ಯಾದಗಿರಿ: ಬಡ ಮಕ್ಕಳ ಹೊಟ್ಟೆ ಸೇರಬೇಕಿದ್ದ ಮೊಟ್ಟೆ ಕಾಳಸಂತೇಲಿ ಮಾರಾಟ! ಪ್ರಶ್ನಿದವರಿಗೇ ದಬಾಯಿಸ್ತಾಳಂತೆ ಶಿಕ್ಷಕಿ!

ಬಡಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುತ್ತಿದೆ. ಜೊತೆಗೆ ಗರ್ಭಿಣಿಯರಿಗೂ ಮೊಟ್ಟೆ ನೀಡಲಾಗುತ್ತದೆ. ಆದರೆ ಮಕ್ಕಳು, ಗರ್ಭಿಣಿಯರಿಗೆ ನೀಡಬೇಕಾಗಿದ್ದ ಮೊಟ್ಟೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Illegal sale of Anganwadi eggs, Yadgiri district, Mavinamatti village, viral video rav

ಯಾದಗಿರಿ (ನ.29): ಬಡಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುತ್ತಿದೆ. ಜೊತೆಗೆ ಗರ್ಭಿಣಿಯರಿಗೂ ಮೊಟ್ಟೆ ನೀಡಲಾಗುತ್ತದೆ. ಆದರೆ ಮಕ್ಕಳು, ಗರ್ಭಿಣಿಯರಿಗೆ ನೀಡಬೇಕಾಗಿದ್ದ ಮೊಟ್ಟೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮಹಾದೇವಿ ಪಾಟೀಲ್, ಮೊಟ್ಟೆಗಳನ್ನ ರಾಜಾರೋಷವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಅಂಗನವಾಡಿ ಶಿಕ್ಷಕಿ. ಕಳೆದ ಕೆಲವು ತಿಂಗಳುಗಳಿಂದ ಮೊಟ್ಟೆ, ಪೌಷ್ಟಿಕ ಪದಾರ್ಥಗಳನ್ನು ಅಂಗಡಿಗೆ ಮಾರಾಟ ಮಾಡುತ್ತಿದ್ದಾರೆಂದು ಆರೋಪ ಕೇಳಿಬಂದಿತ್ತು. ಆದರೆ ಇದೀಗ ಅಂಗನವಾಡಿ ಶಿಕ್ಷಕಿ ಮೊಟ್ಟೆ ಸಮೇತ ಸಿಕ್ಕಿಬಿದ್ದಿದ್ದಾರೆ.

Kolar: ಅಂಗನವಾಡಿ ಕಾರ್ಯಕರ್ತೆಯಿಂದ ರಾಕ್ಷಸಿ ಕೃತ್ಯ: ಮಗುವಿಗೆ ಬೆಂಕಿಯಿಂದ ಸುಟ್ಟ ಸಹಾಯಕಿ!

ಸರ್ಕಾರದಿಂದ ಮೊಟ್ಟೆ ಬರ್ತಾ ಇದ್ಧಹಾಗೆ ನೇರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಳಂತೆ ಶಿಕ್ಷಕಿ. ಗ್ರಾಮದಲ್ಲಿರುವ ತಮ್ಮದೇ ಕಿರಾಣಿ ಅಂಗಡಿಗೂ ಅಂಗನವಾಡಿ ಮೊಟ್ಟೆಗಳನ್ನ ಸರಬರಾಜು ಮಾಡುತ್ತಿರುವ ಶಿಕ್ಷಕಿ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಗ್ರಾಮಸ್ಥರನ್ನೇ ಬೆದರಿಸ್ತಾಳಂತೆ. ಹಿಂದಿನಿಂದಲೂ ಮೊಟ್ಟೆಗಳನ್ನ ತಮ್ಮದೇ ಕಿರಾಣಿ ಅಂಗಡಿಗೆ ಮಾರಾಟ ಮಾಡುತ್ತಿದ್ದಾರೆ. ಈ ಅಕ್ರಮದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ಈ ಬಾರಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆಯೇ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಗ್ರಾಮಸ್ಥರು.

ಅಂಗನವಾಡಿ ಕೇಂದ್ರದಲ್ಲಿ ಸಿಲಿಂಡರ್ ಖಾಲಿಯಾಗಿದೆ. ಮಕ್ಕಳಿಗೆ ಮೊಟ್ಟೆ ಇಲ್ಲ, ಪೌಷ್ಟಿಕ ಆಹಾರವೂ ಇಲ್ಲ. ಶಾಲೆಯಲ್ಲಿ ಕುಳಿತು ಉಪವಾಸ ಬರುತ್ತಿರುವ ಬಡಮಕ್ಕಳು. ಇತ್ತ ಊರಿನಲ್ಲಿ ಅನೇಕ ಗರ್ಭಿಣಿ ಮಹಿಳೆಯರಿಗೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅವರಿಗೂ ಮೊಟ್ಟೆ ವಿತರಣೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಕ್ಕಳಿಗೆ ಮೋಸ ಮಾಡುತ್ತಿರುವ ಅಂಗನವಾಡಿ ಶಿಕ್ಷಕಿಯನ್ನ ಅಮಾನತ್ತು ಮಾಡುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ: ಕೇಂದ್ರ ಸಚಿವ ಸೋಮಣ್ಣ

ಸರ್ಕಾರ ಮೊಟ್ಟೆ ಬಗ್ಗೆ ಅಂಕಿ-ಸಂಖ್ಯೆ ಹೇಳಿದ್ರೆ ಸಾಲದು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಡಮಕ್ಕಳಿಗೆ ವಿತರಿಸುತ್ತಿರುವ ಮೊಟ್ಟೆ ನಿಜಕ್ಕೂ ಹಸಿದ ಮಕ್ಕಳ ಹೊಟ್ಟೆ ಸೇರುತ್ತಿದೆಯಾ? ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯಾ ಎಂಬುದರ ಮೇಲೆಯೂ ನಿಗಾ ಇಡಬೇಕು. ಇಲ್ಲದಿದ್ರೆ ಎಲ್ಲ ಕಲ್ಯಾಣ ಯೋಜನೆಗಳು ಪ್ರಯೋಜನಕ್ಕೆ ಬಾರದಂತಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ.

Latest Videos
Follow Us:
Download App:
  • android
  • ios