Asianet Suvarna News Asianet Suvarna News

Monsoon Rain 3 ರಿಂದ 4 ದಿನ ರಾಜ್ಯದಲ್ಲಿ ಭರ್ಜರಿ ಮಳೆ!

  • ಕರ್ನಾಟಕದಲ್ಲಿ ಮುಂದಿನ 3-4 ದಿನ ಭಾರಿ ಮಳೆ
  • ಕರಾವಳಿಗೆ ಗುರುವಾರ ಅತಿ ಭಾರಿ ಮಳೆಯ ರೆಡ್‌ ಅಲರ್ಟ್
  • ಮುನ್ನಚ್ಚೆರಿಕೆ ವಹಿಸಲು ಸೂಚನೆ, ಸರ್ಕಾರದ ತಯಾರಿ
IMD warns of heavy to very heavy rainfall next 3 to 4 ays in Karnataka ckm
Author
Bengaluru, First Published May 18, 2022, 3:06 AM IST

ಬೆಂಗಳೂರು(ಮೇ.18): ರಾಜ್ಯದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಗುಡುಗು ಮಿಂಚು ಮತ್ತು ಗಾಳಿ ಸಹಿತ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಗೆ ಗುರುವಾರ ಅತಿ ಭಾರಿ ಮಳೆಯ ರೆಡ್‌ ಅಲರ್ಟ್ ನೀಡಲಾಗಿದೆ. ಕರಾವಳಿಯಲ್ಲಿ ಬುಧವಾರ ಮತ್ತು ಶುಕ್ರವಾರ, ದಕ್ಷಿಣ ಒಳನಾಡಿನಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯ ಆರೆಂಜ್‌ ಅಲರ್ಚ್‌ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮೇ 21ರವರೆಗೂ ಹೆಚ್ಚು ಮಳೆಯ ಆರೆಂಜ್‌ ಅಲರ್ಚ್‌ ನೀಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ತೇವಾಂಶ ಭರಿತ ಗಾಳಿ ಪಶ್ಚಿಮ ದಿಕ್ಕಿನಿಂದ ಪ್ರತಿ ಗಂಟೆಗೆ 40ರಿಂದ 60 ಕಿಮೀ ವೇಗದಲ್ಲಿ ಕರ್ನಾಟಕ ಮತ್ತು ಕೇರಳ ತೀರಕ್ಕೆ ಬೀಸುತ್ತಿರುವುದು ಮತ್ತು ಲಕ್ಷದ್ವೀಪ ಪ್ರದೇಶದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ತಮಿಳುನಾಡಿನ ಕರಾವಳಿ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಮಧ್ಯಪ್ರದೇಶದಿಂದ ಕರ್ನಾಟಕದ ಒಳನಾಡಿನ ಮೂಲಕ ತಮಿಳುನಾಡಿನವರೆಗೆ ಹಬ್ಬಿರುವ ಟ್ರಫ್‌ಗಳ ಕಾರಣದಿಂದ ಮುಂಗಾರು ಪೂರ್ವ ಮಳೆ ಬಿರುಸು ಪಡೆದುಕೊಂಡಿದೆ.

Monsoon Rain ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

ಕರಾವಳಿಯಲ್ಲಿ ಬುಧವಾರಕ್ಕೆ ನೀಡಲಾಗಿದ್ದ ರೆಡ್‌ ಅಲರ್ಚ್‌ ಆರೆಂಜ್‌ ಅಲರ್ಚ್‌ ಆಗಿ ಬದಲಾಗಿದ್ದು ಗುರುವಾರಕ್ಕೆ ರೆಡ್‌ ಅಲರ್ಚ್‌ ನೀಡಲಾಗಿದೆ. ಬುಧವಾರ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ, ಪಶ್ಚಿಮ ಘಟ್ಟದ ತಪ್ಪಲಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತು ್ತದಕ್ಷಿಣ ಒಳನಾಡಿನ ದಾವಣಗೆರೆ, ಬಳ್ಳಾರಿ ಚಿತ್ರದುರ್ಗ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಗುರುವಾರ ಕರಾವಳಿ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಶುಕ್ರವಾರ ಮತ್ತು ಶನಿವಾರವೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಬೇಸಗೆ ಮಳೆ ಅಬ್ಬರಿಸಲಿದ್ದು, ಶನಿವಾರದವರೆಗೆ ಹಳದಿ ಅಲರ್ಚ್‌ ನೀಡಲಾಗಿದೆ.

ಮಳೆಯಿಂದ ತಾಪಮಾನ ಇಳಿಕೆ:
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮೇ ತಿಂಗಳ ಬಿಸಲು ಕಾವು ಕಳೆದುಕೊಂಡಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

ಕೇರಳದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ: ರೆಡ್‌ ಅಲರ್ಟ್‌ ಪ್ರಕಟ

ಟಿ.ನರಸಿಪುರದಲ್ಲಿ 12 ಸೆಂ.ಮೀ ಮಳೆ:
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಿತ್ತು. ಮೈಸೂರಿನ ಟಿ.ನರಸೀಪುರದಲ್ಲಿ 12 ಸೆಂ.ಮೀ, ದಕ್ಷಿಣ ಕನ್ನಡದ ಬಂಟ್ವಾಳ, ಮೂಡಬಿದಿರೆ, ಮೈಸೂರಿನ ನಾಗನಹಳ್ಳಿ 11 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ, ಮೈಸೂರು 9 ಸೆಂ.ಮೀ, ಹಾವೇರಿಯ ಕೆಲವರಕೊಪ್ಪ, ಮಂಡ್ಯದ ಶ್ರೀರಂಗಪಟ್ಟಣ, ಪಾಂಡವಪುರ, ಕೃಷ್ಣರಾಜಸಾಗರ, ಶಿವಮೊಗ್ಗದ ಕಾಟಿಕೆರೆ ಮತ್ತು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 9 ಸೆಂಮೀ ಮಳೆಯಾಗಿದೆ.

Follow Us:
Download App:
  • android
  • ios