*  ಜನಪ್ರತಿನಿಧಿ, ಮುಖಂಡರು, ಹೋರಾಟಗಾರರ ದುಂಡು ಮೇಜಿನ ಸಭೆ*  ಅಂದು ಮುಂದಿನ ಹೋರಾಟದ ದಿನಾಂಕ ನಿಗದಿ*   ಅಧಿವೇಶನ ಮುಗಿವ ಒಳಗೆ ಉತ್ತರಿಸಿ 

ಬೆಂಗಳೂರು(ಮಾ.12):  ಪಂಚಮಸಾಲಿ(Panchamasali) ಸಮುದಾಯಕ್ಕೆ 2 ‘ಎ’ ಮೀಸಲಾತಿ(2A Reservation) ನೀಡಬೇಕೆಂದು ಆಗ್ರಹಿಸಿ ಮಾ.15 ರಂದು ಜನಪ್ರತಿನಿಧಿಗಳು, ಮುಖಂಡರು, ಹೋರಾಟಗಾರರ ದುಂಡು ಮೇಜಿನ ಸಭೆ ಕರೆದಿದ್ದು, ಮುಂದಿನ ಹೋರಾಟಕ್ಕೆ ಚಾಲನೆ ನೀಡುವ ದಿನಾಂಕ ನಿಗದಿ ಮಾಡಲಾಗುವುದು ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ(Jaya Mrutunjaya Swamiji) ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೂ ಪಾದಯಾತ್ರೆ(Padayatra) ನಡೆಸಿ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಿ ಹಕ್ಕೊತ್ತಾಯ ಮಂಡಿಸಲಾಗಿತ್ತು. ಬಳಿಕ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರಂತರ ಧರಣಿ ಹಮ್ಮಿಕೊಂಡಿದ್ದಾಗ ಮೀಸಲಾತಿ ನೀಡುವುದಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ(BS Yediyurappa) ಅವರು 2021 ರ ಮಾರ್ಚ್‌ 15 ರಂದು ಸದನದಲ್ಲೇ ಹೇಳಿಕೆ ನೀಡಿದ್ದರು ಎಂದು ಸ್ಮರಿಸಿದರು.

Third Panchamasali Peetha: 'ಬಿಎಸ್‌ವೈ ಪಂಚಮಸಾಲಿ ವಿರೋಧಿ ಎಂದು ಬಿಂಬಿಸಿದರು'

ಸೆಪ್ಟೆಂಬರ್‌ 15 ರೊಳಗೆ ಮೀಸಲಾತಿ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ನಂತರ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮುಖ್ಯಮಂತ್ರಿಯಾದರು. ಬಜೆಟ್‌ ಅಧಿವೇಶನದೊಳಗೆ ಮೀಸಲಾತಿ ನೀಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರೂ ಮಾತು ಕೊಟ್ಟಿದ್ದರು. ಆದರೆ ಇನ್ನೂ ಮೀಸಲಾತಿ ಸಿಗದಿರುವುದರಿಂದ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲು ದುಂಡುಮೇಜಿನ ಸಭೆ ಕರೆಯಲಾಗಿದೆ. ಸಮುದಾಯದ ಶಾಸಕರಿಗೂ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.

ಮೂಗಿಗೆ ತುಪ್ಪ ಸವರಬೇಡಿ:

ಯಡಿಯೂರಪ್ಪ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸುವ ಭರವಸೆಯಿದೆ. ಮೊದೆಲೆಲ್ಲಾ ನಾವೇ ಮುಖ್ಯಮಂತ್ರಿಗಳ ಮನೆಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಆದರೆ ಈಗ ಮುಖ್ಯಮಂತ್ರಿಗಳೇ ನಮ್ಮ ಮನೆಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು. ಪಂಚ ಸೇನೆ ರಾಜ್ಯಾಧ್ಯಕ್ಷ ಬಿ.ಎಸ್‌.ಪಾಟೀಲ, ಮುಖಂಡ ಮಲ್ಲೇಶ ಅಮ್ಮನಪುರ ಮತ್ತಿತರರು ಉಪಸ್ಥಿತರಿದ್ದರು.

ಅಧಿವೇಶನ ಮುಗಿವ ಒಳಗೆ ಉತ್ತರಿಸಿ: ಕಾಶಪ್ಪನವರ ಗಡುವು

ಬೆಂಗಳೂರು: ‘ಪಂಚಮಸಾಲಿ ಮೀಸಲಿಗೆ ಸಂಬಂಧಿಸಿದಂತೆ ನಾವು ಸರ್ಕಾರಕ್ಕೆ ಗಡುವು ನೀಡಿಲ್ಲ. ಸರ್ಕಾರವೇ ಗಡುವು ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ‘ನಾನು ವಚನಭ್ರಷ್ಟಅಲ್ಲ’ ಎಂದು ಹೇಳುತ್ತಾರೆ. ಆದರೆ ಅವರು ಕೊಟ್ಟಮಾತು ತಪ್ಪಿದ್ದಾರೆ. ಯಡಿಯೂರಪ್ಪ ಅವರಿಗೆ ಸಮುದಾಯದ ಶಾಪ ತಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಅಧಿವೇಶನದೊಳಗೆ(Budget Session) ಮೀಸಲಾತಿ ನೀಡುವುದಾಗಿ ಹೇಳಿದ್ದರು. ಆದ್ದರಿಂದ ಅಧಿವೇಶನ ಮುಗಿಯುವುದರೊಳಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು’ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಆಗ್ರಹಿಸಿದರು.

‘ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ ನಡೆಯಲಿದೆ. ಏನಾದರೂ ಅನಾಹುತವಾದರೆ ಅದಕ್ಕೆ ಸರ್ಕಾರವೇ(Government of Karnataka) ಹೊಣೆಯಾಗಲಿದೆ. ಅಧಿಕಾರ ಸಿಕ್ಕ ಮೇಲೆ ಸಚಿವ ಮುರುಗೇಶ್‌ ನಿರಾಣಿ(Murugesh Nirani) ಶಾಂತವಾಗಿದ್ದಾರೆ. ಅವರ ರಾಜಕೀಯಕ್ಕಾಗಿ ಮತ್ತೊಂದು ಪೀಠ ಸ್ಥಾಪನೆ ಮಾಡಿದ್ದಾರೆ. ಹರಿಹರ ಪೀಠ ಜನರ ಪೀಠ ಅಲ್ಲ’ ಎಂದು ಹೇಳಿದರು.

Kalaburagi: ಪಂಚಮಸಾಲಿ ಮೂರನೇ ಪೀಠ ಯಾರ ವಿರುದ್ಧವಾಗಿ ಪ್ರಾರಂಭವಾಗುತ್ತಿಲ್ಲ: ಸಚಿವ ನಿರಾಣಿ!

‘ಮೀಸಲಾತಿಗೆ ಅವಸರ ಬೇಡ ಎಂದು ಹರಿಹರದ ವಚನಾನಂದ ಶ್ರೀಗಳು ನೀಡಿರುವ ಹೇಳಿಕೆ ಖಂಡನೀಯ. ಅವರಿಗೆ ಮೀಸಲಾತಿ ಬೇಡವಾದರೆ ಸುಮ್ಮನೆ ಮಠದಲ್ಲಿ ಜಾತ್ರೆ, ಆರತಿ ಮಾಡುತ್ತಾ ಕುಳಿತುಕೊಳ್ಳಲಿ’ ಎಂದು ವಿಜಯಾನಂದ ಕಾಶಪ್ಪನವರ್‌ ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ 2ಎ ಮೀಸಲಿಗೆ ಹಿಂದುಳಿದ ವರ್ಗದ ವಿರೋಧ

ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ‘ಎ’ ಗೆ ಸೇರ್ಪಡೆ ಮಾಡುವ ಸಂಬಂಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದ್ದರಿಂದ ಸಮಗ್ರ ಅಧ್ಯಯನ ನಡೆಸಿ ನಿಷ್ಪಕ್ಷಪಾತ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ(Jayaprakash Hegde) ಸ್ಪಷ್ಟಪಡಿಸಿದ್ದರು. 

ದೇವರಾಜ ಅರಸು ಭವನದಲ್ಲಿ ಫೆ.15 ರಂದು ತಮ್ಮನ್ನು ಭೇಟಿ ಮಾಡಿದ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪ್ರವರ್ಗ 2 ಎ ಗೆ ಸೇರ್ಪಡೆ ಮಾಡುವಂತೆ ಆ ಸಮುದಾಯದ ಸ್ವಾಮೀಜಿಗಳು, ವಕೀಲರೂ ವಾದ ಮಂಡಿಸಿದ್ದಾರೆ. ಈಗ ನೀವು ಸೇರ್ಪಡೆ ಮಾಡಬಾರದು ಎಂದು ಮನವಿ ಮಾಡಿದ್ದೀರಿ. ಸರ್ಕಾರ ವರದಿ ಕೇಳಿದ್ದು ನಿಷ್ಪಕ್ಷಪಾತ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದರು.