಾರಕಕ್ಕೆ: ಬೆಂಗಳೂರಿನಲ್ಲಿ 40000 ಕೇಸ್‌!'

ಆಗಸ್ಟ್‌ಗೆ 40000 ಕೇಸ್‌!| ಬೆಂಗಳೂರಿನಲ್ಲಿ ಒಂದೂವರೆ ತಿಂಗಳಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆ| ಡಾ| ಸುದರ್ಶನ ಬಲ್ಲಾಳ್‌ ಎಚ್ಚರಿಕೆ|  ಕೋವಿಡ್‌ ಬಂದರೆ ಜೀವನ ಅಂತ್ಯವಲ್ಲ

In August Covid Cases May Go High 40000 Cases may register in Bengaluru Says Dr Sudarshan Ballal

ಬೆಂಗಳೂರು(ಜು.02): ಮುಂದಿನ ಒಂದೂವರೆ ತಿಂಗಳಲ್ಲಿ 40 ಸಾವಿರ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಮಣಿಪಾಲ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುದರ್ಶನ್‌ ಬಲ್ಲಾಳ್‌ ಹೇಳಿದ್ದಾರೆ.

ಕೋವಿಡ್‌ ಲಕ್ಷಣ ಇರುವವರು ಆಸ್ಪತ್ರೆಗೆ ತೆರಳುವ ಅಗತ್ಯ ಇಲ್ಲ. ಮನೆಯಲ್ಲಿಯೇ ಅವರನ್ನು ನೋಡಿಕೊಂಡು ಚಿಕಿತ್ಸೆ ನೀಡಬಹುದು. ಆಗ ಬಿ ಮತ್ತು ಸಿ ಲಕ್ಷಣ (ಮಧ್ಯಮ ಮತ್ತು ತೀವ್ರ ರೋಗ ಲಕ್ಷಣ) ಇರುವವರಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಾಗಲಿವೆ. ಮಾಧ್ಯಮಗಳು ಜನರನ್ನು ಹೆದರಿಸುವ ಕೆಲಸ ಮಾಡಬಾರದು. ಕೋವಿಡ್‌ ಬಂದರೆ ಜೀವನ ಅಂತಿಮವಲ್ಲ. ರೋಗ ಲಕ್ಷಣ ಇಲ್ಲದವರು ಆಸ್ಪತ್ರೆಗೆ ಬಂದು ದಾಖಲಾಗುವ ಅಗತ್ಯ ಇಲ್ಲ. ಅವರಿಗೆ ಹೋಂ ಐಸೋಲೇಷನ್‌ ಮೂಲಕವೇ ವಾಸಿ ಮಾಡಬಹುದು ಎಂದು ಜನತೆಗೆ ಆತ್ಮಸ್ಥೈರ್ಯ ತುಂಬಿದರು.

7ರಿಂದ ಸರ್ಕಾರದಿಂದಲೇ ಲಾಕ್‌ಡೌನ್? ಸ್ವಯಂ ಲಾಕ್‌ಡೌನ್‌ ನಿರ್ಧಾರಕ್ಕೆ ತಿಲಾಂಜಲಿ!

ಕೋವಿಡ್‌ ಬಂದ ಮಾತ್ರಕ್ಕೆ ಜೀವ ಅಂತ್ಯವಾಗುವುದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕೊರೋನಾದಿಂದ ದೂರ ಇರಬಹುದು. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದನ್ನು ಗಮನಿಸಿದರೆ ಮುಂದಿನ ಒಂದೂವರೆ ತಿಂಗಳಲ್ಲಿ 40 ಸಾವಿರ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios